Garuda Purana: ತಾಯಿ ಲಕ್ಷ್ಮಿದೇವಿ ಈ ಜನರ ಮೇಲೆ ಯಾವಾಗಲೂ ಕೋಪಗೊಳ್ಳುತ್ತಾಳೆ!

Garuda Purana: ವ್ಯಕ್ತಿಯ ಕೆಟ್ಟ ಅಭ್ಯಾಸಗಳು ಆತನ ಜೀವನದ ಸ್ಥಿತಿ ಮತ್ತು ದಿಕ್ಕನ್ನು ನಿರ್ಧರಿಸುತ್ತವೆ. ಗುರುಡ ಪುರಾಣದಲ್ಲಿ ಇಂತಹ ಕೆಲವು ಅಭ್ಯಾಸಗಳ ಬಗ್ಗೆ ಹೇಳಲಾಗಿದೆ. ಈ ಕೆಟ್ಟ ಅಭ್ಯಾಸಗಳಿಂದ ಯಾವಾಗಲೂ ದೂರವಿರಬೇಕು. ಇಲ್ಲದಿದ್ದರೆ ಸಂಪತ್ತಿನ ದೇವತೆಯಾದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.

Written by - Puttaraj K Alur | Last Updated : Dec 23, 2022, 11:26 PM IST
  • ಯಾವಾಗಲೂ ಸಭ್ಯರಾಗಿರಬೇಕು. ದೊಡ್ಡವರಿಂದ ಸಣ್ಣವರೆಗೂ ಎಲ್ಲರನ್ನೂ ಗೌರವದಿಂದ ಕಾಣಬೇಕು
  • ಕೊಳಕು ಬಟ್ಟೆ ಧರಿಸಿ ಕೊಳಕಾಗಿ ಬದುಕುವವರ ಮೇಲೆ ಲಕ್ಷ್ಮಿದೇವಿ ಸದಾ ಕೋಪಗೊಳ್ಳುತ್ತಾಳೆ
  • ಸೂರ್ಯೋದಯದ ನಂತರ ಮಲಗುವವರ ಜೀವನದಲ್ಲಿ ಸಂತೋಷ, ಯಶಸ್ಸು, ಸಮೃದ್ಧಿ ಆನಂದಿಸಲು ಸಾಧ್ಯವಿಲ್ಲ
Garuda Purana: ತಾಯಿ ಲಕ್ಷ್ಮಿದೇವಿ ಈ ಜನರ ಮೇಲೆ ಯಾವಾಗಲೂ ಕೋಪಗೊಳ್ಳುತ್ತಾಳೆ! title=
ಗರುಡ ಪುರಾಣದ ಸಲಹೆಗಳು

ನವದೆಹಲಿ: ಹಿಂದೂ ಧರ್ಮದಲ್ಲಿ ಮಹಾಪುರಾಣವೆಂದು ಪರಿಗಣಿಸಲ್ಪಟ್ಟಿರುವ ಗರುಡ ಪುರಾಣದಲ್ಲಿ ಅನೇಕ ಮಹತ್ವದ ವಿಷಯಗಳ ಬಗ್ಗೆ ತಿಳಿಸಲಾಗಿದೆ. ಗರುಡ ಪುರಾಣದಲ್ಲಿ ಉಲ್ಲೇಖಿಸಿರುವ ಸಲಹೆಗಳನ್ನು ಅನುಸರಿಸಿದ್ರೆ ಮನೆಯಲ್ಲಿ ಅಪಾರ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಇದರೊಂದಿಗೆ ಕೆಲವು ಅಭ್ಯಾಸಗಳ ಬಗ್ಗೆಯೂ ತಿಳಿಸಲಾಗಿದೆ. ಈ ಅಭ್ಯಾಸಗಳ ಬಗ್ಗೆ ಯಾವಾಗಲೂ ದೂರವಿರಲು ಸಲಹೆ ನೀಡಲಾಗುತ್ತದೆ.

ವ್ಯಕ್ತಿಯ ಈ ಕೆಟ್ಟ ಅಭ್ಯಾಸಗಳು ತಾಯಿ ಲಕ್ಷ್ಮಿದೇವಿಯನ್ನು ಕೋಪಗೊಳ್ಳುವಂತೆ ಮಾಡುತ್ತದೆ. ಈ ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡವರಿಗೆ ಯಾವಾಗಲೂ ಹಣದ ಕೊರತೆ ಇರುತ್ತದೆ. ತಾಯಿ ಲಕ್ಷ್ಮಿದೇವಿ ಕೋಪಗೊಳ್ಳುವ ಆ ಕೆಲಸಗಳು ಯಾವುವು ಎಂದು ತಿಳಿಯಿರಿ.

ಇದನ್ನೂ ಓದಿ: Paush Amavasya: ಪುಷ್ಯ ಅಮಾವಾಸ್ಯೆಯಂದು ಈ ಕೆಲಸ ಮಾಡಿದ್ರೆ ಎಲ್ಲಾ ನೋವು & ದುಃಖ ದೂರವಾಗುತ್ತವೆ

ಕಹಿ ಮಾತುಗಳು: ಇತರರೊಂದಿಗೆ ಕಟುವಾಗಿ ಮಾತನಾಡುವವರನ್ನು ತಾಯಿ ಲಕ್ಷ್ಮಿದೇವಿಯನ್ನು ಎಂದಿಗೂ ಇಷ್ಟಪಡುವುದಿಲ್ಲ. ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮಿಯು ಕೆಟ್ಟ ಮಾತುಗಳನ್ನು ಅಥವಾ ಕಟುವಾಗಿ ಮಾತನಾಡುವ ಜನರಿಗೆ ಎಂದಿಗೂ ಕರುಣೆ ತೋರಿಸುವುದಿಲ್ಲ. ಹೀಗಾಗಿ ನೀವು ಯಾವಾಗಲೂ ಸಭ್ಯರಾಗಿರಬೇಕು. ದೊಡ್ಡವರಿಂದ  ಸಣ್ಣವರೆಗೂ ಎಲ್ಲರನ್ನೂ ಗೌರವದಿಂದ ಕಾಣಬೇಕು.

ಕೊಳಕು ಬಟ್ಟೆ ಧರಿಸುವವರು: ಕೊಳಕು ಬಟ್ಟೆ ಧರಿಸಿ ಕೊಳಕಾಗಿ ಬದುಕುವವರ ಮೇಲೆ ತಾಯಿ ಲಕ್ಷ್ಮಿದೇವಿ ಸದಾ ಕೋಪಗೊಳ್ಳುತ್ತಾಳೆ. ಇಂತವರ ಮೇಲೆ ಲಕ್ಷ್ಮಿದೇವಿ ಆಶೀರ್ವಾದ ಎಂದಿಗೂ ಸಿಗುವುದಿಲ್ಲ, ಎಷ್ಟೇ ಕಷ್ಟಪಟ್ಟರೂ ಜೀವನದಲ್ಲಿ ಸುಖ, ಸಮೃದ್ಧಿ ಇರುವುದಿಲ್ಲ. ತಾಯಿ ಲಕ್ಷ್ಮಿದೇವಿ ಈ ಜನರನ್ನು ಎಂದಿಗೂ ಆಶೀರ್ವದಿಸುವುದಿಲ್ಲ. ಹೀಗಾಗಿ ನೀವು ಪ್ರತಿದಿನ ಸ್ನಾನ ಮಾಡಬೇಕು, ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು.

ಇದನ್ನೂ ಓದಿ: Money Saving Tips : ಸಂಪಾದಿಸಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲವೇ.. ʼಗರುಡ ಪುರಾಣʼದಲ್ಲಿದೆ ಇದಕ್ಕೆ ಪರಿಹಾರ..!

ತಡವಾಗಿ ಮಲಗುವ ಜನರು: ಸೂರ್ಯೋದಯದ ನಂತರ ಮಲಗುವ ಜನರು ಜೀವನದಲ್ಲಿ ಸಂತೋಷ, ಯಶಸ್ಸು, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ಆನಂದಿಸಲು ಸಾಧ್ಯವಿಲ್ಲ. ಇಂತಹ ಜನರು ತಮ್ಮ ಜೀವನವನ್ನು ದುಃಖ ಮತ್ತು ಬಡತನದಲ್ಲಿಯೇ ಕಳೆಯುತ್ತಾರೆ. ಹಾಗೆಯೇ ಸೂರ್ಯಾಸ್ತದ ಸಮಯದಲ್ಲಿ ಮಲಗುವ ಜನರ ಮೇಲೆ ತಾಯಿ ಲಕ್ಷ್ಮಿಯೂ ಕೋಪಗೊಳ್ಳುತ್ತಾಳೆ. ಇಂತವರ ಮನೆಗಳಲ್ಲಿ ತಾಯಿ ಎಂದಿಗೂ ವಾಸಿಸುವುದಿಲ್ಲ, ಏಕೆಂದರೆ ಸಂಜೆ ಸಮಯವು ಮನೆಗೆ ತಾಯಿ ಲಕ್ಷ್ಮಿದೇವಿಯ ಆಗಮನದ ಸಮಯವಾಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News