ಬೆಂಗಳೂರು: Palmistry:  ಹಸ್ತ ರೇಖಾ ಶಾಸ್ತ್ರದ (Hast Rekha Shastra) ಮೂಲಕ ಯಾವ ವ್ಯಕ್ತಿ ಜೀವನದಲ್ಲಿ ಯಶಸ್ವಿಯಾಗುತ್ತಾನೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಕೆಲವು ಜನರು ಅಂತಹ ಅದೃಷ್ಟದಿಂದ (Luck) ಜನಿಸಿರುತ್ತಾರೆ, ಅವರು ಯಾವುದೇ ಸ್ಥಿತಿಯಲ್ಲಿ ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಈ ಲೇಖನದಲ್ಲಿ ಅಂತಹ ಕೆಲವು ಗುರುತುಗಳ ಅಥವಾ ಚಿಹ್ನೆಗಳ ಬಗ್ಗೆ ಮಾಹಿತಿ ನೀಡಿಲಿದ್ದೇವೆ. ಹೆಣ್ಣು ಮಕ್ಕಳ ಕೈಯಲ್ಲಿ ಇಂತಹ ಗುರುತುಗಳು ಕಂಡು ಬಂದರೆ ಅವರು ಜೀವನದಲ್ಲಿ ಅಪಾರ ಯಶಸ್ಸು (Success) , ಸಾಕಷ್ಟು ಖ್ಯಾತಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.


COMMERCIAL BREAK
SCROLL TO CONTINUE READING

ತಮ್ಮ ಕೈಯಲ್ಲಿ ಈ ಗುರುತುಗಳನ್ನು ಹೊಂದಿರುವ ಹುಡುಗಿಯರು ಜೀವನದಲ್ಲಿ ಸಾಕಷ್ಟು ಯಶಸ್ಸು, ಗೌರವವನ್ನು ಪಡೆಯುತ್ತಾರಂತೆ:
ಕೈಯಲ್ಲಿ ಮೀನಿನ ಗುರುತು ಹೊಂದಿರುವುದು:

ಕೈಯಲ್ಲಿ ಮೀನಿನ ಗುರುತು (Fish Mark) ಹೊಂದಿರುವ ಹುಡುಗಿಯರು ಮತ್ತು ಮಹಿಳೆಯರನ್ನು ತುಂಬಾ ಅದೃಷ್ಟವಂತರು (Lucky) ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಅವರ ಜೊತೆಗೆ ಅವರ ಕುಟುಂಬಗಳ ಅದೃಷ್ಟವೂ ಹೊಳೆಯುತ್ತದೆ. 


ಇದನ್ನೂ ಓದಿ- Dreams In Pitru Paksha : ಪಿತೃ ಪಕ್ಷದಲ್ಲಿ ಬೀಳುವ ಕನಸುಗಳಿಗೂ ಇದೇ ವಿಶೇಷ ಅರ್ಥ


ಮೊದಲ ಬೆರಳಿನ ಮೇಲೆ ವೃತ್ತದ ಗುರುತು (Circle mark on the first finger):
ಮೊದಲ ಬೆರಳಿನ ಮೇಲೆ ವೃತ್ತದ ಗುರುತು ಇದ್ದರೆ, ಅಂತಹ ಹುಡುಗಿಯರು ಜೀವನದಲ್ಲಿ ಬಹಳ ಪ್ರಸಿದ್ಧರಾಗುತ್ತಾರೆ ಎಂಬ ನಂಬಿಕೆ ಇದೆ. ಶ್ರೀಮಂತರಾಗುವುದರ ಜೊತೆಗೆ, ಅವರು ಬುದ್ಧಿವಂತರು ಮತ್ತು ಹೆಚ್ಚಿನ ಗೌರವವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.


ಕಮಲದ ಗುರುತು (Lotus Mark) :
ಕಮಲವು ಭಗವಾನ್ ವಿಷ್ಣುವಿಗೆ (Lord Vishnu) ಪ್ರಿಯವಾಗಿದೆ ಮತ್ತು ಲಕ್ಷ್ಮಿ ದೇವಿಯು (Goddess Lakshmi) ಕಮಲದ ಮೇಲೆ ಕುಳಿತಿದ್ದಾಳೆ. ಇಂತಹ ಪರಿಸ್ಥಿತಿಯಲ್ಲಿ, ಕೈಯಲ್ಲಿ ಕಮಲದ ಗುರುತು ಹೊಂದಿರುವ ಹುಡುಗಿಯ ಮೇಲೆ ಸದಾ ತಾಯಿ ಲಕ್ಷ್ಮಿ ಮತ್ತು ವಿಷ್ಣು ದೇವರ ಕೃಪಾಕಟಾಕ್ಷ ಇರಲಿದೆ ಎನ್ನಲಾಗಿದೆ.


ಇದನ್ನೂ ಓದಿ- Shopping In Pitru Paksha: ಪಿತೃ ಪಕ್ಷದಲ್ಲೂ ಮಾಡಬಹುದು ಶಾಪಿಂಗ್, ಆದರೆ ಈ ಬಗ್ಗೆ ಇರಲಿ ಎಚ್ಚರ


ಸ್ವಸ್ತಿಕ ಗುರುತು (Swastika mark): 
ಹುಡುಗಿಯ ಕೈಯಲ್ಲಿ ಸ್ವಸ್ತಿಕ ಗುರುತು (Swastika mark) ಇರುವುದು ಕೂಡ ತುಂಬಾ ಮಂಗಳಕರ. ಅಂತಹ ಹುಡುಗಿಯರು ಸದ್ಗುಣಶೀಲರು ಮತ್ತು ಧಾರ್ಮಿಕ ನಂಬಿಕೆಗಳನ್ನೂ ಹೊಂದಿರುತ್ತಾರೆ. ಅವರು ಜೀವನದಲ್ಲಿ ಬಹಳಷ್ಟು ಗೌರವವನ್ನು ಪಡೆಯುತ್ತಾರೆ ಮತ್ತು ಅವರು ಇತರರ ಜೀವನದಲ್ಲಿ ಧನಾತ್ಮಕತೆಯನ್ನು ತರುತ್ತಾರೆ ಎಂದು ಹೇಳಲಾಗುತ್ತದೆ.


(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.