Makar Sankranti 2023: ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಪ್ರತಿವರ್ಷ ಒಟ್ಟು 12 ಸಂಕ್ರಾಂತಿಗಳು ಬರುತ್ತವೆ. ಆದರೆ, ಅವುಗಳಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಈ ದಿನ ಸೂರ್ಯ ಮಕರರಾಶಿಗೆ ಪ್ರವೇಶಿಸುತ್ತಾನೆ. ಸಂಕ್ರಾಂತಿಗೆ ಸೂರ್ಯನನ್ನು ಆರಾಧಿಸಲಾಗುತ್ತದೆ ಮತ್ತು ಪೂಜೆ ಸಲ್ಲಿಸಲಾಗುತ್ತದೆ. ಸಂಕ್ರಾಂತಿಯ ದಿನ ಸೂರ್ಯ ತನ್ನ ಉತ್ತರಾಯಣ ಯಾತ್ರೆ ಆರಂಭಿಸುತ್ತಾನೆ ಎನ್ನಲಾಗಿದೆ. ಇದೆ ಕಾರಣದಿಂದ ಇದನ್ನು ಉತ್ತರಾಯಣ ಎಂದೂ ಕೂಡ ಕರೆಯಲಾಗುತ್ತದೆ. ಮಕರ ಸಂಕ್ರಾಂತಿಯ ಮಹಾಪರ್ವವನ್ನು ದೇಶಾದ್ಯಂತ ಸಾಕಷ್ಟು ಹರ್ಷೋಲ್ಲಾಸಗಳಿಂದ ಆಚರಿಸಲಾಗುತ್ತದೆ. ಈ ದಿನ ಸ್ನಾನ ಹಾಗೂ ದಾನಕ್ಕೆ ವಿಶೇಷ ಮಹತ್ವವಿದೆ. ಗೂಗಲ್ ನಲ್ಲಿ ಈ ಹಬ್ಬಕ್ಕೆ ಸಂಬಂಧಿಸಿದ ಯಾವ ಸಂಗತಿಗಳನ್ನು ಹೆಚ್ಚಿಗೆ ಹುಡುಕಾಟ ನಡೆಸಲಾಗುತ್ತಿದೆ ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

1. ಮಕರ ಸಂಕ್ರಾಂತಿ 2023 ಯಾವಾಗ
ಹಾಗೆ ನೋಡಿದರೆ ಪ್ರತಿವರ್ಷ ಜನವರಿ 14ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ. ಆದರೆ, ಈ ಬಾರಿ ಉದಯ ತಿಥಿಯ ಅನುಸಾರ ಮಕರ ಸಂಕ್ರಾಂತಿ ಜನವರಿ 15ರಂದು ಆಚರಿಸಲಾಗುತ್ತದೆ.

2. ಮಕರ ರಾಶಿಗೆ ಸೂರ್ಯನ ಪ್ರವೇಶ ಯಾವಾಗ? 
ಜೋತಿಷ್ಯ ಲೆಕ್ಕಾಚಾರದ ಪ್ರಕಾರ ಸೂರ್ಯ ಜನವರಿ 14 ರಂದು ರಾತ್ರಿ 8 ಗಂಟೆ 21 ನಿಮಿಷಕ್ಕೆ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದೇ ಕಾರಣದಿಂದ ಮಕರ ಸಂಕ್ರಾಂತಿಯನ್ನು ಈ ಬಾರಿ ಜನವರಿ 15ರಂದು ಆಚರಿಸಲಾಗುವುದು. 

3. ಮಕರ ಸಂಕ್ರಾಂತಿ 2023ರ ಶುಭ ಮುಹೂರ್ತ ಯಾವುದು?
ಮಕರ ಸಂಕ್ರಾಂತಿಯ ಪುಣ್ಯಕಾಲ ಬೆಳಗ್ಗೆ 7 ಗಂಟೆ 15 ನಿಮಿಷದಿಂದ ಆರಂಭಗೊಳ್ಳುತ್ತದೆ. ಇದು ಸಂಜೆ 7 ಗಂಟೆ 46 ನಿಮಿಷಕ್ಕೆ ಮುಕ್ತಾಯವಾಗಲಿದೆ.

4. ಮಕರ ಸಂಕ್ರಾಂತಿ ದಿನ ಗ್ರಹಗಳ ಸ್ಥಿತಿ ಹೇಗಿರಲಿದೆ?
ಮಕರ ಸಂಕ್ರಾಂತಿಯ ದಿನ ಒಂದು ಅತ್ಯಂತ ಅದ್ಭುತ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ.  ಜನವರಿ 14ರಂದು ಸೂರ್ಯ ಮಕರ ರಾಶಿಗೆ ಪ್ರವೆಶಿಸಲಿದ್ದಾನೆ ಹಾಗೂ ಈ ರಾಶಿಯಲ್ಲಿ ಈಗಾಗಲೇ ಶನಿ ಹಾಗೂ ಬುಧರು ವಿರಾಜಮಾನರಾಗಿದ್ದಾರೆ.

5. ಮಕರ ಸಂಕ್ರಾಂತಿಯ ದಿನ ಯಾವ ದೇವ-ದೇವತೆಗಳನ್ನು ಪೂಜಿಸಲಾಗುತ್ತದೆ
ಮಕರ ಸಂಕ್ರಾಂತಿಯ ದಿನ ಸೂರ್ಯನ ಜೊತೆಗೆ ವಿಷ್ಣು ಹಾಗೂ ತಾಯಿ ಲಕ್ಷ್ಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಪರ್ವವನ್ನು ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನ ಹೆಸರುಗಳ ಅಡಿ ಆಚರಿಸಲಾಗುತ್ತದೆ.

6. ಮಕರ ಸಂಕ್ರಾಂತಿ ಹೇಗೆ ಆಚರಿಸಬೇಕು?
ಮಕರ ಸಂಕ್ರಾಂತಿಯಂದು ಶುಭ ಮುಹೂರ್ತದಲ್ಲಿಸ್ನಾನ ದಾನ ಹಾಗೂ ಪುಣ್ಯಕ್ಕೆ ವಿಶೇಷ ಮಹತ್ವವಿದೆ. ಕೆಲ ರಾಜ್ಯಗಳಲ್ಲಿ ಈ ದಿನ ಕೆಲವರು ಬೆಲ್ಲ ಮತ್ತು ಎಳ್ಳನ್ನು ಹಚ್ಚಿ ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಾರೆ. ಕೆಲ ರಾಜ್ಯಗಳಲ್ಲಿ ಗಾಳಿಪಟ ಹಾರಿಸುವ ವಿಶೇಷ ವಾಡಿಕೆ ಕೂಡ ಇದೆ. ಉತ್ತರ ಭಾರತದಲ್ಲಿ ಈ ಪರ್ವವನ್ನು ಖಿಚಡಿ ಎಂದೂ ಕೂಡ ಕರೆಯಲಾಗುತ್ತದೆ. 


ಇದನ್ನೂ ಓದಿ-Goddess Lakshmi Tips: ಇಂತಹ ಜನರ ಮನೆಗೆ ಲಕ್ಷ್ಮಿ ಎಂದಿಗೂ ಕಾಲಿಡುವುದಿಲ್ಲ

7. ಮಕರ ಸಂಕ್ರಾಂತಿ ಉಪಾಯಗಳು
ಮಕರ ಸಂಕ್ರಾಂತಿಯ ದಿನ ನೀರಿನಲ್ಲಿ ಕಪ್ಪು ಎಳ್ಳು ಹಾಗೂ ಗಂಗಾಜಲ ಬೆರೆಸಿ ಸ್ನಾನ ಮಾಡಬೇಕು. ಈ ರೀತಿ ಮಾಡುವುದರಿಂದ ಸೂರ್ಯದೇವನ ಕೃಪೆ ಲಭಿಸುತ್ತದೆ ಎನ್ನಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಶನಿಯ ಶುಭಾಶಿರ್ವಾದ ಕೂಡ ಲಭಿಸುತ್ತದೆ. ಈ ದಿನ ಸೂರ್ಯನಿಗೆ ಅರ್ಘ್ಯ ನೀಡುವುದು ಅತ್ಯಂತ ಶುಭಕರ ಎನ್ನಲಾಗಿದೆ.


ಇದನ್ನೂ ಓದಿ-Skin Care Tips: 40ರ ವಯಸ್ಸಲ್ಲಿ 18ರ ಯುವತಿಯಂತೆ ಕಾಣಬೇಕೆ? ಈ ಉಪಾಯಗಳನ್ನು ಅನುಸರಿಸಿ

8. ಮಕರ ಸಂಕ್ರಾಂತಿ ಪೂಜಾ ವಿಧಿ
ಮಕರ ಸಂಕ್ರಾಂತಿ ದಿನ ಸೂರ್ಯ ಉತ್ತರಾಯಣ ಯಾತ್ರೆ ಕೈಗೊಳ್ಳುತ್ತಾನೆ. ಇದರಿಂದ ದೇವ-ದೇವತೆಗಳ ದಿನಗಳು ಆರಂಭವಾಗುತ್ತವೆ ಮತ್ತು ಮಂಗಳ ಕಾರ್ಯಗಳು ಮತ್ತೆ ಆರಂಭವಾಗುತ್ತವೆ. ಸೂರ್ಯನಿಗೆ ಅರ್ಘ್ಯ ನೀಡುವಾಗ ಅದರಲ್ಲಿ ಜಲ, ಕೆಂಪು ಹೂವು, ವಸ್ತ್ರ, ಗೋದಿ, ಅಕ್ಷತೆ, ಅಡಿಕೆ ಇತ್ಯಾದಿಗಳನ್ನು ಅರ್ಪಿಸಲಾಗುತ್ತದೆ. ಪೂಜೆಯ ಬಳಿಕ ಜನರು ನಿರ್ಗತಿಕರಿಗೆ ಅಥವಾ ಬಡವರಿಗೆ ದಾನ ಮಾಡುತ್ತಾರೆ. ಈ ದಿನ ಖಿಚಡಿ ತಯಾರಿಸುವಿಕೆಗೆ ವಿಶೇಷ ಮಹತ್ವವಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.