Ghatasthapana 2022 Shubh Muhurat: ಅಶ್ವಿನಿ ಮಾಸದ ಶುಕ್ಲ ಪಕ್ಷದ ಪ್ರತಿಪದೆಯಂದು 9 ದಿನಗಳ ಶರನ್ನವರಾತ್ರಿ ಉತ್ಸವ ಆರಂಭಗೊಳ್ಳುತ್ತಿದೆ. ಅಂದರೆ, ಈ ಬಾರಿ ಸೆಪ್ಟೆಂಬರ್ 26 ರಿಂದ ಈ ಬಾರಿಯ ನವರಾತ್ರಿ ಉತ್ಸವ ಆರಂಭಗೊಳ್ಳುತ್ತಿದ್ದು, ಇದನ್ನು ಶಾರದೀಯ ನವರಾತ್ರಿ ಉತ್ಸವ ಎಂದೂ ಕೂಡ ಕರೆಯುತ್ತಾರೆ. ಈ ಬಾರಿ ಆನೆಯ ಮೇಲೆ ಸವಾರಿ ನಡೆಸಿ ದೇವಿ ದುರ್ಗೆ ಆಗಮಿಸುತ್ತಿದ್ದಾಳೆ. 9 ದಿನಗಳವರೆಗೆ ತಾಯಿ ದುರ್ಗಾ ತನ್ನ ಭಕ್ತಾದಿಗಳ ಮಧ್ಯೆ ಇರುತ್ತಾಳೆ ಎಂಬುದು ಧಾರ್ಮಿಕ ನಂಬಿಕೆ. ಬಳಿಕ ಆಕೆ ಅಕ್ಟೋಬರ್ 5 ರಂದು ಕೈಗೊಳ್ಳಲಿದ್ದಾಳೆ. ಈ ಬಾರಿ ಸೆಪ್ಟೆಂಬರ್ 25 ರಂದು ಘಟಸ್ಥಾಪನೆಗೆ ಉತ್ತಮ ಮುಹೂರ್ತ ಇದೆ. ಹಾಗಾದರೆ ಬನ್ನಿ ದೇವಿ ದುರ್ಗೆಯ ಆಗಮನದ ವಾಹನ ಯಾವ ಸಂಕೇತಗಳನ್ನು ನೀಡುತ್ತಿದೆ ಮತ್ತು ಕಲಶ ಸ್ಥಾಪನೆಯ ಶುಭ ಮುಹೂರ್ತ ಯಾವುದು ತಿಳಿದುಕೊಳ್ಳೋಣ,

COMMERCIAL BREAK
SCROLL TO CONTINUE READING

ಆನೆಯ ಮೇಲೆ ಸವಾರಿ ನಡೆಸಿ ಶ್ರೀದುರ್ಗೆಯ ಆಗಮನ
ಈ ಬಾರಿಯ ಶರನ್ನವರಾತ್ರಿ ಉತ್ಸವ ತುಂಬಾ ವಿಶೇಷವಾಗಿರಲಿದೆ. ಈ ವರ್ಷ ಆನೆಯ ಮೇಲೆ ತಾಯಿ ದುರ್ಗೆಯ ಆಗಮನವಾಗುತ್ತಿದೆ. ದುರ್ಗಾ ಮಾತೆಯು ಆನೆಯ ಮೇಲೆ ಸವಾರಿ ನಡೆಸಿ ಆಗಮಿಸುವುದು ಮಂಗಳಕರ ಎಂದು ಪರಿಗಣಿಸಲಾಗಿದೆ. ಹೀಗಾಗಿ ಈ ಬಾರಿ ತಾಯಿ ದುರ್ಗೆಯ ಆಗಮನ ಅಪಾರ ಸುಖ-ಸಮೃದ್ಧಿಯನ್ನು ತರಲಿದೆ. ಇದು ಶಾಂತಿ ಮತ್ತು ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತಿದೆ. ಹೀಗಾಗಿ ಒಂದು ಅರ್ಥದಲ್ಲಿ ಈ ಬಾರಿಯ ಶರನ್ನವರಾತ್ರಿಯ ಉತ್ಸವ ಭಾರತ ಮತ್ತು ಭಾರತದ ನಾಗರಿಕರ ಪಾಲಿಗೆ ಮಂಗಳಕರ ಸಾಬೀತಾಗಲಿದೆ ಎಂದರೆ ತಪ್ಪಾಗಲಾರದು.


ಶರನ್ನವರಾತ್ರಿ 2022 ಘಟಸ್ಥಾಪನೆ 
ಸೆಪ್ಟೆಂಬರ್ 26 ರಂದು ಈ ಬಾರಿಯ ಶರನ್ನವರಾತ್ರಿಯ ಉತ್ಸವ ಆರಂಭಗೊಳ್ಳುತ್ತಿದೆ. ಇದು ಅಕ್ಟೋಬರ್ 5ರವರೆಗೆ ಮುಂದುವರೆಯಲಿದೆ. ಪ್ರತಿಪದಾ ತಿಥಿ ಸೆಪ್ಟೆಂಬರ್ 26 ರ ಬೆಳಗ್ಗೆ 03:24 ರಿಂದ ಸೆಪ್ಟೆಂಬರ್ 27 ರ ಬೆಳಗ್ಗೆ 03:08 ರವರೆಗೆ ಇರಲಿದೆ. ಇನ್ನೊಂದೆಡೆ ಸೆ.26 ರಂದು ಬೆಳಗ್ಗೆ 06:20ರಿಂದ 10:19 ರವರೆಗೆ ಘಟಸ್ಥಾಪನೆಗೆ ಒಳ್ಳೆಯ ಮುಹೂರ್ತ ಇರಲಿದೆ. ಅಭಿಜಿತ್ ಮುಹೂರ್ತವು ಸೆಪ್ಟೆಂಬರ್ 26 ರಂದು ಬೆಳಗ್ಗೆ 11:54 ರಿಂದ ಮಧ್ಯಾಹ್ನ 12:42 ರವರೆಗೆ ಇರಲಿದೆ.


ಇದನ್ನೂ ಓದಿ-Lucky Name: ಇಂತಹ ಹುಡುಗರಿಗೆ ಬೇಗ ಇಂಪ್ರೆಸ್ ಆಗ್ತಾರೆ ಹುಡಗಿಯರು


ಶರನ್ನವರಾತ್ರಿ 2022ರ ತಿಥಿಗಳು
ಸಾಮಾನ್ಯವಾಗಿ ನವರಾತ್ರಿಯ 9 ದಿನಗಳಲ್ಲಿ ತಾಯಿ ದುರ್ಗೆಯ 9 ವಿವಿಧ ರೂಪಗಳಿಗೆ ಪೂಜೆ ಸಲಿಸಲಾಗುತ್ತದೆ ಹಾಗೂ ಪ್ರತಿಯೊಂದು ದಿನ ತಾಯಿ ಲಕ್ಷ್ಮಿಯ ಒಂದು ರೂಪಕ್ಕೆ ಸಮರ್ಪಿತವಾಗಿದೆ.
>> 26 ಸೆಪ್ಟೆಂಬರ್ 2022, ಮೊದಲ ದಿನ -  ಶೈಲಪುತ್ರಿ ಪೂಜೆ
>> 27 ಸೆಪ್ಟೆಂಬರ್ 2022, ದಿನ 2 -  ಬ್ರಹ್ಮಚಾರಿಣಿ ಪೂಜೆ
>> 28 ಸೆಪ್ಟೆಂಬರ್ 2022, ಮೂರನೇ ದಿನ-  ಚಂದ್ರಘಂಟಾ ಪೂಜೆ
>> 29 ಸೆಪ್ಟೆಂಬರ್, ನಾಲ್ಕನೇ ದಿನ -  ಕೂಷ್ಮಾಂಡ ಪೂಜೆ, ವಿನಾಯಕ ಚತುರ್ಥಿ, ಉಪಾಂಗ ಲಲಿತಾ ವ್ರತ
>> ಸೆಪ್ಟೆಂಬರ್ 30, ಐದನೇ ದಿನ - ಪಂಚಮಿ,  ಸ್ಕಂದಮಾತೆಯ ಪೂಜೆ
>> ಅಕ್ಟೋಬರ್ 1, ಆರನೇ ದಿನ - ಷಷ್ಠಿ, ಕಾತ್ಯಾಯನಿ ಪೂಜೆ
>> 2 ಅಕ್ಟೋಬರ್ 2022, ಏಳನೇ ದಿನ - ಸಪ್ತಮಿ, ಕಾಲರಾತ್ರಿ ಪೂಜೆ
>> 3 ಅಕ್ಟೋಬರ್ 2022, 8 ನೇ ದಿನ - ದುರ್ಗಾ ಅಷ್ಟಮಿ, ಮಹಾಗೌರಿ ಪೂಜೆ, ಮಹಾನವಮಿ
>> 4 ಅಕ್ಟೋಬರ್ 2022, ಒಂಬತ್ತನೇ ದಿನ - ಮಹಾನವಮಿ, ಶಾರದೀಯ ನವರಾತ್ರಿಯ ಪುರಾಣ
>> ಅಕ್ಟೋಬರ್ 5, 10 ನೇ ದಿನ - ದಶಮಿ, ದುರ್ಗಾ ವಿಸರ್ಜನೇ ಮತ್ತು ವಿಜಯದಶಮಿ (ದಸರಾ)


ಇದನ್ನೂ ಓದಿ-Kombucha Drink: ಹಲವು ಬಾಲಿವುಡ್ ನಟ-ನಟಿಯರ ಫಿಟ್ನೆಸ್ ಮಂತ್ರ ಈ ಕೊಂಬುಚಾ ಡ್ರಿಂಕ್...ಏನಿದು?


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಥಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.