Night Vastu Tips: ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರಲು ಮಲಗುವ ಮುನ್ನ ಈ ಸಣ್ಣ ಉಪಾಯ ಅನುಸರಿಸಿ
Lakshmi Tips For Night: ಜೀವನದಲ್ಲಿ ಅಪಾರ ಸುಖ-ಸಮೃದ್ಧಿಯನ್ನು ಸಂಪಾದಿಸಲು ವಾಸ್ತು ಶಾಸ್ತ್ರದಲ್ಲಿ ಹಲವು ಉಪಾಯಗಳನ್ನು ಹೇಳಲಾಗಿದೆ. ಈ ಸಲಹೆಗಳನ್ನು ಅನುಸರಿಸುವುದರಿಂದ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ ಮತ್ತು ವ್ಯಕ್ತಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಾನೆ. ಹೀಗಾಗಿ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮಮೇಲಿರಲು ನಿಯಮಿತವಾಗಿ ಈ ಉಪಾಯಗಳನ್ನು ಅನುಸರಿಸುವುದು ತುಂಬಾ ಮುಖ್ಯ.
Night Remedies For Goddess Lakshmi: ತಾಯಿ ಲಕ್ಷ್ಮಿಯ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲು ವ್ಯಕ್ತಿ ಹಗಲಿರುಳು ಶ್ರಮಿಸುತ್ತಾನೇ. ಮನೆಯಲ್ಲಿ ಸುಖ ಶಾಂತಿ ನೆಲೆಸುವಂತೆ ಮಾಡಲು ಸಾಕಷ್ಟು ಓಡಾಟ ನಡೆಸುತ್ತಾನೆ. ತಾಯಿ ಲಕ್ಷ್ಮಿಯ ಅನುಗ್ರಹದಿಂದ, ಎಲ್ಲಾ ಭೌತಿಕ ಸುಖಗಳನ್ನು ಪಡೆಯುತ್ತಲೇ ಇರಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿರುತ್ತದೆ. ತಾಯಿ ಲಕ್ಷ್ಮಿಯ ಕೃಪಾಕಟಾಕ್ಷ ತಮ್ಮ ಮೇಲೆ ಇರಿಸಿಕೊಳ್ಳಲು ವಾಸ್ತುಶಾಸ್ತ್ರದಲ್ಲಿ ಹಲವು ಸಲಹೆಗಳನ್ನು ನೀಡಲಾಗಿದೆ. ಅವುಗಳನ್ನು ಅನುಸರಿಸುವುದರಿಂದ ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ ಮತ್ತು ಭಕ್ತರ ಮೇಲೆ ತನ್ನ ಕೃಪೆಯ ಸುರಿಮಳೆಯನ್ನೇಗೈಯುತ್ತಾಳೆ.
ವಾಸ್ತು ಶಾಸ್ತ್ರದಲ್ಲಿ ಸೂಚಿಸಲಾಗಿರುವ ಈ ಉಪಾಯಗಳನ್ನು ರಾತ್ರಿ ಮಲಗುವ ಮೊದಲು ನಿಯಮಿತವಾಗಿ ಅನುಸರಿಸಿದರೆ, ನಂತರ ಒಬ್ಬ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತಾನೆ. ಇದಲ್ಲದೆ, ತಾಯಿ ಲಕ್ಷ್ಮಿಯ ಆಶೀರ್ವಾದದಿಂದ, ಒಬ್ಬ ವ್ಯಕ್ತಿಯು ಅಪಾರ ಸಂಪತ್ತನ್ನು ಗಳಿಸುತ್ತಾನೆ. ರಾತ್ರಿ ಮಲಗುವ ಮುನ್ನ ಮಾಡಲಾಗುವ ಯಾವ ಉಪಾಯಗಳಿಂದ ವ್ಯಕ್ತಿಗೆ ತಾಯಿ ಲಕ್ಷ್ಮಿಯ ಈ ಕೃಪಾಕಟಾಕ್ಷ ಲಭಿಸುತ್ತದೆ ತಿಳಿದುಕೊಳ್ಳೋಣ ಬನ್ನಿ.
ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡಲು ಮರೆಯಬೇಡಿ
ಸ್ನಾನಗೃಹದಲ್ಲಿ ಬಕೆಟ್ ತುಂಬಿಡಿ
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟರೆ ತಾಯಿ ಲಕ್ಷ್ಮಿಯ ಕೃಪೆ ಸುಲಭವಾಗಿ ಸಿಗುತ್ತದೆ. ವಾಸ್ತು ತಜ್ಞರ ಪ್ರಕಾರ, ಸ್ನಾನಗೃಹದಲ್ಲಿ ನೀರು ತುಂಬಿದ ಬಕೆಟ್ ಇಡುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ರಾತ್ರಿ ಮಲಗುವ ಮುನ್ನ ಬಾತ್‌ರೂಮ್‌ನಲ್ಲಿ ಒಂದು ಬಕೆಟ್ ನೀರು ಇಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆ ಎದುರಾಗುವುದಿಲ್ಲ.
ಅಡುಗೆ ಮನೆಯಲ್ಲಿ ಈ ಪರಿಹಾರಗಳನ್ನು ಮಾಡಿ
ವಾಸ್ತು ಪ್ರಕಾರ ರಾತ್ರಿ ಮಲಗುವ ಮುನ್ನ ಅಡುಗೆ ಮನೆಯಲ್ಲಿ ಒಂದು ಬಕೆಟ್ ನೀರು ತುಂಬಿಸಿ ಇಡಿ. ಹೀಗೆ ಮಾಡುವುದರಿಂದ ವ್ಯಕ್ತಿಯ ಸಾಲದ ಸಮಸ್ಯೆ ನಿವಾರಣೆಯಾಗಿ ಆತ ಸಾಲಬಾಧೆಯಿಂದ ಮುಕ್ತನಾಗುತ್ತಾನೆ. ಇದರಿಂದ ವ್ಯಕ್ತಿಯ ಹಣಕಾಸಿನ ಮುಗ್ಗಟ್ಟು ನಿವಾರಣೆಯಾಗುತ್ತದೆ.
ಇದನ್ನೂ ಓದಿ-Kapoor Remedies: ಕರ್ಪೂರದ ಈ ಉಪಾಯ ಅನುಸರಿಸುವುದರಿಂದ ಆರ್ಥಿಕ ಮುಗ್ಗಟ್ಟು ದೂರಾಗುತ್ತದೆ, ಪಿತೃದೋಷದಿಂದ ಕೂಡ ಮುಕ್ತಿ
ಮುಖ್ಯದ್ವಾರದಲ್ಲಿ ದೀಪವನ್ನು ಬೆಳಗಿಸಿ
ವಾಸ್ತು ತಜ್ಞರ ಪ್ರಕಾರ, ನಿಯಮಿತವಾಗಿ ಸಾಯಂಕಾಲದ ಹೊತ್ತು ಮನೆಯ ಹೊರಗೆ ದೀಪವನ್ನು ಬೆಳಗಿಸುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ರಾತ್ರಿಯಿಡೀ ಈ ದೀಪ ಉರಿಯುತ್ತಿರಲಿ. ರಾತ್ರಿಯಿಡೀ ಉರಿಯಲು ಬಿಡಲು ಸಾಧ್ಯವಾಗದಿದ್ದರೆ, ಸಂಜೆ ಅದನ್ನು ಉರಿಯಲು ಬಿಡಿ. ಅದರ ನಂತರ ಆ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಿ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿಯ ವಾಸ ಸದಾ ನಿಮ್ಮ ಮನೆಯಲ್ಲಿರುತ್ತದೆ.
ಇದನ್ನೂ ಓದಿ-ಮುಂದಿನ ಮೂರು ತಿಂಗಳವರೆಗೆ ಈ ರಾಶಿಯವರನ್ನು ಇನ್ನಿಲ್ಲದಂತೆ ಕಾಡಲಿದ್ದಾನೆ ಮಂಗಳ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.