ನವದೆಹಲಿ: ಪ್ರತಿ ತಿಂಗಳು ವಿವಿಧ ಗ್ರಹಗಳು ತಮ್ಮ ಚಲನೆಯನ್ನು ಬದಲಾಯಿಸುತ್ತಲೇ ಇರುತ್ತವೆ. ಬುಧ ಗ್ರಹಕ್ಕೆ ಗ್ರಹಗಳ ರಾಜಕುಮಾರನೆಂಬ ಹೆಸರು ನೀಡಲಾಗಿದೆ. ಬುಧಕ್ಕೆ ಬುದ್ಧಿವಂತಿಕೆಯ ಪೂರೈಕೆದಾರ ಎಂತಲೂ ಕರೆಯುತ್ತಾರೆ. ಬುಧವು ಪ್ರಸ್ತುತ ಧನು ರಾಶಿಯಲ್ಲಿ ಸಾಗುತ್ತಿದೆ. ಅದು 25 ದಿನಗಳ ಕಾಲ ಇದೇ ರಾಶಿಯಲ್ಲಿದ್ದು, ನಂತರ ಡಿಸೆಂಬರ್ 28ರಂದು ಮಕರ ರಾಶಿಯನ್ನು ಪ್ರವೇಶಿಸಲಿದೆ. ಆದರೆ ಬುಧ ಡಿಸೆಂಬರ್ 30ರಂದು ಈ ರಾಶಿಯಲ್ಲಿ ಹಿಮ್ಮೆಟ್ಟಲಿದ್ದಾನೆ. ಬುಧನ ಈ ರಾಶಿ ಬದಲಾವಣೆಯು ಎಲ್ಲಾ ರಾಶಿಗಳ ಮೇಲೂ ವಿಭಿನ್ನ ಪರಿಣಾಮ ಬೀರುತ್ತದೆ. ಆದಾಗ್ಯೂ 4 ರಾಶಿಗಳಿಗೆ ಬುಧದ ಅನುಗ್ರಹದಿಂದ ಅದೃಷ್ಟ ಖುಲಾಯಿಸಲಿದೆ.


COMMERCIAL BREAK
SCROLL TO CONTINUE READING

ಮೇಷ ರಾಶಿ: ಮೇಷ ರಾಶಿಯವರಿಗೆ ಬುಧನ ರಾಶಿ ಬದಲಾವಣೆಯಿಂದ ಹೆಚ್ಚಿನ ಲಾಭವಾಗುತ್ತದೆ. ವರ್ಷದ ಕೊನೆಯಲ್ಲಿ ಬುಧ ಸಂಕ್ರಮಣ ಮತ್ತು ಹಿಮ್ಮೆಟ್ಟುವಿಕೆ ಈ ರಾಶಿಯ ಜನರಿಗೆ ಬಹಳಷ್ಟು ಪ್ರಯೋಜನ ನೀಡುತ್ತದೆ. ಇವರು ತಮ್ಮ ವೃತ್ತಿಜೀವನದಲ್ಲಿ ಅದ್ಭುತ ಯಶಸ್ಸನ್ನು ಪಡೆಯುತ್ತಾರೆ. ಅದೇ ರೀತಿ ಉದ್ಯಮಿಗಳು ಸಾಕಷ್ಟು ಲಾಭವನ್ನು ಪಡೆಯುತ್ತಾರೆ.


ಇದನ್ನೂ ಓದಿ: Shukra Gochar: ಡಿ.29ರಂದು ಮಕರ ರಾಶಿಯಲ್ಲಿ ಸಂಭವಿಸಲಿದೆ ಶುಕ್ರ ಸಂಚಾರ: ಈ ರಾಶಿಗೆ ವರ್ಷದ ಕೊನೆಯಲ್ಲಿ ಬಂಪರ್ ಲಾಭ


ವೃಷಭ ರಾಶಿ: ಬುಧ ಸಂಕ್ರಮಣ ಮತ್ತು ಹಿಮ್ಮುಖ ಬುಧವು ವೃಷಭ ರಾಶಿಯವರಿಗೆ ಅನುಕೂಲಕರ ಫಲಿತಾಂಶ ನೀಡುತ್ತದೆ. ಬಹುಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಉದ್ಯೋಗ ಬದಲಾಯಿಸುವ ಯೋಚನೆಯಲ್ಲಿದ್ದವರಿಗೆ ಇಷ್ಟಾರ್ಥ ನೆರವೇರಲಿದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಲಿದ್ದು, ವೇತನ ಹೆಚ್ಚಳವೂ ಸಾಧ್ಯವಾಗಲಿದೆ.


ಸಿಂಹ ರಾಶಿ: ಸಿಂಹ ರಾಶಿಯವರಿಗೆ ಬುಧನ ರಾಶಿ ಬದಲಾವಣೆಯಿಂದ ಹೆಚ್ಚಿನ ಲಾಭವಾಗಲಿದೆ. ಆದಾಯದ ಹೊಸ ಮೂಲವಾಗುವುದರಿಂದ ದೊಡ್ಡ ಆರ್ಥಿಕ ಲಾಭವಿದೆ. ಉದ್ಯಮಿಗಳಿಗೆ ಸಮಯ ಅನುಕೂಲಕರವಾಗಿರುತ್ತದೆ. ಈ ಸಮಯವು ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದು ಮತ್ತು ಅವರು ಬಯಸಿದ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಯುವಕರು ವೈವಾಹಿಕ ಜೀವನದಲ್ಲಿ ಸಂತೋಷಪಡಲಿದ್ದಾರೆ.


ಇದನ್ನೂ ಓದಿ: Shaniwar Upay: ಸೂರ್ಯಾಸ್ತದ ನಂತರ ಈ ಕೆಲಸ ಮಾಡಿ, ಶನಿ ಕೃಪೆಯಿಂದ ಧನ ಪ್ರಾಪ್ತಿಯಾಗುತ್ತದೆ


ಕನ್ಯಾ ರಾಶಿ: ವಾಹನ ಅಥವಾ ಮನೆ ಖರೀದಿಸಲು ಯೋಜಿಸುತ್ತಿರುವ ಕನ್ಯಾ ರಾಶಿಯವರು ಬುಧ ಗ್ರಹದ ಕೃಪೆಯಿಂದ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದು. ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ.,ಇದರಿಂದಾಗಿ ಅವರ ಮನೆ ಸಂತೋಷದಿಂದ ತುಂಬಿರುತ್ತದೆ. ಆಸ್ತಿಯಲ್ಲಿ ಹೂಡಿಕೆ ಲಾಭವನ್ನು ನೀಡುತ್ತದೆ.


(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.