ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಒಂದೇ ರಾಶಿಯಲ್ಲಿ ಎರಡು ಗ್ರಹಗಳ ಉಪಸ್ಥಿತಿಯನ್ನು ಸಂಯೋಗ ಎಂದು ಕರೆಯಲಾಗುತ್ತದೆ. ಜುಲೈ 13 ರಂದು, ಶುಕ್ರ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಿತ್ತು. ಬುಧ ಗ್ರಹ ಕೂಡಾ ಈಗಾಗಲೇ ಮಿಥುನ ರಾಶಿಯಲ್ಲಿದೆ. ಈ ಎರಡೂ ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಇರುವುದರಿಂದ ಮಹಾರಾಜ ಯೋಗ ನಿರ್ಮಾಣವಾಗುತ್ತಿದೆ. ಇದರ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಬೀರಲಿದೆ.  ಈ ಮಹಾನ್ ಯೋಗದಿಂದ ಕೆಲವು ರಾಶಿಯವರಿಗೆ ಶುಭ ಫಲ ಸಿಗಲಿದೆ. ಮೂರು ರಾಶಿಯವರ ಜಾತಕದಲ್ಲಿ ಡಬಲ್ ರಾಜ ಯೋಗ ರೂಪುಗೊಳ್ಳಲಿದೆ. 


COMMERCIAL BREAK
SCROLL TO CONTINUE READING

ಮಿಥುನ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯಲ್ಲಿಯೇ ಮಹಾರಾಜ ಯೋಗವು ರೂಪುಗೊಳ್ಳುತ್ತಿರುವುದರಿಂದ ಈ ರಾಶಿಯವರಿಗೆ ವಿಶೇಷವಾಗಿ ಲಾಭದಾಯಕವಾಗಲಿದೆ.  ಈ ರಾಶಿಯವರ ಜಾತಕದಲ್ಲಿ 2 ರಾಜಯೋಗಗಳು ರೂಪುಗೊಳ್ಳುತ್ತಿವೆ. ತನ್ನದೇ ಆದ ರಾಶಿಯಲ್ಲಿ ಬುಧ ಇರುವುದರಿಂದ ಭದ್ರ ಎಂಬ ರಾಜಯೋಗ ನಿರ್ಮಾಣವಾಗುತ್ತಿದೆ. ಇನ್ನೊಂದೆಡೆ, ಶುಕ್ರ ಗ್ರಹದೊಂದಿಗೆ ಇರುವುದರಿಂದ, ಕೇಂದ್ರ ತ್ರಿಕೋನ ರಾಜಯೋಗವೂ ರೂಪುಗೊಳ್ಳುತ್ತದೆ. ಈ ದ್ವಿಗುಣ ರಾಜಯೋಗದಿಂದ ಭೌತಿಕ ಸುಖಗಳು ಪ್ರಾಪ್ತಿಯಾಗುತ್ತವೆ. ಇನ್ನು ದಶಮಸ್ಥಾನದಲ್ಲಿ ಗುರು ಇರುವುದರಿಂದ ಹಂಸ ಎಂಬ ರಾಜಯೋಗವೂ ನಿರ್ಮಾಣವಾಗುತ್ತಿದೆ.  
ಈ ಅವಧಿಯಲ್ಲಿ ವ್ಯಾಪಾರದಲ್ಲಿ ಉತ್ತಮ ಲಾಭ ಇರುತ್ತದೆ. ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಹೊಸ ಉದ್ಯೋಗಾವಕಾಶಗಳು ಬರುವ ಸಾಧ್ಯತೆ ಇದೆ. ಮತ್ತು ನೀವು ಈಗಾಗಲೇ ಎಲ್ಲೋ ಉದ್ಯೋಗದಲ್ಲಿದ್ದರೆ,  ಬಡ್ತಿ ಪಡೆಯಬಹುದು. 


ಇದನ್ನೂ ಓದಿ : ಅಪ್ಪಿತಪ್ಪಿಯೂ ಸಹ ಮನೆಯಲ್ಲಿ ಶಿವನ ಇಂತಹ ಫೋಟೋಗಳನ್ನು ಇಡಬೇಡಿ


ಕನ್ಯಾ ರಾಶಿ :  ಕನ್ಯಾ ರಾಶಿಯವರಿಗೆ ಕೂಡಾ ಈ ಸಂಕ್ರಮಣ ಮಂಗಳಕರವೆಂದು ಸಾಬೀತಾಗಲಿದೆ. ಈ ರಾಶಿಯ ಜಾತಕದಲ್ಲಿಯೂ ಬುಧ ಗ್ರಹವು ಭದ್ರ ಎಂಬ ರಾಜಯೋಗವನ್ನು ಸೃಷ್ಟಿಸುತ್ತಿದೆ. ಈ ಯೋಗವು ವ್ಯಾಪಾರದಲ್ಲಿ ಲಾಭವನ್ನು ನೀಡುತ್ತದೆ. ಮಗುವಿನ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಇದರೊಂದಿಗೆ, ಬುಧಾದಿತ್ಯ ಯೋಗವೂ ಸಹ ರೂಪುಗೊಳ್ಳುತ್ತದೆ. ಆದ್ದರಿಂದ ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಹೊಸ ಉದ್ಯೋಗದ ಆಫರ್ ಬರಬಹುದು. 


ಮಕರ ರಾಶಿ : ಈ ರಾಶಿಯವರ ಜಾತಕದಲ್ಲಿ ಎರಡು ರಾಜಯೋಗಗಳು ರೂಪುಗೊಳ್ಳುತ್ತಿವೆ. ಇದರಲ್ಲಿ ರುಚಕ್ ಮತ್ತು ಶಾಶ್ ಎಂಬ ರಾಜಯೋಗವು ರೂಪುಗೊಳ್ಳುತ್ತಿದೆ. ಈ ಎರಡೂ ರಾಜಯೋಗಗಳು ಹಠಾತ್ ವಿತ್ತೀಯ ಲಾಭವನ್ನು ನೀಡುತ್ತವೆ.  ಹೊಸ ಕೆಲಸ ಆರಂಭಿಸುವವರಿದ್ದರೆ, ಈ ಸಮಯವು ಅನುಕೂಲಕರವಾಗಿರುತ್ತದೆ. ವ್ಯಾಪಾರದಲ್ಲಿ ಹಂ ಹೂಡಿಕೆ ಮಾಡುವುದಕ್ಕೂ ಇದು ಉತ್ತಮ ಸಮಯ. ಹೊಸ ಕೆಲಸದ ಆಫರ್ ಬರಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. 


ಇದನ್ನೂ ಓದಿ :  ಶನಿವಾರ ಇವುಗಳಲ್ಲಿ ಯಾವುದಾದರೂ ಒಂದನ್ನು ನೋಡಿದ್ರೆ ಸಿಗುತ್ತೆ ಶನಿ ಅನುಗ್ರಹ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.