ನವದೆಹಲಿ: ನಿಮ್ಮ ದೈನಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಿವಾಹಿತ ಪುರುಷರು ತಮ್ಮ ಆಹಾರದಲ್ಲಿ ಕೆಲವು ವಸ್ತುಗಳನ್ನು ಸೇರಿಸುವುದು ಮುಖ್ಯ. ಇವುಗಳು ಟೆಸ್ಟೋಸ್ಟೆರಾನ್ ಹಾರ್ಮೋನ್ ಹೆಚ್ಚಿಸುತ್ತವೆ ಮತ್ತು ಈ ವಸ್ತುಗಳ ಸೇವನೆಯು ಪುರುಷರಲ್ಲಿ ಶಕ್ತಿ ಹೆಚ್ಚಿಸುತ್ತವೆ. ತಜ್ಞರ ಪ್ರಕಾರ ಪ್ರೋಟೀನ್ ಭರಿತ ವಸ್ತುಗಳನ್ನು ತಿನ್ನುವುದು ನಿಮಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇದು ಶಕ್ತಿಯ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಇದಲ್ಲದೆ ವಿಟಮಿನ್ ಬಿ(Vitamin B), ವಿಟಮಿನ್ ಇ ಮತ್ತು ಸತುವು ಸಮೃದ್ಧವಾಗಿರುವ ಆಹಾರವನ್ನು ಸೇವಿಸುವು ನಿಮ್ಮ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.


COMMERCIAL BREAK
SCROLL TO CONTINUE READING

 ಬಾಳೆಹಣ್ಣು


ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ6 ಸಮೃದ್ಧವಾಗಿದೆ. ಬಾಳೆಹಣ್ಣಿನ(Banana) ನಿಯಮಿತ ಸೇವನೆಯು ಪುರುಷರಲ್ಲಿ ಲೈಂಗಿಕ ಸಮಸ್ಯೆ(Men Sexual Health)ಗಳನ್ನು ನಿವಾರಿಸುತ್ತದೆ.


ಇದನ್ನೂ ಓದಿ: Winter Diet: ಚಳಿಗಾಲದಲ್ಲಿ ಈ ಹೆಚ್ಚಿನ ಕ್ಯಾಲೋರಿ ಆಹಾರವನ್ನು ತಿನ್ನದಿದ್ದರೆ ಒಳಿತು


ಪಾಲಕ್ ಸೊಪ್ಪು


ಪಾಲಕ್ ಸೊಪ್ಪಿನ ಸೇವನೆಯು ಸಹ ನಿಮಗೆ ಪ್ರಯೋಜನಕಾರಿಯಾಗಿದೆ. ಹಸಿರು ಎಲೆಗಳಲ್ಲಿ ಕಬ್ಬಿಣಂಶವು ಹೇರಳವಾಗಿ ಕಂಡುಬರುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ.


ಬೆಳ್ಳುಳ್ಳಿ


ಬೆಳ್ಳುಳ್ಳಿ(Garlic)ಯಲ್ಲಿ ವಿಟಮಿನ್-ಸಿ, ವಿಟಮಿನ್-ಬಿ 6, ರಂಜಕ, ಮ್ಯಾಂಗನೀಸ್, ಸತು, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶವಿದೆ. ಈ ಎಲ್ಲಾ ಅಂಶಗಳನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಬೆಳ್ಳುಳ್ಳಿ ಸೇವನೆಯಿಂದ ರಕ್ತ ಪರಿಚಲನೆ ಹೆಚ್ಚುತ್ತದೆ. ಇದು ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.


ಇದನ್ನೂ ಓದಿ: 40 ವರ್ಷದ ನಂತರ ಮಹಿಳೆಯರು ದಿನಕ್ಕೊಂದು ಮೊಟ್ಟೆ ಸೇವಿಸಿದರೆ, ಈ ಸಮಸ್ಯೆ ಎದುರಾಗುವುದೇ ಇಲ್ಲ


ಒಣ ದ್ರಾಕ್ಷಿ


ವಿವಾಹಿತ ಪುರುಷರಿಗೂ ಒಣದ್ರಾಕ್ಷಿ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ ಮತ್ತು ಪುರುಷರಲ್ಲಿ ಲೈಂಗಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೇನುತುಪ್ಪ ಮತ್ತು ಒಣದ್ರಾಕ್ಷಿಗಳನ್ನು ಸೇವಿಸಿ. ಇದರಿಂದ ತುಂಬಾ ಪ್ರಯೋಜನವಾಗಲಿದೆ.


ಒಣ ಖರ್ಜೂರ


ಒಣ ಖರ್ಜೂರ ಸೇವನೆಯು ಪುರುಷರಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ಖರ್ಜೂರದಲ್ಲಿ ಅಮೈನೋ ಆಮ್ಲಗಳಿವೆ ಮತ್ತು ಇದರ ಸೇವನೆಯು ಲೈಂಗಿಕ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ


.ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.