Navratri 2021: ನವರಾತ್ರಿಯಲ್ಲಿ ಅಖಂಡ ಜ್ಯೋತಿ ಬೆಳಗಿಸುವ ಮುನ್ನ ತಿಳಿದುಕೊಳ್ಳಿ ಈ ನಿಯಮ

ನವರಾತ್ರಿಯಲ್ಲಿ ಅಖಂಡ ಜ್ಯೋತಿ ಬೆಳಗಬೇಕಾದರೆ, ಉಲ್ಲೇಖಿಸಿರುವ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. 

Written by - Ranjitha R K | Last Updated : Oct 5, 2021, 07:49 PM IST
  • ದುರ್ಗಾ ದೇವಿಯ ಆಶೀರ್ವಾದ ಪಡೆಯಲು ಅಖಂಡ ಜ್ಯೋತಿಯನ್ನು ಬೆಳಗಿಸಿ
  • 9 ದಿನಗಳ ಕಾಲ ದೇವಿಯನ್ನು ನಿತ್ಯ ಪೂಜಿಸಿ
  • ಅಖಂಡ ಜ್ಯೋತಿಯನ್ನು ಬೆಳಗಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ
Navratri 2021: ನವರಾತ್ರಿಯಲ್ಲಿ ಅಖಂಡ ಜ್ಯೋತಿ ಬೆಳಗಿಸುವ ಮುನ್ನ ತಿಳಿದುಕೊಳ್ಳಿ ಈ ನಿಯಮ  title=
ದುರ್ಗಾ ದೇವಿಯ ಆಶೀರ್ವಾದ ಪಡೆಯಲು ಅಖಂಡ ಜ್ಯೋತಿಯನ್ನು ಬೆಳಗಿಸಿ (file photo)

ನವರಾತ್ರಿ : ನವರಾತ್ರಿಯಲ್ಲಿ ಅಖಂಡ ಜ್ಯೋತಿ (Navaratri Akhanda jyoti) ಬೆಳಗುವ ಕಾರ್ಯಕ್ಕೆ ಬಹಳ ಮಹತ್ವವಿದೆ. ದೇವಿಯ ಕೃಪೆಯನ್ನು ಪಡೆಯಲು ಇದು ಅತ್ಯುತ್ತಮ ಮಾರ್ಗವಾಗಿದೆ. ಇದರೊಂದಿಗೆ, ದುರ್ಗೆ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ. ಆದರೆ,  ಅಖಂಡ ಜ್ಯೋತಿ (Akhanda jyoti) ಬೆಳಗಬೇಕಾದರೆ, ಉಲ್ಲೇಖಿಸಿರುವ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. 

ಅಖಂಡ ಜ್ಯೋತಿಗೆ ಸಂಬಂಧಿಸಿದ ಪ್ರಮುಖ ನಿಯಮಗಳು :
-ಅಖಂಡ ಜ್ಯೋತಿಯನ್ನು (Akhanda jyoti) ನೇರವಾಗಿ ನೆಲದ ಮೇಲೆ ಇಡಬಾರದು. ಮರದ ಕಂಬದ ಮೇಲೆ ಕೆಂಪು ಬಟ್ಟೆಯನ್ನು ಹಾಕಿ ಅದರ ಮೇಲೆ ದೀಪವನ್ನು ಇರಿಸಬೇಕು.  
-ಅಖಂಡ ಜ್ಯೋತಿಯನ್ನು ವಿಧಿವಿಧಾನದ ಮೂಲಕ ಪೂಜಿಸಿ. ಜ್ಯೋತಿಯನ್ನು ಬೆಳಗಿಸುವ ಮೊದಲು, ಸಂಕಲ್ಪ ಮಾಡಿಕೊಳ್ಳಬೇಕು. ನಂತರ ಸಂಪೂರ್ಣ ಭಕ್ತಿ ಭಾವದಿಂದ ದುರ್ಗಾ ದೇವಿಯನ್ನು (Godess Durga) ಪ್ರಾರ್ಥಿಸಿ. 
-ಅಖಂಡ ಜ್ಯೋತಿಯನ್ನು 9 ದಿನಗಳ ಕಾಲ 24 ಗಂಟೆಯೂ ಹಚ್ಚಬೇಕು. ದೀಪ ಯಾವುದೇ ಸಂದರ್ಭದಲ್ಲೂ ನಂದಿಹೋಗಬಾರದು. ಒಂದು ವೇಳೆ ಹಾಗಾದರೆ, ಅದು ಅಶುಭ. 

ಇದನ್ನೂ  ಓದಿ: Navratri Money Remedies: ನಿಮಗೂ ಶ್ರೀಮಂತರಾಗುವ ಬಯಕೆಯೇ? ನವರಾತ್ರಿಯಲ್ಲಿ 9 ದಿನಗಳ ಕಾಲ ಈ ಕೆಲಸ ಮಾಡಿ

- ಅಖಂಡ ಜ್ಯೋತಿಗೆ ಯಾವತ್ತೂ ಬೆನ್ನು ಹಾಕಬಾರದು.  
- ಅಖಂಡ ಜ್ಯೋತಿ ಇರುವವರೆಗೂ, ಮನೆಯಲ್ಲಿ ಯಾರಾದರೊಬ್ಬರು ಇರಲೇ ಬೇಕು.  ಮನೆಯನ್ನು ಒಂಟಿಯಾಗಿ ಬಿಡಬಾರದು.  
-ಈ ಸಮಯದಲ್ಲಿ, ದುರ್ಗೆಯನ್ನು ನಿತ್ಯ ಪೂಜಿಸಬೆಕು.  
-ಕೊಳಕು ಕೈಗಳಿಂದ ಅಖಂಡ ಜ್ಯೋತಿಯನ್ನು ಮುಟ್ಟಬೇಡಿ. 
-ಅಖಂಡ ಜ್ಯೋತಿಗೆ ಶುದ್ಧ ದೇಸಿ ತುಪ್ಪವನ್ನು ಬಳಸುವುದು ಒಳ್ಳೆಯದು. ಇದು ಸಾಧ್ಯವಾಗದಿದ್ದರೆ, ಎಳ್ಳು ಅಥವಾ ಸಾಸಿವೆ ಎಣ್ಣೆಯನ್ನು ಬಳಸಬಹುದು.  
-ಮನೆಯಲ್ಲಿಅಖಂಡ ಜ್ಯೋತಿ ಬೆಳಗಿಸಲು ಸಾಧ್ಯವಾಗದಿದ್ದರೆ, ದೇವಸ್ಥಾನಕ್ಕೆ ಹೋಗಿ ಜ್ಯೋತಿಗೆ ತುಪ್ಪವನ್ನು (Ghee) ದಾನ ಮಾಡಿ ಮತ್ತು ಮಂತ್ರವನ್ನು ಪಠಿಸಿ. 
-ಅತ್ಯಂತ ಮುಖ್ಯವಾದ ವಿಷಯವೆಂದರೆ ನವರಾತ್ರಿಯ (Navaratri) ಅಂತ್ಯದ ನಂತರವೂ ದೀಪ ತಾನಾಗಿಯೇ ಆರಲಿ. ಅದನ್ನು ನಂದಿಸುವ ತಪ್ಪನ್ನು ಮಾಡಬೇಡಿ.

ಇದನ್ನೂ  ಓದಿ: Tuesday Tips: ಮಂಗಳವಾರ ನೀವೂ ಈ ಕೆಲಸ ಮಾಡುತ್ತಿದ್ದರೆ ಹುಷಾರ್! ದೊಡ್ಡ ನಷ್ಟವಾಗಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News