ನಿಮ್ಮ ಅಡುಗೆ ಮನೆಯಲ್ಲಿರುವ ಮೆಣಸಿನ ಪುಡಿ ಕಲಬೆರಕೆಯೇ ? ಸುಲಭವಾಗಿ ಹೀಗೆ ಪತ್ತೆ ಹಚ್ಚಿ

ಇತ್ತೀಚೆಗೆ FSSAI ಕಲಬೆರಕೆ ಕೆಂಪು ಮೆಣಸಿನ ಪುಡಿಯನ್ನು ಹೇಗೆ ಗುರುತಿಸುವುದು ಎನುವುದನ್ನು ತಿಳಿಸಿದೆ. ಹಾಗಿದ್ದರೆ ಅಸಲಿ  ಮತ್ತು ಕಲಬೆರಕೆ ಕೆಂಪು ಮೆಣಸಿನ ಪುಡಿಯನ್ನು ಹೇಗೆ ಗುರುತಿಸುವುದು ನೋಡೋಣ. 

Written by - Ranjitha R K | Last Updated : Oct 1, 2021, 06:20 PM IST
  • ಮಸಾಲೆಗಳಲ್ಲೂ ಕಲಬೆರಕೆ .
  • ಮೆಣಸಿನ ಪುಡಿಯಲ್ಲಿ ಇಟ್ಟಿಗೆ ಪುಡಿ ಅಥವಾ ಮರಲು ಬೆರೆಸಲಾಗಿದೆಯೇ ನೋಡಿ
  • ಕಲಬೆರಕೆ ಮೆಣಸಿನ ಪುಡಿಯನ್ನು ಗುರುತಿಸುವುದು ಬಹಳ ಸುಲಭ
ನಿಮ್ಮ ಅಡುಗೆ ಮನೆಯಲ್ಲಿರುವ ಮೆಣಸಿನ ಪುಡಿ ಕಲಬೆರಕೆಯೇ ? ಸುಲಭವಾಗಿ ಹೀಗೆ ಪತ್ತೆ ಹಚ್ಚಿ title=
ಮಸಾಲೆಗಳಲ್ಲೂ ಕಲಬೆರಕೆ . (file photo)

ನವದೆಹಲಿ : ಇತ್ತೀಚಿನ ದಿನಗಳಲ್ಲಿ, ಯಾವುದು ಅಸಲಿ ಮತ್ತು ಯಾವುದು ನಕಲಿ ಎನ್ನುವುದನ್ನು ಕಂಡು ಹಿಡಿಯುವುದು ಬಹಳ ಕಷ್ಟ. ಅಕ್ಕಿ, ಹಿಟ್ಟು, ತುಪ್ಪ, ಹಾಲು, ಮೊಸರು, ಎಣ್ಣೆ, ಹಣ್ಣು ಮತ್ತು ತರಕಾರಿಗಳವರೆಗೆ ಎಲ್ಲವೂ ಕಲಬೆರಕೆಯೇ.. ಇವುಗಳ ಗುಣಮಟ್ಟವನ್ನು ಪತ್ತೆ ಹಚ್ಚುವುದು ಗ್ರಾಹಕರಿಗೆ  ಸಾಧ್ಯವಾಗುವುದಿಲ್ಲ. ತರಕಾರಿಗಳನ್ನು ತ್ವರಿತವಾಗಿ ಬೆಳೆಯಲು ವಿವಿಧ ರಾಸಾಯನಿಕಗಳನ್ನು ಮನಬಂದಂತೆ ಬಳಸಲಾಗುತ್ತದೆ. ಇಂಜೆಕ್ಷನ್ ಮೂಲಕ ಹಣ್ಣುಗಳನ್ನು ಬೇಗನೆ ಹಣ್ಣಾಗಿಸಲಾಗುತ್ತದೆ. ಇಷ್ಟು ಮಾತ್ರವಲ್ಲ, ಮಸಾಲೆಗಳಲ್ಲಿಯೂ ಕಲಬೆರೆಕೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, FSSAI  ಸರ್ಕಾರದ ಪರವಾಗಿ ವಿವಿಧ ರೀತಿಯ ಆಹಾರ ಪದಾರ್ಥಗಳಲ್ಲಿನ ಕಲಬೆರಕೆಯನ್ನು ಹೇಗೆ ಗುರುತಿಸುವುದು ಎಂಬುದರ ಕುರಿತು ಜಾಗೃತಿ ಅಭಿಯಾನವನ್ನು ಆರಂಭಿಸಿದೆ.

ಇತ್ತೀಚೆಗೆ FSSAI ಕಲಬೆರಕೆ ಕೆಂಪು ಮೆಣಸಿನ ಪುಡಿಯನ್ನು ಹೇಗೆ ಗುರುತಿಸುವುದು ಎನುವುದನ್ನು ತಿಳಿಸಿದೆ. ಹಾಗಿದ್ದರೆ ಅಸಲಿ  ಮತ್ತು ಕಲಬೆರಕೆ ಕೆಂಪು ಮೆಣಸಿನ ಪುಡಿಯನ್ನು (adulterated chilly powder) ಹೇಗೆ ಗುರುತಿಸುವುದು ನೋಡೋಣ. 

ಇದನ್ನೂ ಓದಿ : ಬೆಳಗಿನ ಉಪಹಾರದಲ್ಲಿ ಈ ಎರಡು ವಸ್ತುಗಳನ್ನು ಸೇವಿಸಿದರೆ ಸಾಕು, ಸಿಗಲಿದೆ ಭಾರೀ ಪ್ರಯೋಜನ

ನಿಮ್ಮ ಅಡುಗೆ ಮನೆಯಲಿರುವ ಮೆಣಸಿನ ಪುಡಿ ಕಲಬೆರಕೆಯೇ ? 
ಎಫ್‌ಎಸ್‌ಎಸ್‌ಎಐ ತನ್ನ ಅಧಿಕೃತ ಟ್ವಿಟರ್ (twitter)  ಹ್ಯಾಂಡಲ್‌ನಲ್ಲಿ ಶುದ್ದ ಮತ್ತು ಕಲಬೆರಕೆ ಕೆಂಪು ಮೆಣಸಿನ ಪುಡಿಯನ್ನು ಗುರುತಿಸಲು ಸರಳವಾದ ಟ್ರಿಕ್ ಅನ್ನು ತೋರಿಸಿಕೊಟ್ಟಿದೆ. ಅಲ್ಲದೆ ಈ ಪ್ರಕ್ರಿಯೆಯನ್ನು ಸರಳವಾಗಿ ವಿವರಿಸುವ ವೀಡಿಯೊವನ್ನು (Video) ಹಂಚಿಕೊಂಡಿದೆ. 

 

ಮನೆಯಲ್ಲಿಯೇ ಸುಲಭವಾಗಿ ಈ ಪರೀಕ್ಷೆ ನಡೆಸಬಹುದು : 
ಶುದ್ದ ಕೆಂಪು ಮೆಣಸಿನ ಪುಡಿಯನ್ನು (Red chlli powder) ಗುರುತಿಸಲು FSSAI ಅತ್ಯಂತ ಸರಳವಾದ ವಿಧಾನವನ್ನು ಶಿಫಾರಸು ಮಾಡುತ್ತದೆ. ನೀವು ಅದನ್ನು ಮನೆಯಲ್ಲಿಯೇ ಮಾಡಬಹುದು ಮತ್ತು ಸತ್ಯವನ್ನುಕಂಡುಕೊಳ್ಳಬಹುದು. ಇದಕ್ಕೆ ಯಾವುದೇ ಪ್ರಯೋಗಾಲಯದ ಅಗತ್ಯವಿಲ್ಲ.

ಇದನ್ನೂ ಓದಿ : Hair Care: ಕೂದಲನ್ನು ನೈಸರ್ಗಿಕವಾಗಿ ಆರೋಗ್ಯವಾಗಿರಿಸಲು ಶಾಂಪೂ ಮಾಡುವ ಮೊದಲು ಈ ಸಣ್ಣ ವಿಧಾನವನ್ನು ಅನುಸರಿಸಿ

ಶುದ್ದ ಮತ್ತು ಕಲಬೆರಕೆ ಮೆಣಸಿನ ಪುಡಿ ಗುರುತಿಸಲು ಇರುವ ಸುಲಭ ಮಾರ್ಗ :
1. ಮೊದಲು ಒಂದು ಲೋಟ ನೀರು (water) ತೆಗೆದುಕೊಳ್ಳಿ .
2. ಈಗ ಒಂದು ಚಮಚ ಕೆಂಪು ಮೆಣಸಿನ ಪುಡಿಯನ್ನು ನೀರಿನಲ್ಲಿ ಹಾಕಿ.
3. ಈಗ ಒಂದು ಚಮಚದೊಂದಿಗೆ ಮೆಣಸಿನ ಪುಡಿಯನ್ನು ನೀರಿನಲ್ಲಿ ಬೆರೆಸುವುದು ಬೇಡ,  ಮೆಣಸಿನಹುಡಿ ಅದಾಗ್ಯೆ ನೀರಿನಲ್ಲಿ ಬೆರೆಯಲಿ. 
4.  ಈಗ ಈರಿನಲ್ ನೆನೆಸಿದ ಮೆನಣಸಿನ ಪುಡಿಯನ್ನು ಅಂಗೈಯಲ್ಲಿ ಹಾಕಿ ನಿಧಾನವಾಗಿ ಉಜ್ಜಿ. 
5.  ಉಜ್ಜಿದ ನಂತರ ಕಲ್ಲುಗಳಂತೆ ಭಾಸವಾದರೆ ಅದು ಅಶುದ್ಧ ಅದರಲ್ಲಿ ಇಟ್ಟಿಗೆ ಪುಡಿ ಅಥವಾ ಮರಳು ಬೆರೆತಿದೆ ಎಂದರ್ಥ .
6. ಇನ್ನು ಮೆಣಸಿನ ಪುಡಿ ತೀರಾ ಮೃದುವಾಗಿದ್ದರೂ, ಅದರಲ್ಲಿ ಸೋಪ್ ಪುಡಿ ಬೆರೆತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News