Krishna Janmashtami 2021: ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯಂದು ಈ ಅದ್ಭುತ ಯೊಗ ನಿರ್ಮಾಣಗೊಳ್ಳುತ್ತಿದೆ

Shri Krishna Janmashtami: ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಒಂದು ಅದ್ಭುತ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಅಪರೂಪದ ಯೋಗದ ಸಂದರ್ಭದಲ್ಲಿ ವೃತವನ್ನು ಕೈಗೊಂಡು, ಪೂಜೆ ಸಲ್ಲಿಸುವುದರಿಂದ ಎಲ್ಲ ಪಾಪಗಳಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ.

Written by - Nitin Tabib | Last Updated : Aug 16, 2021, 11:21 AM IST
  • ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಒಂದು ಅದ್ಭುತ ಯೋಗ ನಿರ್ಮಾಣಗೊಳ್ಳುತ್ತಿದೆ.
  • ಈ ಅಪರೂಪದ ಯೋಗದ ಸಂದರ್ಭದಲ್ಲಿ ವೃತವನ್ನು ಕೈಗೊಂಡು, ಪೂಜೆ ಸಲ್ಲಿಸುವುದರಿಂದ ಎಲ್ಲ ಪಾಪಗಳಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ.
  • ಹಲವು ಜನ್ಮಗಳಿಂದ ಪ್ರೇತ ಯೋನಿಯಲ್ಲಿ ಓಡಾಡುತ್ತಿರುವ ಜನರಿಗೆ ಈ ಅಧ್ಬುತ ಯೋಗದಲ್ಲಿ ಪೂಜೆ ಸಲ್ಲಿಸುವುದರಿಂದ ಮುಕ್ತಿ ಸಿಗಲಿದೆ
Krishna Janmashtami 2021: ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯಂದು ಈ ಅದ್ಭುತ ಯೊಗ ನಿರ್ಮಾಣಗೊಳ್ಳುತ್ತಿದೆ title=

Shri Krishna Janmashtami - ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬವು ಶ್ರೀಕೃಷ್ಣನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಮತ್ತು ಆಶೀರ್ವಾದವನ್ನು ಪಡೆಯಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಕೃಷ್ಣ ಭಕ್ತರು ಈ ದಿನಕ್ಕಾಗಿ ಬಹಳ ಕಾತುರದಿಂದ ಕಾಯುತ್ತಾರೆ. ಈ ದಿನ ಶ್ರೀಕೃಷ್ಣನ (Krishna Janmashtami) ದೇವಸ್ಥಾನಗಳನ್ನು ಅಲಂಕರಿಸಲಾಗುತ್ತದೆ ಮತ್ತು ಉಪವಾಸ ಮಾಡುವ ಮೂಲಕ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಶ್ರೀಕೃಷ್ಣನನ್ನು ಪೂಜಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ಧಾರ್ಮಿಕ ನಂಬಿಕೆ.

ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ತಿಥಿಯಂದು ಶ್ರೀ ಕೃಷ್ಣ ಜನಿಸಿದ್ದ ಎನ್ನಲಾಗುತ್ತಿದೆ. ಈ ಬಾರಿ ಈ ತಿಥಿ ಆಗಸ್ಟ್ 30ರಂದು ಸೋಮವಾರಕ್ಕೆ ಬೀಳುತ್ತಿದೆ. 

ಇದನ್ನೂ ಓದಿ-Bathing Tips: ಸ್ನಾನಕ್ಕೆ ಸಂಬಂಧಿಸಿದ ಈ ತಪ್ಪುಗಳನ್ನು ನೀವೂ ಕೂಡ ಮಾಡುತ್ತಿಲ್ಲವಲ್ಲ

ಜನ್ಮಾಷ್ಟಮಿಯ ದಿನ ನಿರ್ಮಾಣಗೊಳ್ಳುತ್ತಿದೆ ಈ ಅಪರೂಪದ ಅದ್ಭುತ ಯೋಗ
ಜೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭದಂದು 6 ತತ್ವಗಳ ವಿಶೇಷ ಯೋಗ (Shubha Muhurt) ನಿರ್ಮಾಣಗೊಳ್ಳುತ್ತಿದೆ.  ಇದೊಂದು ತುಂಬಾ ಅಪರೂಪದ ಯೋಗವಾಗಿದೆ. ಈ ಬಾರಿಯ ಜನ್ಮಾಷ್ಟಮಿಯಂದು ಭಾದ್ರ ಕೃಷ್ಣ ಪಕ್ಷ, ರೋಹಿಣಿ ನಕ್ಷತ್ರ, ಅರ್ಧರಾತ್ರಿ ಕಾಲದ ಅಷ್ಟಮಿ ತಿಥಿ, ವೃಷಭ ರಾಶಿಯಲ್ಲಿ ಚಂದ್ರ ಹಾಗೂ ಸೋಮವಾರವಿರುವುದು ಅತ್ಯಂತ ಅಪರೂಪದ ಯೋಗ ಇದಾಗಿದೆ. ಅಂದರೆ ಅಷ್ಟಮಿ ತಿಥಿ ರಾತ್ರಿ ಕೇವಲ 1ಗಂಟೆ 59ರವರೆಗೆ ಮಾತ್ರ ಇರಲಿದೆ ಮತ್ತು ಇದಾದ ಬಳಿಕ ನವಮಿ ತಿಥಿ ಆರಂಭವಾಗಲಿದೆ ಎಂಬುದನ್ನು ಕೃಷ್ಣ ಭಕ್ತರು ನೆನಪಿನಲ್ಲಿಡಬೇಕು.

ಇದನ್ನೂ ಓದಿ-Cracking Knuckles: ನಿಮಗೂ ಬೆರಳು ಮುರಿಯುವ ಅಭ್ಯಾಸವಿದೆಯಾ? ಮೊದಲು ಈ ವರದಿ ಓದಿ

ಈ ಅಪರೂಪದ ಯೋಗದಲ್ಲಿ ಪೂಜೆಯ ಲಾಭ
ಈ ಬಾರಿಯ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ನಿರ್ಮಾಣಗೊಳ್ಳುತ್ತಿರುವ ಅಪರೂಪದ ಯೋಗದಲ್ಲಿ ವೃತ ಕೈಗೊಂಡು ಪೂಜೆ (Janmashtami Puja) ಸಲಿಸ್ಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಹಾಗೂ ಭಕ್ತರಿಗೆ ಶ್ರೀಕೃಷ್ಣನ ಕೃಪೆ ಲಭಿಸುತ್ತದೆ. ಹಲವು ಜನ್ಮಗಳಿಂದ ಪ್ರೇತ ಯೋನಿಯಲ್ಲಿ ಓಡಾಡುತ್ತಿರುವ ಜನರಿಗೆ ಈ ಅಧ್ಬುತ ಯೋಗದಲ್ಲಿ ಪೂಜೆ ಸಲ್ಲಿಸುವುದರಿಂದ ಮುಕ್ತಿ ಸಿಗಲಿದೆ. ಈ ಯೋಗದಲ್ಲಿ ವಾಸುದೇವ ಕೃಷ್ಣನಿಗೆ ಪೂಜೆ ಸಲ್ಲಿಸುವುದರಿಂದ ಸಿದ್ಧಿ ಪ್ರಾಪ್ತಿಯಾಗಲಿದೆ ಹಾಗೂ ಎಲ್ಲಾ ರೀತಿಯ ಸಂಕಷ್ಟಗಳಿಂದ ಮುಕ್ತಿ ಸಿಗಲಿದೆ.

ಇದನ್ನೂ ಓದಿ-ತಾಮ್ರದ ಉಂಗುರ ಹಾಕುವುದರಿಂದ ನಿವಾರಣೆಯಾಗಲಿದೆ ಈ ದೋಷಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸ

Trending News