Navratri 2021: ಡೋಲಿಯಲ್ಲಿ ದೇವಿ ದುರ್ಗೆಯ ಆಗಮನ-ಆನೆಯ ಮೇಲೆ ನಿರ್ಗಮನ, ಈ ಬಾರಿಯ ನವರಾತ್ರಿ ಪ್ರಭಾವ ಹೇಗಿರಲಿದೆ?
Sharannavaratri 2021: ನವರಾತ್ರಿಯ (Navratri 2021) ಸಮಯದಲ್ಲಿ ದೇವಿ ದುರ್ಗೆ ಭೂಮಿಯ ಮೇಲೆ ಒಟ್ಟು 9 ಅವತಾರಗಳನ್ನು ಧರಿಸಿ 9 ದಿನಗಳ ಕಾಲ ಸಂಚರಿಸುತ್ತಾಳೆ ಎಂಬುದು ಧಾರ್ಮಿಕ ನಂಬಿಕೆ. ಹೀಗಿರುವಾಗ ಆಎಯ ಆಗಮನ ಹಾಗೂ ನಿರ್ಗಮನ ಜನಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ.
ನವದೆಹಲಿ: Jyotishya Shastra - ಪ್ರತಿಯೊಂದು ಹಬ್ಬ- ವೃತ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಆದರೆ, ಆ ಹಬ್ಬ-ವೃತ ಯಾವ ದಿನಕ್ಕೆ ಬರುತ್ತದೆ, ಆ ದಿನದ ಯಾವ ಮುಹೂರ್ತದಲ್ಲಿ (Muhurat) ಬರುತ್ತದೆ ಹಾಗೂ ಜೋತಿಷ್ಯ ಶಾಸ್ತ್ರದ (Astrology) ಪ್ರಕಾರ ಸ್ಥಿತಿ ಗತಿಗಳು ಹೇಗಿವೆ ಎಂಬುದು ಕೂಡ ತುಂಬಾ ಮಹತ್ವದ್ದಾಗಿರುತ್ತದೆ. ಇಂತಹ ವಿಶೇಷ ಸಂಧರ್ಭದಂದು ಒಂದು ವೇಳೆ ಗ್ರಹಗಳ ಸ್ಥಿತಿ (Planet Position) ಉತ್ತಮವಾಗಿದ್ದರೆ, ಅದು ಜನರ ಸುಖಕ್ಕೆ ಕಾರಣವಾಗುತ್ತದೆ. ಇನ್ನೊಂದೆಡೆ ಗ್ರಹಗಳ ಅಶುಭ ತಿಥಿಗಳು ವಿಪತ್ತನ್ನು ಹೊತ್ತು ತರುತ್ತವೆ. ನವರಾತ್ರಿ ಹಬ್ಭಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ಪರ್ವದ ವೇಳೆ ದೇವಿ ದುರ್ಗೆಯ (Goddess Durga) ಆಗಮನ ಹಾಗು ನಿರ್ಗಮನದ ಸವಾರಿ ಜನರ ಜೀವನ, ಆರ್ಥಿಕ ಸ್ಥಿತಿ ಇತ್ಯಾದಿಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂಬುದು ಧಾರ್ಮಿಕ ನಂಬಿಕೆ.
ಡೋಲಿ ಮೇಲೆ ಸವಾರಿ ವಿಪತ್ತಿನ ಸಂಕೇತ
ಅಕ್ಟೋಬರ್ 7, 2021, ಶುಕ್ರವಾರದಿಂದ ಆರಂಭವಾಗುತ್ತಿರುವ ಶರನ್ನವರಾತ್ರಿಯಲ್ಲಿ (Sharannavaratri 2021) ದೇವಿ ದುರ್ಗೆ ಡೋಲಿ ಮೇಲೆ ಸವಾರಿ ಮಾಡಿ ಆಗಮಿಸುತ್ತಿದ್ದಾಳೆ (Goddess Durga Arrives In Doli) ಹಾಗೂ ಅಕ್ಟೋಬರ್ 15, 2021 ರಂದು ದುರ್ಗೆ ಆನೆಯ ಮೇಲೆ ಸವಾರಿ ಮಾಡುತ್ತಾ ನಿರ್ಗಮಿಸಲಿದ್ದಾಳೆ (Goddess Durga Departure On Elephant). ಶಾಸ್ತ್ರಗಳ ಪ್ರಕಾರ ದೇವಿ ದುರ್ಗೆಯ ಆಗಮನ ಹಾಗೂ ನಿರ್ಗಮನ ಶುಭ ಎಂದು ಹೇಳಲಾಗಿಲ್ಲ. ಈ ರೀತಿ ನಡೆದರೆ ವಿಪತ್ತುಗಳು ಬರಲಿವೆ ಅಥವಾ ಹಿಂಸಾಚಾರಗಳು ಸಂಭವಿಸಲಿವೆ. ಒಟ್ಟಾರೆ ಹೇಳುವುದಾದರೆ ಈ ಸವಾರಿ ಮೃತ್ಯುವಿಗೆ ಕಾರಣ ಸಾಬೀತಾಗಬಹುದು. ಆದರೆ, ಆನೆಯ ಮೇಲೆ ದೇವಿಯ ನಿರ್ಗಮನವನ್ನು ಶುಭ ಎಂದು ಹೇಳಲಾಗಿದೆ. ಆನೆಯ ಮೇಲೆ ದೇವಿ ದುರ್ಗೆ ನಿರ್ಗಮಿಸಿದರೆ, ಉತ್ತಮ ಮಳೆ-ಬೆಲೆಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ-Navratri Money Remedies: ನಿಮಗೂ ಶ್ರೀಮಂತರಾಗುವ ಬಯಕೆಯೇ? ನವರಾತ್ರಿಯಲ್ಲಿ 9 ದಿನಗಳ ಕಾಲ ಈ ಕೆಲಸ ಮಾಡಿ
ಈ ರೀತಿ ನಿರ್ಧರಿಸಲ್ಪಡುತ್ತದೆ ದೇವಿ ದುರ್ಗೆಯ ಸವಾರಿ
ದೇವಿ ದುರ್ಗೆಯ ಆಗಮನ ಹಾಗೂ ನಿರ್ಗಮನದ ಸವಾರಿ ನವರಾತ್ರಿಯ ಆರಂಭ ಹಾಗೂ ಮುಕ್ತಾಯದ ದಿನವನ್ನು ಆಧರಿಸಿದೆ. ಒಂದು ವೇಳೆ ನವರಾತ್ರಿಯ ಆರಂಭ ಸೋಮವಾರ ಅಥವಾ ಭಾನುವಾರ ದಿನದಿಂದ ನಡೆಯುತ್ತಿದ್ದರೆ, ಇದರರ್ಥ ದೇವಿ ದುರ್ಗೆ ಆನೆಯ ಮೇಲೆ ಸವಾರಿ ಮಾಡಿ ಬರುತ್ತಾಳೆ ಎಂದರ್ಥ. ಶನಿವಾರ ಅಥವಾ ಮಂಗಳವಾರ ಆರಂಭ ಎಂದರೆ, ದೇವಿ ದುರ್ಗೆ ಕುದುರೆ ಮೇಲೆ ಸವಾರಿ ನಡೆಸಿ ಆಗಮಿಸುತ್ತಾಳೆ. ಗುರುವಾರ ಅಥವಾ ಶುಕ್ರವಾರ ನವರಾತ್ರಿಯ ಆರಂಭ ಎಂದರೆ ದೇವಿ ಡೋಲಿಯಲ್ಲಿ ಬರುತ್ತಾಳೆ ಎಂದರ್ಥ.
ಇದನ್ನೂ ಓದಿ-Tuesday Tips: ಮಂಗಳವಾರ ನೀವೂ ಈ ಕೆಲಸ ಮಾಡುತ್ತಿದ್ದರೆ ಹುಷಾರ್! ದೊಡ್ಡ ನಷ್ಟವಾಗಬಹುದು
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯ ತಜ್ಞರ ಸಲಹೆ ಪಡೆಯಲು ಮರೆಯಬೇಡಿ)
ಇದನ್ನೂ ಓದಿ-Garuda Purana: ಮಹಿಳೆಯರ ಜೊತೆಗೆ ಮಾಡಲಾಗುವ ಈ ಕೆಲಸದಿಂದ ಸ್ವರ್ಗ ಸಿಗುತ್ತಾ? ಅಥವಾ ನರಕ ಸಿಗುತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.