ಸೂರ್ಯ-ಮಂಗಳನ ಸಂಯೋಜನೆಯಿಂದ ನವಪಂಚಮ ಯೋಗ ನಿರ್ಮಾಣ, ಈ ರಾಶಿಗಳಿಗೆ ಬಂಪರ್ ಲಾಭ!
Surya Mangala Yuti: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ-ಮಂಗಳರ ಮೈತ್ರಿಯಿಂದ ನವಪಂಚಮ ಯೋಗ ನಿರ್ಮಾಣಗೊಂಡಿದ್ದು, 3 ರಾಶಿಗಳ ಜನರು ಇದರಿಂದ ಭಾರಿ ಲಾಭವನ್ನೇ ಪಡೆಯಲಿದ್ದಾರೆ ಮತ್ತು ಈ ರಾಶಿಗಳ ಒಳ್ಳೆಯ ದಿನಗಳು ಆರಂಭಗೊಳ್ಳುವ ಸಾಧ್ಯತೆಗಳಿವೆ.
Surya-Mangala Navpancham Yog: ವೈದಿಕ ಜ್ಯೋತಿಷ್ಯದ ಪ್ರಕಾರ, ನಿರ್ಧಿಷ್ಟ ಕಾಲಾಂತರದಲ್ಲಿ ಸಂಭವಿಸುವ ಗ್ರಹಗಳ ಸಂಕ್ರಮಣ ಅನೇಕ ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ. ಗ್ರಹ ನಕ್ಷತ್ರಗಳ ಈ ಸಂಚಾರದ ಪ್ರಭಾವವು ಎಲ್ಲಾ ದ್ವಾದಶ ರಾಶಿಗಳ ಜಾತಕದವರ ಮೇಲೆ ಕಂಡುಬರುತ್ತದೆ. ಪ್ರಸ್ತುತ ಗುರು ಮತ್ತು ಮಂಗಳನ ನವಪಂಚಮ ಯೋಗ ರೂಪುಗೊಳ್ಳುತ್ತಿದೆ. ಇದರ ಪ್ರಭಾವವು ಎಲ್ಲಾ ರಾಶಿಗಳ ಜನರ ಮೇಲೆ ಕಂಡುಬರುತ್ತದೆ. ಆದರೆ 3 ರಾಶಿಗಳ ಜನರಿಗೆ ಇದರಿಂದ ವಿಶೇಷ ಲಾಭ ಮತ್ತು ಪ್ರಗತಿಯ ಸಾಧ್ಯತೆಗಳಿವೆ. ಆ ಮೂರು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
ಮೇಷ ರಾಶಿ
ನವಪಂಚಮ ಯೋಗದ ರಚನೆಯು ಮೇಷ ರಾಶಿಯ ಜನರಿಗೆ ಅತ್ಯಂತ ಪ್ರಯೋಜನಕಾರಿ ಎಂದು ಸಾಬೀತಾಗುವ ಸಾಧ್ಯತೆ ಇದೆ. ಏಕೆಂದರೆ ನಿಮ್ಮ ರಾಶಿಯ ಅಧಿಪತಿ ಮಂಗಳ ಹಾಗೂ ಬುದ್ಧಿವಂತಿಕೆ, ಪ್ರಗತಿ ಮತ್ತು ಮಕ್ಕಳ ಅಧಿಪತಿ ಸೂರ್ಯ ದೇವರು ನವಪಂಚಮ ನಿಮ್ಮ ರಾಶಿಯಲ್ಲಿ ನವಪಂಚಮ ಭಾವದಲ್ಲಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ನೀವು ಹಠಾತ್ ವಿತ್ತೀಯ ಲಾಭವನ್ನು ಪಡೆಯಬಹುದು. ಇದರ ಜೊತೆಗೆ ನಿಮಗೆ ಕರ್ಮಫಲದ ಮೂಲಕವೂ ಹಣ ಸಿಗಬಹುದು. ಸಮಾಜದಲ್ಲಿ ನೀವು ಘನತೆ-ಗೌರವವನ್ನು ಪಡೆಯುವಿರಿ. ಕ್ರಾರ್ಯಕ್ಷೇತ್ರದಲ್ಲಿ ನಿಮಗೆ ಬಡ್ತಿ ಮತ್ತು ವರ್ಗಾವಣೆಯ ಅವಕಾಶಗಳು ಸೃಷ್ಟಿಯಾಗುತ್ತಿವೆ. ಇದಲ್ಲದೇ ಕುಟುಂಬದಲ್ಲಿ ನಡೆಯುತ್ತಿದ್ದ ಭಿನ್ನಾಭಿಪ್ರಾಯಗಳಿಗೆ ಮುಕ್ತಿ ಸಿಗಲಿದೆ. ಅಲ್ಲದೆ, ಈ ಸಮಯದಲ್ಲಿ ನಿಮ್ಮ ಮಾತಿನ ಪರಿಣಾಮವು ಹೆಚ್ಚಾಗಲಿದೆ.
ಇದನ್ನೂ ಓದಿ-ಯಾವ ರಾಶಿಯ ಜನರು ಎಂತಹ ರುದ್ರಾಕ್ಷಿ ಧರಿಸಿದರೆ ಹೆಚ್ಚು ಲಾಭದಾಯಕ?
ವೃಷಭ ರಾಶಿ
ನವಪಂಚಮ ಯೋಗದ ನಿರ್ಮಾಣ ನಿಮಗೆ ಅನುಕೂಲಕರವಾಗಿದೆ. ಏಕೆಂದರೆ ನಿಮ್ಮ ರಾಶಿಯ ಅಧಿಪತಿ ಮಂಗಳವು ಪ್ರಬಲ ಸ್ಥಾನದಲ್ಲಿದೆ ಮತ್ತು ಸೂರ್ಯ ಕೂಡ ನಿಮ್ಮ ಜಾತಕದ ನವಮ ಭಾವದಲ್ಲಿದ್ದಾನೆ. ಹೀಗಾಗಿ ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆ ಇದೆ. ಇದರೊಂದಿಗೆ, ಈ ಅವಧಿಯಲ್ಲಿ ನಿಮ್ಮಲ್ಲಿ ಶಕ್ತಿಯು ಕಂಡುಬರಲಿದೆ. ಮತ್ತೊಂದೆಡೆ, ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳು, ತಮ್ಮ ಆಸೆಯನ್ನು ಈ ಅವಧಿಯಲ್ಲ್ಕಿಪೂರೈಸಬಹುದು. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ತುಂಬಾ ಉತ್ತಮವಾಗಿರುತ್ತದೆ, ನೀವು ಈ ಅವಕಾಶವನ್ನು ಬಳಸಿಕೊಳ್ಳಬೇಕು.
ಇದನ್ನೂ ಓದಿ-Magh Purnima 2023: ರವಿ-ಪುಷ್ಯ ನಕ್ಷತ್ರಗಳ ವಿಶೇಷ ಯೋಗ, ಅಕ್ಷಯ ಪುಣ್ಯ ಪ್ರಾಪ್ತಿಗೆ ಈ ಉಪಾಯ ಅನುಸರಿಸಿ
ಕರ್ಕ ರಾಶಿ
ನವಪಂಚಮ ಯೋಗವು ಕರ್ಕ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ಸಾಬೀತಾಗುವ ಎಲ್ಲಾ ಲಕ್ಷಣಗಳು ಇವೆ. ಏಕೆಂದರೆ ಮಂಗಳನು ನಿಮ್ಮ ಶುಭಸ್ಥಾನದಲ್ಲಿ ಕುಳಿತಿದ್ದಾನೆ ಮತ್ತು ಕೇಂದ್ರ ತ್ರಿಕೋನವು ರಾಜಯೋಗವನ್ನು ಸೃಷ್ಟಿಸುತ್ತಿದೆ. ಹೀಗಾಗಿ ದಾಂಪತ್ಯ ಜೀವನದಲ್ಲಿ ಮಧುರತೆ ಇರಲಿದೆ. ಇದರೊಂದಿಗೆ ವಿತ್ತೀಯ ಲಾಭದ ಅವಕಾಶಗಳು ಸೃಷ್ಟಿಯಾಗುತ್ತಿವೆ. ಉದ್ಯಮಿಗಳು ನೀಡಿದ ಹಣ ಮರಳಿ ಪಡೆಯಬಹುದು. ಅಲ್ಲದೆ, ನಿಮ್ಮ ವ್ಯವಹಾರವು ವಿದೇಶಗಳಿಗೆ ಸಂಬಂಧಿಸಿದ್ದರೆ, ಅದರಿಂದ ನೀವು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಈ ಅವಧಿಯಲ್ಲಿ ನೀವು ವೀಸಾಕ್ಕೆ ಅರ್ಜಿ ಸಲ್ಲಿಸುತ್ತಿದ್ದರೆ, ನೀವು ಅದರಲ್ಲಿ ಯಶಸ್ಸನ್ನು ಪಡೆಯಬಹುದು. ಇದಲ್ಲದೆ ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆಗಳಿವೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.