ನವದೆಹಲಿ : ಪ್ರತಿಯೊಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಬಯಸುತ್ತಾನೆ. ತನ್ನ ಮನೆಯಲ್ಲಿ ಜಗಳ ಮತ್ತು ಸಂಘರ್ಷಗಳು ಆಗಬಾರದು ಎಂದು ಎಲ್ಲರೂ ಬಯಸುತ್ತಾರೆ. ಕೆಲವೊಮ್ಮೆ ಎಲ್ಲವೂ ಮಿತಿಮೀರಿ ನಡೆದು ಹೋಗುತ್ತದೆ. ಹೀಗಾದಾಗ ಮನೆಯ ವಾತಾವರಣ ಹಾಳಾಗುತ್ತದೆ ಮತ್ತು ಸಂತೋಷ ಮತ್ತು ಶಾಂತಿ ಕದಡುತ್ತದೆ. ಈ ಸಮಸ್ಯೆಗಳಿಗೆ ವಾಸ್ತು ಕೂಡ ಕಾರಣವಾಗಿರಬಹುದು. ವಾಸ್ತು ಪ್ರಕಾರ, ಅಡುಗೆಮನೆಯಲ್ಲಿ (Kitchen tips) ಮಾಡುವ ಕೆಲವು ತಪ್ಪುಗಳು ಮನೆಯಲ್ಲಿ ಅಶಾಂತಿಯನ್ನು ಉಂಟುಮಾಡಬಹುದು. ಇದರಿಂದಾಗಿ, ಮನೆಯ ನೆಮ್ಮದಿ ಹಾಳಾಗುವುದು ಮಾತ್ರವಲ್ಲ, ಕುಟುಂಬದ ಸದಸ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ವಾಸ್ತು ಶಾಸ್ತ್ರದ (Vastu shaastra) ಪ್ರಕಾರ, ಅಡುಗೆಮನೆಯಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಹುಷಾರಾಗಿರಬೇಕು.
ಅಡುಗೆಮನೆಯಲ್ಲಿ ಔಷಧಿಗಳನ್ನು ಇಡಬಾರದು :
ಸಾಮಾನ್ಯವಾಗಿ ಅನೇಕ ಜನರಿಗೆ ಅಡುಗೆಮನೆಯಲ್ಲಿ ಔಷಧಿಗಳನ್ನು ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ, ಹೀಗೆ ಮಾಡುವುದು ತಪ್ಪು. ವಾಸ್ತು ಶಾಸ್ತ್ರದ ಪ್ರಕಾರ (Vastu shaastra), ಔಷಧವನ್ನು ಅಡುಗೆಮನೆಯಲ್ಲಿ ಇಡಬಾರದು. ಹಾಗೆ ಮಾಡುವುದರಿಂದ, ರೋಗ ಹೆಚ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಆರೋಗ್ಯದ ಸಮಸ್ಯೆಯಿಂದಾಗಿ (Health problem) ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚಾಗಬಹುದು. ಈ ಕಾರಣದಿಂದಾಗಿ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಇದನ್ನೂ ಓದಿ : Navratri Vrat Rules : ನವರಾತ್ರಿಯ ಉಪವಾಸದ ಸಮಯದಲ್ಲಿ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರಗಳನ್ನ!
ಕಲಸಿದ ಹಿಟ್ಟು :
ಅನೇಕ ಬಾರಿ ಜನರು ಉಳಿದಿರುವ ಹಿಟ್ಟನ್ನು ಫ್ರಿಜ್ ನಲ್ಲಿ ಇಟ್ಟು ನಂತರ ಬಳಸುತ್ತಾರೆ. ಹಾಗೆ ಮಾಡುವುದರಿಂದ ಆರೋಗ್ಯಕ್ಕೆ ಹಾನಿಕಾರಕ ಮಾತ್ರ ಅಲ್ಲ, ಶನಿ ಮತ್ತು ರಾಹುಗಳ ಮೇಲೆ ನಕಾರಾತ್ಮಕ ಪರಿಣಾಮ (Negetive Impact) ಬೀರುತ್ತದೆ. ಶಾಸ್ತ್ರಗಳ ಪ್ರಕಾರ, ಬೆರೆಸಿದ ಹಿಟ್ಟನ್ನು ಇಟ್ಟುಕೊಳ್ಳುವುದು ತಪ್ಪು ಎಂದು ಪರಿಗಣಿಸಲಾಗುತ್ತದೆ.
ಅಡುಗೆಮನೆಯಲ್ಲಿ ದೇವರನ್ನು ಇಡಬಾರದು :
ದೇವರ ಮನೆಯನ್ನು (pooja room) ಅಡುಗೆ ಮನೆಯಲ್ಲಿ ಇಡಬಾರದು. ಅಡಿಗೆ ಮನೆ, ತಾಯಿ ಅನ್ನಪೂರ್ಣೆಯ ಸ್ಥಳ. ಅಗ್ನಿ ದೇವರು ಕೂಡ ಇಲ್ಲಿ ನೆಲೆಸುತ್ತಾರೆ. ಆದರೆ, ವಾಸ್ತು ಪ್ರಕಾರ ಅಡುಗೆಮನೆಯಲ್ಲಿ ದೇವರ ಮನೆಯನ್ನು ನಿರ್ಮಿಸಬಾರದು. ಅಡುಗೆ ಮನೆಯಲ್ಲಿ ಎಲ್ಲಾ ರೀತಿಯ ಆಹಾರವನ್ನು (food) ಬೇಯಿಸಲಾಗುತ್ತದೆ. ಹೀಗಾಗಿ, ಅಡುಗೆಮನೆಯಲ್ಲಿ ದೇವಸ್ಥಾನವಿದ್ದರೆ ಅದು ಋಣಾತ್ಮಕ ಪರಿಣಾಮವನ್ನು ಬೀರುತ್ತದೆ.
ಇದನ್ನೂ ಓದಿ : ಅಕ್ಟೋಬರ್ ತಿಂಗಳಲ್ಲಿ, ಈ 5 ರಾಶಿಗಳಿಗೆ ಸಿಗಲಿದೆ ಬಂಪರ್ ಗಳಿಕೆಯ ಅವಕಾಶ..!
ಮುರಿದ ಮತ್ತು ಬಿರುಕುಗೊಂಡ ಪಾತ್ರೆಗಳನ್ನು ಇಡಬಾರದು :
ವಾಸ್ತು ಪ್ರಕಾರ (Vastu tips) ಬಿರುಕು ಬಿಟ್ಟ ಮತ್ತು ಒಡೆದ ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ಇಟ್ಟುಕೊಳ್ಳುವುದು ಸರಿಯಲ್ಲ. ಇದು ಮನೆಯ ಆರ್ಥಿಕ ಸ್ಥಿತಿಯನ್ನು ಹದಗೆಡಿಸುತ್ತದೆ ಮತ್ತು ಸಾಲವನ್ನು ಹೆಚ್ಚಿಸುತ್ತದೆ. ಇದರೊಂದಿಗೆ, ಪರಸ್ಪರ ಭಿನ್ನಾಭಿಪ್ರಾಯಗಳು ಕೂಡ ಹೆಚ್ಚಾಗುತ್ತವೆ.
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯಲ್ಲಿ (Kitchen vastu) ಶೂ ಮತ್ತು ಚಪ್ಪಲಿಗಳನ್ನು ತೆಗೆದುಕೊಂಡುಬಾರದು. ಅಡುಗೆಮನೆಯಲ್ಲಿ ಶೂ ಮತ್ತು ಚಪ್ಪಲಿಗಳನ್ನು ಧರಿಸಿದರೆ, ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಕಾರಣದಿಂದಾಗಿ, ಕೊಳಕು ಮತ್ತು ರೋಗಾಣುಗಳು ಅಡುಗೆಮನೆಗೆ ತಲುಪುತ್ತವೆ. ಅಲ್ಲದೆ, ತಾಯಿ ಅನ್ನಪೂರ್ಣ (Godess Annapoorna) ಅಡುಗೆಮನೆಯಲ್ಲಿ ವಾಸಿಸುತ್ತಾಳೆ ಮತ್ತು ಅವಳು ಶೂ ಮತ್ತು ಚಪ್ಪಲಿ ಧರಿಸುವುದರಿಂದ ಅವಮಾನಿತಳಾಗುತ್ತಾಳೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.