Money Plant Vastu Tips: ಮನೆಯಲ್ಲಿ ನೆಡುವ ಸಸಿಗಳು ಕೇವಲ ಮನೆಯ ಸೌಂದರ್ಯವನ್ನು ಮಾತ್ರ ಹೆಚ್ಚಿಸದೇ, ಮನೆಯಲ್ಲಿ ಸುಖ-ಶಾಂತಿಯ ಹರಿವನ್ನು ಹೆಚ್ಚಿಸುತ್ತವೆ. ಇದರ ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಕೂಡ ಹೆಚ್ಚಿಸುತ್ತವೆ. ಹೀಗಂತ ಮನೆಯಲ್ಲಿ ನೆಡುವ ಎಲ್ಲಾ ಗಿಡಗಳು ಶುಭ ಫಲಿತಾಂಶಗಳನ್ನು ನೀಡುವುದಿಲ್ಲ. ಕೆಲ ಸಸ್ಯಗಳು ಶುಭ ಫಲಿತಾಂಶಗಳನ್ನು ನೀಡಿದರೆ, ಕೆಲ ಸಸ್ಯಗಳು ಅಶುಭ ಫಲಿತಾಂಶಗಳನ್ನು ನೀಡುತ್ತವೆ. ಮನಿ ಪ್ಲಾಂಟ್ ಗೆ ಸಂಬಂಧಿಸಿದಂತೆಯೂ ಕೂಡ ವಾಸ್ತು ಶಾಸ್ತ್ರದಲ್ಲಿ ಕೆಲ ಉಪಾಯ ಹಾಗೂ ನಿಯಮಗಳನ್ನು ಹೇಳಲಾಗಿದೆ. ಈ ಗಿಡವನ್ನು ಮನೆಯಲ್ಲಿ ಸರಿಯಾದ ಜಾಗ ಹಾಗೂ ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಅದು ವಿಶೇಷ ಫಲಿತಾಂಶಗಳನ್ನು ನೀಡಲಿದೆ. ವಾಸ್ತು ತಜ್ಞರು ಮನಿಪ್ಲಾಂಟ್ ಗೆ ಸಂಬಂಧಿಸಿದಂತೆ ವಿಶೇಷ ಉಪಾಯವೊಂದನ್ನು ಸೂಚಿಸಿದ್ದಾರೆ. ಈ ಉಪಾಯವನ್ನು ಗಮನದಲ್ಲಿಟ್ಟುಕೊಂಡರೆ, ಈ ಗಿಡ ಹಣದ ಸುರಿಮಳೆಯನ್ನೆಗೈಯಲಿದೆ.

COMMERCIAL BREAK
SCROLL TO CONTINUE READING

ಮನಿಪ್ಲಾಂಟ್ ಗಿಡವನ್ನು ನೆಡುವ ನಿಯಮಗಳು
>> ಮನಿ ಪ್ಲಾಂಟ್ ಅನ್ನು ಯಾವಾಗಲೂ ಸರಿಯಾದ ದಿಕ್ಕಿನಲ್ಲಿ ನೆಡಬೇಕು. ಇದನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ನೆಡುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ. ತಪ್ಪು ದಿಕ್ಕಿನಲ್ಲಿ ನೆಟ್ಟರೆ, ಅದು ವಿರುದ್ಧ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತದೆ.

>> ವಾಸ್ತು ಪ್ರಕಾರ, ಮನಿ ಪ್ಲಾಂಟ್ ಅನ್ನು ನೇರವಾಗಿ ನೆಲದ ಮೇಲೆ ನೆಡಬೇಡಿ. ಇದರೊಂದಿಗೆ, ಅದರ ಎಲೆಗಳು ನೆಲದ ಕಡೆಗೆ ಬೆಳೆಯಲು ಬಿಡಬೇಡಿ. ಅದರ ಎಲೆಗಳು ನೆಲದಿಂದ ಆಗಸದತ್ತ ಹೋಗುವಂತಿರಬೇಕು.

>> ಮನಿ ಪ್ಲಾಂಟ್ ಗಿಡವನ್ನು ಸ್ವಚ್ಛವಾದ ಜಾಗದಲ್ಲಿ ನೆಟ್ಟರೆ ಮನೆಯಲ್ಲಿ ಐಶ್ವರ್ಯಕ್ಕೆ ಕಾರಣವಾಗುತ್ತದೆ.

>> ಇದರ ಜೊತೆಗೆ ಶುಕ್ರವಾರದಂದು ಮನಿ ಪ್ಲಾಂಟ್‌ನಲ್ಲಿ ಕೆಂಪು ರಿಬ್ಬನ್ ಅಥವಾ ದಾರವನ್ನು ಕಟ್ಟುವುದು ಮಂಗಳಕರ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಕೆಂಪು ಬಣ್ಣವನ್ನು ಖ್ಯಾತಿ ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮನಿಪ್ಲಾಂಟ್ ಗೆ ಕೆಂಪು ರಿಬ್ಬನ್ ಮತ್ತು ದಾರವನ್ನು ಕಟ್ಟಬೇಕು.

ಇದನ್ನೂ ಓದಿ-Chanakya Niti: ಈ ರೀತಿಯ ಮಹಿಳೆಯ ಸಾಂಗತ್ಯ ಜೀವನವನ್ನೇ ನರಕವನ್ನಾಗಿಸುತ್ತದೆ

ಈ ಉಪಾಯವನ್ನು ಅನುಸರಿಸುವುದರಿಂದ, ಮನಿ ಪ್ಲಾಂಟ್ ವೇಗವಾಗಿ ಬೆಳೆಯುತ್ತದೆ. ಮನಿ ಪ್ಲಾಂಟ್ ಎಷ್ಟು ಬೇಗನೆ ಬೆಳೆಯುತ್ತದೆಯೋ, ಅಷ್ಟೇ ವೇಗದಲ್ಲಿ ವ್ಯಕ್ತಿಯ ಆದಾಯವೂ ಹೆಚ್ಚಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.

ಇದನ್ನೂ ಓದಿ-Chaturmas Horoscope 2022: ಜುಲೈ 10ರಿಂದ ಈ ರಾಶಿಗಳ ಜನರಿಗೆ ಬಂಪರ್ ಲಾಭ, ಚಾತುರ್ಮಾಸದಿಂದ ಇವರಿಗೆ ಲಾಭ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.