Mars Transit 2021: ತುಲಾ ರಾಶಿಗೆ ಮಂಗಳನ ಪ್ರವೇಶ, ಈ ಮೂರು ರಾಶಿಗಳ ಭಾಗ್ಯೋದಯ, ನಿಮ್ಮ ರಾಶಿ ಯಾವುದು?
Mars Transit 2021: ಇಂದು ಬೆಳಗ್ಗೆ 6 ಗಂಟೆ 3 ನಿಮಿಷಕ್ಕೆ ಮಂಗಳನ (Mars) ಈ ಗೋಚರ ಸಂಭವಿಸಿದೆ. ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಮಂಗಳ ಕರ್ಕ ರಾಶಿಯಲ್ಲಿ ದುರ್ಬಲ ಮತ್ತು ಮಕರ ರಾಶಿಯಲ್ಲಿ ಪ್ರಬಲ ಎಂದು ಪರಿಗಣಿಸಲಾಗುತ್ತದೆ. ಮಂಗಳನ ಈ ಗೋಚರ ಎಲ್ಲಾ ರಾಶಿಯ ಜನರನ್ನು ಪ್ರಭಾವಿತಗೊಳಿಸಲಿದೆ.
ನವದೆಹಲಿ: Mars Transit 2021 - ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿಯಾಗಿರುವ ಮಂಗಳನು (Mars Rising) ತುಲಾ ರಾಶಿಗೆ ಪ್ರವೇಶಿಸಿದ್ದಾನೆ. ಈ ಮಂಗಳ ಗೋಚರ (Mangal Gochar 2021) ನವೆಂಬರ್ 29 ರಂದು ಬೆಳಿಗ್ಗೆ 06.03 ಕ್ಕೆ ನಡೆದಿದೆ. ಸುಮಾರು ಮೂರು ತಿಂಗಳ ಹಿಂದೆ ಆಗಸ್ಟ್ 17 ರಂದು ಮಂಗಳ ಅಸ್ತನಾಗಿದ್ದ. ಜ್ಯೋತಿಷಿಗಳ ಪ್ರಕಾರ, ಯಾರ ಜಾತಕದಲ್ಲಿ ಮಂಗಳವು ಶುಭ ಸ್ಥಾನದಲ್ಲಿದೆಯೋ, ಅದು ಅವರಿಗೆ ಮಂಗಳಕರವೆಂದು ಸಾಬೀತುಪಡಿಸಲಿದೆ. ಮಂಗಳವನ್ನು ಕರ್ಕ ರಾಶಿಯಲ್ಲಿ ದುರ್ಬಲ ಮತ್ತು ಮಕರ ರಾಶಿಯಲ್ಲಿ ಪ್ರಬಲ ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ರಾಶಿಚಕ್ರದ (Zodiac Signs) ಜಾತಕದವರ ಮೇಲೆ ಮಂಗಳನ ಈ ಗೋಚರ ಪ್ರಭಾವ ಬೀರಲಿದೆ.
ಮೇಷ - ಉದ್ಯೋಗದಲ್ಲಿ ಬಡ್ತಿ, ಗೌರವ ಸಿಗಲಿದೆ. ವೈವಾಹಿಕ ಜೀವನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಂಬಂಧಿಕರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬೇಕು. ವ್ಯಾಪಾರದಲ್ಲಿ ಪ್ರಗತಿಯ ದಾರಿ ಸ್ಪಷ್ಟವಾಗಲಿದೆ.
ವೃಷಭ - ಮಂಗಳನ ಈ ಗೋಚರ ನಿಮಗೆ ವರದಾನವಾಗಿದೆ. ಕೋರ್ಟು-ಕಚೇರಿ ಪ್ರಕರಣಗಳಲ್ಲಿ ಯಶಸ್ಸು ಸಿಗಲಿದೆ. ನಿಮ್ಮನ್ನು ಕೀಳು ಮಟ್ಟದಲ್ಲಿ ನೋಡುವವರೂ ಕೂಡ ಸಹಾಯ ಮಾಡಲು ಮುಂದೆ ಬರುತ್ತಾರೆ. ಪ್ರಯಾಣ ಲಾಭದಾಯಕವಾಗಲಿದೆ. ವ್ಯವಹಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಪ್ರಯೋಜನಕಾರಿಯಾಗಲಿವೆ.
ಮಿಥುನ - ಮಕ್ಕಳ ಬಗ್ಗೆ ಕಾಳಜಿ ಇರಲಿದೆ. ನವವಿವಾಹಿತರಿಗೆ ಸಂತಾನ ಸುಖ ಪ್ರಾಪ್ತಿಯಾಗಲಿದೆ. ಕುಟುಂಬ ಸದಸ್ಯರೊಂದಿಗೆ ವಿವಾದಗಳು ಹೆಚ್ಚಾಗಬಹುದು.
ಕರ್ಕ - ಭೂ ವಿವಾದ ಕೊನೆಗೊಳ್ಳಲಿದೆ. ಮಂಗಳನ ಈ ರಾಶಿ ಪರಿವರ್ತನೆ ಕಾರು ಮತ್ತು ಮನೆಯನ್ನು ಖರೀದಿಸಲು ಮಂಗಳಕರವಾಗಿರುತ್ತದೆ. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉದ್ಯೋಗದಲ್ಲಿ ಮೇಲಾಧಿಕಾರಿಯ ಬೆಂಬಲ ಸಿಗಲಿದೆ. ಸಂಬಳ ಹೆಚ್ಚಿಸುವ ಅವಕಾಶವಿರುತ್ತದೆ.
ಸಿಂಹ - ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುವುದು. ಮಂಗಳ ಗ್ರಹದ ಸ್ಥಾನಪಲ್ಲಟ ಅನೇಕ ರೀತಿಯ ಯಶಸ್ಸಿಗೆ ಸಹಾಯ ಮಾಡುತ್ತದೆ. ಮೊಂಡುತನದ ಸ್ವಭಾವದಿಂದ ನೀವು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ.
ಕನ್ಯಾ - ಕುಟುಂಬದ ಜನರಿಂದ ಕಷ್ಟ ಸಿಗಲಿದೆ. ಭೂಮಿಗೆ ಸಂಬಂಧಿಸಿದ ಸಮಸ್ಯೆಗಳು ಇತ್ಯರ್ಥವಾಗಲಿವೆ. ಮನೆ ಅಥವಾ ವಾಹನ ಖರೀದಿಯಲ್ಲಿ ಎಚ್ಚರಿಕೆ ವಹಿಸಬೇಕು. ಈ ಗೊಚಾರದ ಸಮಯದಲ್ಲಿ ಯಾರೊಂದಿಗೂ ಜಗಳಕ್ಕಿಳಿಯಬೇಡಿ.
ಇದನ್ನೂ ಓದಿ-ಈ ಉಪವಾಸ ಆಚರಿಸುವುದರಿಂದ ಅನೇಕ ಪ್ರಯೋಜನಗಳಿವೆ: ಮೋಕ್ಷ ಪ್ರಾಪ್ತಿಗಾಗಿ ಪೂಜೆಯ ವಿಧಾನ ತಿಳಿಯಿರಿ
ತುಲಾ - ಮಂಗಳನ ಈ ಸಂಕ್ರಮಣ ಜೀವನದಲ್ಲಿ ಏರಿಳಿತಗಳನ್ನು ಉಂಟುಮಾಡುತ್ತದೆ. ವ್ಯವಹಾರದಲ್ಲಿ ಹಣಕಾಸಿನ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. ದೈನಂದಿನ ಆದಾಯ ಹೆಚ್ಚಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬೇಕು.
ವೃಶ್ಚಿಕ - ಮಂಗಳ ಸ್ಥಾನಪಲ್ಲಟದಿಂದ ಸ್ವಲ್ಪ ನಷ್ಟ ಉಂಟಾಗುವುದು. ಮಂಗಳನ ಈ ಹೊಚಾರದ ಅವಧಿಯಲ್ಲಿ ವಿವಾದಗಳನ್ನು ತಪ್ಪಿಸಬೇಕು. ಪ್ರಯಾಣದಿಂದ ಆರ್ಥಿಕ ಲಾಭ ಉಂಟಾಗಲಿದೆ. ಯಾವುದೇ ಒಂದು ಒಪ್ಪಂದ ಕುದುರುವ ಸಾಧ್ಯತೆ ಇದೆ.
ಧನು - ಈ ಸಂಕ್ರಮವು ನಿಮಗೆ ಮಂಗಳಕರವಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಯಶಸ್ಸು ಸಿಗುತ್ತದೆ. ಉದ್ಯೋಗದಲ್ಲಿ ಯಶಸ್ಸು ಕಾಣುವಿರಿ. ಸಂತಾನ ಸುಖ ಪ್ರಾಪ್ತಿಯಾಗಲಿದೆ. ಪ್ರೇಮ ಜೀವನ ಹುಳಿಯಾಗಲಿದೆ.
ಇದನ್ನೂ ಓದಿ-Cloves Health Benefits: ಲವಂಗದ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು..!
ಮಕರ - ಈ ಸಂಕ್ರಮವು ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ತರಲಿದೆ. ನೀವು ಕೆಟ್ಟ ಸಮಯದಿಂದ ಮುಕ್ತಿ ಸಿಗಲಿದೆ. ಸರ್ಕಾರಿ ಕೆಲಸಗಳು ಯಶಸ್ವಿಯಾಗಲಿವೆ. ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲ ದೊರೆಯಲಿದೆ.
ಕುಂಭ - ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯುವಿರಿ. ಮಂಗಳ ಗ್ರಹದ ಈ ಸಂಕ್ರಮವು ಕುಟುಂಬ ಜೀವನದಲ್ಲಿ ಏರಿಳಿತಗಳನ್ನು ತರುತ್ತದೆ. ನೀವು ವಿದೇಶಿ ಕಂಪನಿಯಿಂದ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ.
ಮೀನ - ಮಂಗಳನ ಈ ಗೋಚರ ನಿಮಗೆ ಆರೋಗ್ಯದ ದೃಷ್ಟಿಯಿಂದ ಉತ್ತಮ ಸಾಬೀತುಪಡಿಸುತ್ತದೆ. ಆದರೆ, ಉದ್ಯೋಗ ಅಥವಾ ವ್ಯವಹಾರದಲ್ಲಿ ನಷ್ಟ ಉಂಟಾಗುತ್ತದೆ. ಕುಟುಂಬದಲ್ಲಿ ಕಲಹಗಳು ಹೆಚ್ಚಾಗುವುದನ್ನು ಕಾಣಬಹುದು.
ಇದನ್ನೂ ಓದಿ-ಸೂರ್ಯಗ್ರಹಣಕ್ಕೆ ಇನ್ನು ತುಂಬಾ ಸಮಯವಿದೆ: ಮರೆತು ಕೂಡ ಈ ಕೆಲಸ ಮಾಡಬೇಡಿ, ದೊಡ್ಡ ನಷ್ಟವಾಗುತ್ತದೆ
(Disclaimer: ಇಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.