ನವದೆಹಲಿ: ಕಿತ್ತಳೆ ಬಹುತೇಕರು ತಿನ್ನಲು ಇಷ್ಟಪಡುವ ಒಂದು ರುಚಿಕರವಾದ ಹಣ್ಣು. ಇದರ ಜ್ಯೂಸ್ ಕೂಡ ಮಾರುಕಟ್ಟೆಗಳಲ್ಲಿ ಹೆಚ್ಚು ಮಾರಾಟವಾಗುತ್ತದೆ. ಆದರೆ ಜನರು ಸಾಮಾನ್ಯವಾಗಿ ಕಿತ್ತಳೆ ತಿಂದ ನಂತರ ಸಿಪ್ಪೆ(Orange Peel)ಯನ್ನು ಎಸೆಯುತ್ತಾರೆ. ಆದರೆ ಕಿತ್ತಳೆ ಸಿಪ್ಪೆ ತುಂಬಾ ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದಿದೆಯೇ? ಇದನ್ನು ಔಷಧಿಯಾಗಿಯೂ ಬಳಸಬಹುದು.


COMMERCIAL BREAK
SCROLL TO CONTINUE READING

ಕಿತ್ತಳೆ ಸಿಪ್ಪೆಯ 5 ಪ್ರಯೋಜನಗಳು


ಸಿಪ್ಪೆಯೂ ಕಿತ್ತಳೆ ಹಣ್ಣಿನಂತೆ ಪೌಷ್ಟಿಕ(Orange Peel Benefits)ವಾಗಿದೆ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ವಿಟಮಿನ್-ಸಿ ಕಿತ್ತಳೆ ಸಿಪ್ಪೆಯಲ್ಲಿ ಕಂಡುಬರುತ್ತದೆ, ಇದು ನಮ್ಮ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಇದು ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಿತ್ತಳೆ ಸಿಪ್ಪೆಯ 5 ದೊಡ್ಡ ಪ್ರಯೋಜನಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.


ಇದನ್ನೂ ಓದಿ: Papaya Health Tips: ಈ ಆರೋಗ್ಯ ಸಮಸ್ಯೆ ಇರುವವರು ಪಪ್ಪಾಯಿ ಸೇವಿಸಲೇಬಾರದು!


1. ಮುಖದ ಕಾಂತಿ ಹೆಚ್ಚಾಗುತ್ತದೆ


ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅನೇಕ ವಿಧಗಳಲ್ಲಿ ಬಳಸಲಾಗುತ್ತದೆ. ಈ ಪುಡಿ(Benefits Of Orange Peel)ಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಲೇಪಿಸಿದರೆ ಮುಖವು ಕಾಂತಿಯುತವಾಗಿರುತ್ತದೆ.


2. ಮೊಡವೆ ತಡೆಗಟ್ಟುವಿಕೆ


ಮುಖದ ಮೇಲೆ ಉಗುರು ಮೊಡವೆಗಳು ಹೆಚ್ಚಾಗಿ ನಿಮಗೆ ತೊಂದರೆ ನೀಡುತ್ತವೆ. ಇದನ್ನು ತೆಗೆದುಹಾಕಲು ಕಿತ್ತಳೆ ಸಿಪ್ಪೆಯ ಪುಡಿಯಲ್ಲಿ ಸ್ವಲ್ಪ ಪ್ರಮಾಣದ ರೋಸ್ ವಾಟರ್ ಮಿಶ್ರಣ ಮಾಡಿ ಬಳಸಬಹುದು.


3. ಸೊಳ್ಳೆ ನಿವಾರಕವಾಗಿ ಬಳಕೆ


ಉರಿಯುತ್ತಿರುವ ಕಲ್ಲಿದ್ದಲಿನ ಮೇಲೆ ಕಿತ್ತಳೆ ಹಣ್ಣಿನ ಒಣಗಿದ ಸಿಪ್ಪೆಗಳು(Homemade Orange Peel) ಅಥವಾ ಅದರ ಪುಡಿಯನ್ನು ಹಾಕುವ ಮೂಲಕ ಕೋಣೆಯಲ್ಲಿ ಹೊಗೆಯನ್ನು ಮಾಡಬಹುದು. ಹೀಗೆ ಮಾಡುವುದರಿಂದ ನೊಣ, ಸೊಳ್ಳೆಗಳನ್ನು ಓಡಿಸಬಹುದು.


4. ರೂಮ್ ಫ್ರೆಶನರ್


ನೀವು ಕಿತ್ತಳೆ ಸಿಪ್ಪೆಗಳನ್ನು ಬಳಸಿ ರೂಮ್ ಫ್ರೆಶ್ನರ್ ಅನ್ನು ಸಹ ಮಾಡಬಹುದು. ಇದಕ್ಕಾಗಿ ನೀವು ನೀರನ್ನು ಚೆನ್ನಾಗಿ ಕುದಿಸಿ ಮತ್ತು ಅದರಲ್ಲಿ ಸಿಪ್ಪೆಗಳನ್ನು ಹಾಕಿ. ಇದರೊಂದಿಗೆ ಕೆಲವು ದಾಲ್ಚಿನ್ನಿ ಮತ್ತು 3-4 ಲವಂಗವನ್ನು ಸೇರಿಸಿ. ಇದು ಸುಗಂಧವನ್ನು ನೀಡುತ್ತದೆ, ಇದು ಕೊಠಡಿಗೆ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ.


5. ಕೂದಲಿಗೆ ಸಹ ಪ್ರಯೋಜನಕಾರಿ


ಕಿತ್ತಳೆ ಸಿಪ್ಪೆಯು(Orange Peel Face Packs) ಚರ್ಮಕ್ಕೆ ಮಾತ್ರವಲ್ಲ, ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ. ತಲೆಹೊಟ್ಟು ಹೋಗಲಾಡಿಸಲು ಇದು ತುಂಬಾ ಪರಿಣಾಮಕಾರಿ. ಅದೇ ರೀತಿ ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ.


ಇದನ್ನೂ ಓದಿ: Weight Loss Tips : ನೀವು ದೇಹ ತೂಕ ಇಳಿಸಿಕೊಳ್ಳಬೇಕೇ? ಹಾಗಿದ್ರೆ, ಈ ಆಹಾರ ಪದ್ಧತಿ ಅನುಸರಿಸಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.