ನವದೆಹಲಿ : ಇಂದು ನರಕ ಚತುರ್ದಶಿ (Naraka Chaturdashi). ಈ ದಿನದಂದು ಮುಂಜಾನೆ ಸ್ನಾನ ಮಾಡುವುದರಿಂದ ವರ್ಷವಿಡೀ ಸೌಂದರ್ಯವನ್ನು ಹೆಚ್ಚಿಸುತ್ತದೆ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಇದಲ್ಲದೆ, ಈ ದಿನದ ಸ್ನಾನವು ನರಕದಿಂದ ಮುಕ್ತಿ ಪಡೆಯುವ ವಿಚಾರಕ್ಕೂ ಸಂಬಂಧಿಸಿದೆ. ನರಕ ಚತುರ್ದಶಿ ದಿನದಂದು ವಿಶೇಷ ರೀತಿಯಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲಾ (Sins) ನಾಶವಾಗಿ ನರಕಕ್ಕೆ ಹೋಗುವ ಭಯದಿಂದ ಮುಕ್ತಿಯೂ, ದೊರೆಯುತ್ತದೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ನರಕ ಚತುರ್ದಶಿ ದಿನ ಹೀಗೆ ಸ್ನಾನ ಮಾಡಿ : 
ನರಕ ಚತುರ್ದಶಿ ದಿನದಂದು  (Naraka Chaturdashi) ಧರ್ಮ ಮತ್ತು ಜ್ಯೋತಿಷ್ಯದಲ್ಲಿ (Astrology) ಸೂಚಿಸಲಾದ ರೀತಿಯಲ್ಲಿ ಸ್ನಾನ ಮಾಡಬೇಕು. ಇದಕ್ಕೆ ಅರಿಶಿನ-ಶ್ರೀಗಂಧ (Turmeric), ಕುಂಕುಮ ಮತ್ತು ಹಾಲನ್ನು ಬೆರೆಸಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಸೌಂದರ್ಯ ವೃದ್ದಿಯಾಗುತ್ತದೆಯಂತೆ. 


ಇದನ್ನೂ ಓದಿ : Diwali 2021: ದೀಪಾವಳಿ ದಿನ ಮನೆಯಲ್ಲಿ ಲಕ್ಷ್ಮೀ, ಗಣೇಶನ ಈ ರೀತಿಯ ಮೂರ್ತಿಯಿದ್ದರೆ ಆಗಲಿದೆ ಭಾರೀ ಅಶುಭ


ಇದಲ್ಲದೇ ಸ್ನಾನ ಮಾಡುವ ಮುನ್ನ ಎಳ್ಳೆಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಿ ಮತ್ತು ನಂತರ ಔಷಧೀಯ ಸಸ್ಯವಾದ ಉತ್ತರಾಣಿಯನ್ನು ತಲೆಯ ಸುತ್ತ 3 ಬಾರಿ ತಿರುಗಿಸಿ ನಂತರ ಎಲೆಗಳನ್ನು ನೀರಿನಲ್ಲಿ (water) ಹಾಕಿ ಸ್ನಾನ ಮಾಡಬೇಕು. ಅಲ್ಲದೆ, ದಕ್ಷಿಣ ದಿಕ್ಕಿಗೆ ಮುಖ ಮಾಡಿ ಪಾಪಗಳನ್ನು ಕ್ಷಮಿಸಲು ಯಮರಾಜನನ್ನು ಪ್ರಾರ್ಥಿಸಬೇಕು. ಹೀಗೆ ಮಾಡುವುದರಿಂದ ಪಾಪಗಳು ನಾಶವಾಗುತ್ತವೆ ಮತ್ತು ನರಕಕ್ಕೆ ಹೋಗುವ ಭಯವೂ ಕೊನೆಗೊಳ್ಳುತ್ತದೆ ಎನ್ನುವುದು ನಂಬಿಕೆ. ಈ ದಿನ, ಸ್ನಾನದ ನಂತರ, ಸುಗಂಧ ದ್ರವ್ಯಗಳನ್ನು ಅನ್ವಯಿಸಬೇಕು. ಸಾಧ್ಯವಾದರೆ ಇಂದು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ. 


ಸಂಜೆ ದೀಪಗಳನ್ನು ಹಚ್ಚಬೇಕು :  
ನರಕ ಚತುರ್ದಶಿಯ ದಿನದಂದು,  ಸಂಜೆ 14 ದೀಪಗಳನ್ನು ಬೆಳಗಿಸಬೇಕು. ಹೀಗೆ ಮಾಡುವುದರಿಂದ, ದುಃಖ ಮತ್ತು ತೊಂದರೆಗಳ ಕತ್ತಲೆಯು ಜೀವನದಿಂದ ದೂರವಾಗುತ್ತದೆ. ದೀಪಗಳ ಬೆಳಕು ಜೀವನದಲ್ಲಿ ಸಂತೋಷ ಮತ್ತು ಸಕಾರಾತ್ಮಕತೆಯನ್ನು (Positive energy) ತರುತ್ತದೆ. ಈ ದಿನ ಎಳ್ಳಿನ ಎಣ್ಣೆಯ ದೀಪಗಳನ್ನು ಬೆಳಗಿಸುವುದು ಮಂಗಳಕರ. ಆದರೆ ಮನೆಯಲ್ಲಿ ದೀಪಗಳನ್ನು ಹಚ್ಚುವುದರ ಹೊರತಾಗಿ, ಅಶ್ವಥ  ಮರದ (peeple tree) ಕೆಳಗೆ ಮತ್ತು ಹತ್ತಿರದ ದೇವಸ್ಥಾನದಲ್ಲಿ ದೀಪಗಳನ್ನು ಬೆಳಗಿಸಲು ಮರೆಯಬೇಡಿ.


ಇದನ್ನೂ ಓದಿ :  Diwali 2021: ದೀಪಾವಳಿಯಲ್ಲಿ ಮನೆಯ ಮುಖ್ಯ ಬಾಗಿಲಿನಲ್ಲಿ ಈ ವಸ್ತುಗಳನ್ನು ಇಟ್ಟರೆ ವರ್ಷ ಪೂರ್ತಿ ಹಣ ಬರುತ್ತದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ