October 2021 Month Importance: ಚಾತುರ್ಮಾಸದಿಂದ ಆರಂಭಗೊಂಡಿರುವ ವೃತ ಹಾಗೂ ಹಬ್ಬಗಳು ತನ್ನ ಉಚ್ಚ್ರಾಯ ಸ್ಥಿತಿಗೆ ತಲುಪುತ್ತಿವೆ. ಅಕ್ಟೋಬರ್ ತಿಂಗಳಿನಲ್ಲಿ ನವರಾತ್ರಿ (Navratri 2021 Date) ಹಾಗೂ ದಸರಾಗಳಂತಹ (Dussehra 2021 Date) ಪ್ರಮುಖ ಹಬ್ಬಗಳು ಬರುತ್ತವೆ. ಇದಲ್ಲದೆ ಇಂದಿರಾ ಏಕಾದಶಿ, ಉತ್ತರ ಭಾರತದಲ್ಲಿ ಪ್ರಮುಖವಾಗಿ ಆಚರಿಸಲಾಗುವ ಕಾರವಚೌತ್ ಗಳಂತಹ ವೃತ ಕೂಡ ಬರುತ್ತಿದೆ. ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿಯೇ ಸರ್ವಪಿತೃ ಅಮಾವಾಸ್ಯೆ (Sarva Pitra Amavasya) ಕೂಡ ಬರುತ್ತಿದೆ. ಈ ದಿನ ತಿಥಿ ತಿಳಿಯದೆ ಇರುವ ಎಲ್ಲ ಪೂರ್ವಜರ ಶ್ರಾದ್ಧ ವಿಧಿ ನಡೆಸಲಾಗುತದೆ.  ಇವು ಅಕ್ಟೋಬರ್ ತಿಂಗಳಿನಲ್ಲಿ ಬರುವ ಪ್ರಮುಖ ತಿಥಿ ಹಾಗೂ ಹಬ್ಬಗಳು.


COMMERCIAL BREAK
SCROLL TO CONTINUE READING

ಅಕ್ಟೋಬರ್ ತಿಂಗಳಿನಲ್ಲಿ ಬರುವ ವೃತ ಹಬ್ಬಗಳು ಇಂತಿವೆ
ಅಕ್ಟೋಬರ್ 2: ಶನಿವಾರ -
ಅಶ್ವಿನ್ ತಿಂಗಳ ಕೃಷ್ಣ ಪಕ್ಷದ ಏಕಾದಶಿಯನ್ನು ಇಂದಿರಾ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ತರ್ಪಣ-ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಕೋರಲಾಗುತ್ತದೆ. ಮತ್ತೊಂದೆಡೆ, ಇಂದಿರಾ ಏಕಾದಶಿ ಉಪವಾಸವನ್ನು ಆಚರಿಸುವುದರಿಂದ ಎರಡು ಫಲಿತಾಂಶಗಳನ್ನು ಪಡೆಯಬಹುದು. 


ಅಕ್ಟೋಬರ್ 6: ಬುಧವಾರ - ಅಶ್ವಿನ್ ತಿಂಗಳ ಅಮಾವಾಸ್ಯೆಯಂದು ಸರ್ವಪಿತೃ ಅಮಾವಾಸ್ಯೆ ಇರಲಿದೆ. ಇದು ಪಿತೃ ಪಕ್ಷದ ಕೊನೆಯ ದಿನವಾಗಿದೆ.


ಅಕ್ಟೋಬರ್ 7: ಗುರುವಾರ -  ಅಮಾವಾಸ್ಯೆಯ ಮಾರನೆ ದಿನದಿಂದಲೇ ನವರಾತ್ರಿ ಹಬ್ಬ ಆರಂಭಗೊಳ್ಳಲಿದೆ. ಈ ನವರಾತ್ರಿ ತುಂಬಾ ವಿಶೇಷವಾಗಿರುತ್ತದೆ. ಏಕೆಂದರೆ, ಈ ಹಬ್ಬದಲ್ಲಿ ಶಕ್ತಿ ದೇವತೆಯನ್ನು ಆರಾಧಿಸಲಾಗುತ್ತದೆ ಹಾಗೂ ಉತ್ಸವ ಕೂಡ ನೆರವೇರಿಸಲಾಗುತ್ತದೆ.


ಇದನ್ನೂ ಓದಿ-Venus Transit in October 2021 : ಇಂದಿನಿಂದ ಈ 4 ರಾಶಿಯವರಿಗೆ ಅದೃಷ್ಟ, ಅಕ್ಟೋಬರ್ 30 ರವರೆಗೆ, ತಾಯಿ ಲಕ್ಷ್ಮಿಯ ಅಪಾರ ಅನುಗ್ರಹ!


ಅಕ್ಟೋಬರ್ 13: ಬುಧವಾರ -  ನವರಾತ್ರಿಯ 8ನೇ ದಿನ ಮಹಾಅಷ್ಟಮಿ ಇರುತ್ತದೆ. ಈ ದಿನ ದುರ್ಗಾಷ್ಟಮಿ ಆಚರಿಸಲಾಗುತ್ತದೆ. 


ಅಕ್ಟೋಬರ್ 15 : ಶುಕ್ರವಾರ - ಅಶ್ವಿನಿ ತಿಂಗಳ ಶುಕ್ಲ ಪಕ್ಷದ ದಶಮಿಯಂದು ದಸರಾ ಹಬ್ಬ ಆಚರಿಸಲಾಗುತ್ತದೆ. ಈ ಹಬ್ಬ ದುಷ್ಟ ಶಕ್ತಿಗಳ ಮೇಲೆ ಒಳ್ಳೆಯ ಶಕ್ತಿಗಳ ವಿಜಯದ ಸಾಂಕೇತಿಕ ಪರ್ವವಾಗಿದೆ.


24 ಅಕ್ಟೋಬರ್: ಭಾನುವಾರ - ಈ ದಿನ ಉತ್ತರ ಭಾರತದಲ್ಲಿ ವಿಶೇಷವಾಗಿ ಕರ್ವಾಚೌತ್ ರೂಪದಲ್ಲಿ ಆಚರಿಸಲಾಗುತ್ತದೆ. ಈ ದಿನ ಸುಮಂಗಲಿಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ನಿರಾಹಾರ ವೃತ ಕೈಗೊಳ್ಳುತ್ತಾರೆ.


ಇದನ್ನೂ ಓದಿ-ನಿಮ್ಮ ಅಡುಗೆ ಮನೆಯಲ್ಲಿರುವ ಮೆಣಸಿನ ಪುಡಿ ಕಲಬೆರಕೆಯೇ ? ಸುಲಭವಾಗಿ ಹೀಗೆ ಪತ್ತೆ ಹಚ್ಚಿ


(ಸೂಚನೆ -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-ಮನೆಯಲ್ಲಿ ಸುಖ ಶಾಂತಿ ಬೇಕಾದರೆ ಅಡುಗೆ ಮನೆಯಲ್ಲಿ ತಪ್ಪಿಯೂ ಇಡಬೇಡಿ ಈ ವಸ್ತುಗಳನ್ನು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.