ನವದೆಹಲಿ : ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿ ತನ್ನ ಮದುವೆ ಮತ್ತು ಜೀವನ ಸಂಗಾತಿಯ ಬಗ್ಗೆ ಬಹಳಷ್ಟು ಕನಸು ಕಾಣುತ್ತಾರೆ. ಮದುವೆ ಹೇಗೆ ಆಗಬೇಕು ಎಂಬುದರ ಬಗ್ಗೆ ಯೋಜನೆಗಳನ್ನು ಹಾಕುತ್ತಾರೆ. ಮದುವೆಯ ಬಗ್ಗೆ ಪ್ರತಿಯೊಬ್ಬರ ಆಲೋಚನೆಗಳು ವಿಭಿನ್ನವಾಗಿರುತ್ತದೆ. ಕೆಲವರು ಅದ್ದೂರಿ ಮದುವೆಯಾಗಲು ಬಯಸುತ್ತಾರೆ. ಇನ್ನು ಕೆಲವರು ಸರಳ ವಿವಾಹದಲ್ಲಿ ನಂಬಿಕೆ ಇಟ್ಟಿರುತ್ತಾರೆ. ಸರಳವೋ ಅದ್ದೂರಿಯೋ ಪ್ರತಿಯೊಬ್ಬರಿಗೂ ತಮ್ಮ ಮದುವೆಯ ಬಗ್ಗೆ ಕನಸಂತೂ ಇದ್ದೇ ಇರುತ್ತದೆ. ಆದರೆ ಈ ರಾಶಿಯವರು (Zodiac sign) ತಮ್ಮ ಮಾಡುವೆ ವಿಜೃಂಭಣೆಯಿಂದ ಆಗಬೇಕು ಎಂದು ಬಯಸುತ್ತಾರೆಯಂತೆ. ಅದಕ್ಕಾಗಿ ಸರ್ವ ಪ್ರಯತ್ನವನ್ನೂ ಮಾಡುತ್ತಾರೆಯಂತೆ. 


COMMERCIAL BREAK
SCROLL TO CONTINUE READING

ಮೇಷ :
ಈ ರಾಶಿಚಕ್ರದ ಜನರು ಗ್ಲಾಮರ್ ಪ್ರಿಯರು. ತಮ್ಮ ಮದುವೆಯನ್ನು (Marriage)  ಸ್ಮರಣೀಯವಾಗಿಸಲು ಬಯಸುತ್ತಾರೆ. ಅಲ್ಲದೆ, ಹನಿಮೂನ್‌ಗೆ ಸಂಬಂಧಿಸಿದಂತೆ ಕೂಡಾ ಅವರ ಯೋಜನೆಗಳು ಬಹಳ ದೊಡ್ಡದಾಗಿರುತ್ತದೆ. 


ತುಲಾ :
ಈ ರಾಶಿಯ ಜನರು ಕೂಡಾ ಅದ್ದೂರಿ ವಿವಾಹದಲ್ಲಿಯೇ ನಂಬಿಕೆಯುಳ್ಳವರು. ಇವರು ಅದ್ದೂರಿ ಮದುವೆಯ ಕನಸು ಕಾಣುವುದಲ್ಲದೆ, ಅದರ ಸಿದ್ಧತೆಗಾಗಿ ಬಹಳ ಯೋಜನೆಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಇವರು ತಮ್ಮ ಮದುವೆಯಲ್ಲಿ ವಿಂಟೇಜ್ ಮತ್ತು ಕ್ಲಾಸಿ ಲುಕ್ ಇಷ್ಟಪಡುತ್ತಾರೆ.


ಇದನ್ನೂ ಓದಿ: Krishna Janmashtami 2021: ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯಂದು ಈ ಅದ್ಭುತ ಯೊಗ ನಿರ್ಮಾಣಗೊಳ್ಳುತ್ತಿದೆ
 
ಧನು ರಾಶಿ :
ಈ ರಾಶಿಚಕ್ರದ (zodiac sign) ಜನರು ತಮ್ಮ ಮದುವೆ ಮತ್ತು ಜೀವನ ಸಂಗಾತಿಯ ಬಗ್ಗೆ ಬಹಳ ಅದೃಷ್ಟವತರಾಗಿರುತ್ತಾರೆ. ಅವರ ಕನಸಿನಂತೆಯೇ ಅವರ ವಿವಾಹವು ವಿಜೃಂಭಣೆಯಿಂದ ನೆರವೇರುತ್ತದೆ. ತಮ್ಮ ನೆಚ್ಚಿನ ಸ್ಥಳದಲ್ಲಿ ಮದುವೆಯಾಗಲು ಹಣವನ್ನು ನೀರಿನಂತೆ ಖರ್ಚು ಮಾಡುವುದಕ್ಕೂ ಮುಂದೆ ಹಿಂದೆ ನೋಡುವುದಿಲ್ಲ. 


ಕುಂಭ ರಾಶಿ:
ಈ ರಾಶಿಚಕ್ರದ ಜನರು ಪ್ರತಿ ವಿಷಯದಲ್ಲೂ ರಾಯಲ್ ಶೈಲಿಯನ್ನು (Royal style) ಇಷ್ಟಪಡುತ್ತಾರೆ. ಮದುವೆಯ ವಿಷಯಕ್ಕೆ ಬಂದರೂ  ಅವರ ಮೊದಲ ಆಯ್ಕೆ ಇದೇ ಆಗಿರುತ್ತದೆ. ಅದಕ್ಕಾಗಿ ದೊಡ್ಡ ಮೊತ್ತದ  ಹಣವನ್ನು ಖರ್ಚು ಮಾಡಲು ಸಿದ್ಧರಾಗಿರುತ್ತಾರೆ. 


ಮೀನ ರಾಶಿ:
ಈ ರಾಶಿಯವರು ಮದುವೆ ಸಾಂಪ್ರದಾಯಿಕ ಶೈಲಿಯಲ್ಲಿಯೇ ನಡೆಯಬೇಕು ಎಂದು ಬಯಸುತ್ತಾರೆ. ಆದರೆ ಮದುವೆಯ ದಿನದ ಉಡುಗೆ, ಆಭರಣ, ಅಲಂಕಾರಗಳಲ್ಲಿ ಮಾತ್ರ ರಾಜಿ ಮಾಡಿಕೊಳ್ಳುವುದಿಲ್ಲ. 


ಇದನ್ನೂ ಓದಿ : Bathing Tips: ಸ್ನಾನಕ್ಕೆ ಸಂಬಂಧಿಸಿದ ಈ ತಪ್ಪುಗಳನ್ನು ನೀವೂ ಕೂಡ ಮಾಡುತ್ತಿಲ್ಲವಲ್ಲ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ