Skin Care Tips: 40ರ ವಯಸ್ಸಲ್ಲಿ 18ರ ಯುವತಿಯಂತೆ ಕಾಣಬೇಕೆ? ಈ ಉಪಾಯಗಳನ್ನು ಅನುಸರಿಸಿ

How To Look Younger​: ಹೆಚ್ಚುತ್ತಿರುವ ವಯಸ್ಸಿನ ಕಾರಣ ಹಲವರು ತಮ್ಮ ತ್ವಚೆಯ ಬಗ್ಗೆ ಚಿಂತಿತರಾಗುತ್ತಾರೆ, ಆದರೆ, ಕೆಲವು ಉಪಾಯಗಳನ್ನು ಅನುಸರಿಸುವ ಮೂಲಕ ನೀವು ಅದನ್ನು ತಪ್ಪಿಸಬಹುದು. ಹೌದು, ನಮ್ಮ ಕೆಲವು ಅಭ್ಯಾಸಗಳು ನಮ್ಮ ವಯಸ್ಸಾಗುವಿಕೆಯನ್ನು ತಡೆಯಲು ಸಹಾಯ ಮಾಡುತ್ತವೆ. ಯಾವ ವಿಧಾನಗಳನ್ನು ಅನುಸರಿಸುವ ಮುಲ್ಲಕ ನಾವು ನಮ್ಮ ವಯಸ್ಸನ್ನು ಕಡಿಮೆ ಮಾಡಿಕೊಳ್ಳಬಹುದು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jan 3, 2023, 03:41 PM IST
  • ನಿಮ್ಮ ತ್ವಚೆಯನ್ನು ದೀರ್ಘಕಾಲ ಯೌವನವಾಗಿರಿಸಲು ನೀವು ಬಯಸಿದರೆ,
  • ಪ್ರತಿದಿನ ಪಪ್ಪಾಯಿಯನ್ನು ಸೇವಿಸಿ. ಏಕೆಂದರೆ
  • ದು ವಯಸ್ಸಾಗುವಿಕೆಯ ವಿರೋಧಿ ಗುಣಗಳನ್ನು ಹೊಂದಿದೆ.
Skin Care Tips: 40ರ ವಯಸ್ಸಲ್ಲಿ  18ರ ಯುವತಿಯಂತೆ ಕಾಣಬೇಕೆ? ಈ ಉಪಾಯಗಳನ್ನು ಅನುಸರಿಸಿ title=
Beauty Tips

Foods To Keep Skin Young: ಅನೇಕ ಜನರು ಹೆಚ್ಚುತ್ತಿರುವ ವಯಸ್ಸಿನ ಬಗ್ಗೆ ಚಿಂತಿತರಾಗುತ್ತಾರೆ. ಮುಖದಲ್ಲಿ ಹೆಚ್ಚಾಗುತ್ತಿರುವ ಲಕ್ಷಣಗಳು ಕಂಡಾಕ್ಷಣ ಉದ್ವಿಗ್ನರಾಗುತ್ತಾರೆ. ಆದರೆ ಅದರ ಮೇಲೆ ನಮಗೆ ಯಾವುದೇ ರೀತಿಯ ನಿಯಂತ್ರಣವಿಲ್ಲ. ಇನ್ನೊಂದೆಡೆ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಅದನ್ನು ನೀವು ತಪ್ಪಿಸಬಹುದು. ಹೌದು, ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಕೆಲ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ವಯಸ್ಸನ್ನು 10 ವರ್ಷ ಕಡಿಮೆ ಮಾಡಿಕೊಳ್ಳಬಹುದು. ಯಾವ ವಿಧಾನಗಳನ್ನು ಅನುಸರಿಸುವ ಮೂಲಕ ನಮ್ಮ ವಯಸ್ಸನ್ನು ನಾವು ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ತ್ವಚೆಯನ್ನು ಯೌವ್ವನಭರಿತವಾಗಿಡಲು ಏನು ಮಾಡಬೇಕು?
ಪಪ್ಪಾಯಿ

ನಿಮ್ಮ ತ್ವಚೆಯನ್ನು ದೀರ್ಘಕಾಲ ಯೌವನವಾಗಿರಿಸಲು ನೀವು ಬಯಸಿದರೆ, ಪ್ರತಿದಿನ ಪಪ್ಪಾಯಿಯನ್ನು ಸೇವಿಸಿ. ಏಕೆಂದರೆ ಇದು ವಯಸ್ಸಾಗುವಿಕೆಯ ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಚರ್ಮದ ಆರೈಕೆಗಾಗಿ ಪಪ್ಪಾಯಿಯನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳಿವೆ. ಅದರಿಂದ ಇದು ವಯಸ್ಸಾಗುವಿಕೆಯ ವಿರುದ್ಧ ಹೋರಾಡುತ್ತದೆ.

ದಾಳಿಂಬೆ
ದಾಳಿಂಬೆಯಲ್ಲಿ ಪ್ಯೂನಿಕಾಲಾಜಿನ್ ಎಂಬ ಸಂಯುಕ್ತ ಇದೆ. ಇದು ಕಾಲಜನ್ ಅನ್ನು ಸಂರಕ್ಷಿಸುತ್ತದೆ ಮತ್ತು ನಿಮ್ಮ ವಯಸ್ಸಾಗುವಿಕೆಯನ್ನು ತಡೆಯುತ್ತದೆ.ಹೀಗಾಗಿ ನಿಮ್ಮ ತ್ವಚೆಯು ದೀರ್ಘಕಾಲ ಯೌವನವಾಗಿರಬೇಕೆಂದು ನೀವು ಬಯಸಿದರೆ, ನೀವು ದಾಳಿಂಬೆಯನ್ನು ಸೇವಿಸಬಹುದು. ಹೀಗೆ ಮಾಡುವುದರಿಂದ ನೀವು 40 ವರ್ಷ ವಯಸ್ಸಿನಲ್ಲೂ 30 ಆಗಿ ಕಾಣಿಸುತ್ತೀರಿ.

ಹಸಿರು ಎಲೆಗಳ ತರಕಾರಿಗಳು
ಹಸಿರು ಎಲೆಗಳ ತರಕಾರಿಗಳಲ್ಲಿನ
ಕ್ಲೋರೊಫಿಲ್ ಚರ್ಮದಲ್ಲಿ ಕಾಲಜನ್ ಅನ್ನು ಹೆಚ್ಚಿಸುತ್ತದೆ. ಇದು ವಯಸ್ಸಾಗುವಿಕೆಯ ವಿರುದ್ಧ ಹೋರಾಡಲು ದೇಹದ ಅಂಶಗಳಿಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ-Diabetes: ಮಧುಮೇಹ ರೋಗಿಗಳಿಗೆ ತುಂಬಾ ಪರಿಣಾಮಕಾರಿಯಾಗಿದೆ ಜಾಮೂನ್ ವಿನೆಗಾರ್

ಮೊಸರು
ಮೊಸರು ತಿನ್ನುವುದು ಆರೋಗ್ಯಕ್ಕೆ ತುಂಬಾ ಮುಖ್ಯವಾಗಿದೆ. ಇದು ಪ್ರೋಬಯಾಟಿಕ್‌ಗಳನ್ನು ಒಳಗೊಂಡಿರುವುದೇ ಇದಕ್ಕೆ ಕಾರಣ. ಇದು ದೇಹದಲ್ಲಿನ ಉತ್ತಮ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ, ಆದರೆ ಮೊಸರಿನಲ್ಲಿ ಇರುವ ಲ್ಯಾಕ್ಟಿಕ್ ಆಮ್ಲವು ಸುಕ್ಕುಗಳನ್ನು ತೆಗೆದುಹಾಕುತ್ತದೆ ಮತ್ತು ದೇಹದ ರಂಧ್ರಗಳನ್ನು ತುಂಬುತ್ತದೆ. ಮೊಸರಿನಲ್ಲಿ ಕಂಡುಬರುವ ವಿಟಮಿನ್ ಬಿ 12 ಚರ್ಮವನ್ನು ಹೊಳೆಯುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ-Alert ! 2023 ರಲ್ಲಿ ಕೊರೊನಾ ಬಳಿಕ 2ನೇ ಅತಿದೊಡ್ಡ ಮಾರಕ ಸಾಬೀತಾಗಬಹುದು ಈ ಸೂಪರ್ ಬಗ್

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿವೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News