ಬೆಂಗಳೂರು : ಗ್ರಹಗಳ ರಾಶಿಚಕ್ರ ಬದಲಾವಣೆ, ಗ್ರಹಗಳ ಉದಯ, ಅಸ್ತ, ಮತ್ತು ಹಿಮ್ಮುಖ ಚಲನೆಗಳು ಜ್ಯೋತಿಷ್ಯದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಒಂದು ಗ್ರಹ ಅಸ್ತವಾದಾಗ ಅಥವಾ ಉದಯಿಸಿದಾಗ ಅದರ ನೇರ ಪರಿಣಾಮ ಜೀವನದ ಮೇಲೆ ಬೀಳುತ್ತದೆ. ಮಾರ್ಚ್ 14ರಂದು ಅಸ್ತವಾಗಿರುವ ಗ್ರಹಗಳ ರಾಜಕುಮಾರ ಬುಧ, ಏಪ್ರಿಲ್ 12ಕ್ಕೆ ಮತ್ತೆ ಉದಯಿಸಲಿದ್ದಾನೆ (Budha Uday). ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 12 ರ ಸಂಜೆ 7.33 ಕ್ಕೆ ಬುಧ ಉದಯವಾಗಲಿದೆ. ಹೀಗಿರುವಾಗ ಬುಧ ಗ್ರಹ ಅಸ್ತವಾಗಿರುವ ನಕಾರಾತ್ಮಕ  ಪರಿಣಾಮ ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಬೀಳುತ್ತದೆ (Budha Asta Effects). 


COMMERCIAL BREAK
SCROLL TO CONTINUE READING

ಈ ರಾಶಿಯವರು ಏಪ್ರಿಲ್ 12ರ ವರೆಗೆ ಜಾಗರೂಕರಾಗಿರಬೇಕು :
ಮೇಷ (Aries): ಈ ರಾಶಿಯ 11ನೇ ಮನೆಯಲ್ಲಿ ಬುಧ ಅಸ್ತಮಿಸಿದ್ದಾನೆ (Budha Asta Effects). 11 ನೇ ಮನೆಯನ್ನು ಆದಾಯದ ಮನೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಅಲ್ಲದೆ, ಆದಾಯದ ಮೂಲದಲ್ಲಿ ಇಳಿಕೆಯಾಗಬಹುದು. ವ್ಯವಹಾರದಲ್ಲಿ ಹಣಕಾಸಿನ ನಷ್ಟ ಕೂಡಾ  ಉಂಟುಮಾಡಬಹುದು. ಹಣ ಹೂಡಿಕೆಯಲ್ಲಿ ಎಚ್ಚರಿಕೆ ಅಗತ್ಯ. 


ಇದನ್ನೂ ಓದಿ : ಶನಿ ರಾಶಿಗೆ ಮಂಗಳನ ಪ್ರವೇಶ: ಈ 7 ರಾಶಿಯವರಿಗೆ ದೊಡ್ಡ ಸಮಸ್ಯೆಗಳು ಎದುರಾಗಲಿವೆ


ವೃಷಭ (Taurus) : ಈ ರಾಶಿಯವರಿಗೆ ಬುಧಗ್ರಹದ ಅಸ್ತ  ಶುಭಕರವೆಂದು ಪರಿಗಣಿಸಲಾಗುವುದಿಲ್ಲ. ಬುಧಗ್ರಹದ ಪ್ರಭಾವದಿಂದಾಗಿ, ಉದ್ಯೋಗ ಮತ್ತು ವೃತ್ತಿಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು (Mercury Set Effects). ಬುಧಗ್ರಹವು ಈ ರಾಶಿಯ ಜನರ ಅದೃಷ್ಟದ ಮೇಲೂ ಪರಿಣಾಮ ಬೀರುತ್ತದೆ.  ಭೂ ದಾಖಲೆಗಳಿಗೆ ಸಂಬಂಧಿಸಿದ ಕೆಲಸಗಳಲ್ಲೂ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರದಲ್ಲಿ ಆರ್ಥಿಕ ಬೆಳವಣಿಗೆಯಲ್ಲಿ ಅಡಚಣೆ ಉಂಟಾಗಲಿದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಮನಸ್ತಾಪ ಉಂಟಾಗಬಹುದು. 


ಮಿಥುನ (Gemini): ಈ ರಾಶಿಯ 9ನೇ ಮನೆಯಲ್ಲಿ ಬುಧ ಅಸ್ತಮಿಸಿದ್ದಾನೆ.  9 ನೇ ಮನೆ ಅದೃಷ್ಟ ಮತ್ತು ವಿದೇಶಿ ಪ್ರಯಾಣಡ ಸ್ಥಾನ ಎನ್ನಲಾಗುತ್ತದೆ. ಬುಧಗ್ರಹದ ಪ್ರಭಾವದಿಂದ, ಏಪ್ರಿಲ್ 12 ರವರೆಗೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು (Budha Gochara 2022). ಈ ಸಮಯದಲ್ಲಿ ಮಾಡುವ ಕೆಲಸವು ಇದ್ದಕ್ಕಿದ್ದಂತೆ ಹದಗೆಡಬಹುದು. ಉದ್ಯೋಗದಲ್ಲಿ ಬಡ್ತಿಯ ಅವಕಾಶ ತಪ್ಪಿಹೋಗಬಹುದು. ಕೆಲಸದ ಸ್ಥಳದಲ್ಲಿ ಹೆಚ್ಚಿನ ಒತ್ತಡವಿರಬಹುದು. ಅಧಿಕಾರಿಗಳೊಂದಿಗಿನ ಸಂಬಂಧಗಳು ಹದಗೆಡಬಹುದು. ಇದರಿಂದ ಮನಸ್ಸು ಖಿನ್ನತೆಗೆ ಒಳಗಾಗಬಹುದು. 


ಇದನ್ನೂ ಓದಿ : Astrology : ಮನೆಯ ದರಿದ್ರ ತೊಡೆದು ಹಾಕಲು ಈ ಸುಲಭ ಕ್ರಮಗಳನ್ನು ಅನುಸರಿಸಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.