ಅಮೆರಿಕದ ಟ್ರೀ ಆಫ್ ಗೋಲ್ಡ್ ಎಂದು ಪ್ರಖ್ಯಾತ ಪಡೆದಿರುವ ಟಬುಬಿಯಾ ಹೂವು ಈಗ ಸಿಲಿಕಾನ್ ಸಿಟಿಯಲ್ಲಿ ಜನರ ಕಣ್ಣನ್ನ ಕಲರ್ ಫುಲ್ ಮಾಡಿದೆ. ಬೇಸಿಗೆ ಸಮಯದಲ್ಲೂ ಕೂಲ್ ಆಗಿ ಅರಳಿ ನಗುತ್ತಲೇ ನಗರದ ರಸ್ತೆಗಳಲ್ಲಿ, ಪಾರ್ಕ್ ಗೆ ಬರುವ ಜನರ ಗಮನ ಸೆಳೆಯುತ್ತಿದೆ. ಜನರು ಕೂಡ ಟಬುಬಿಯಾದ ಪಿಂಕ್‌ ಕಲರ್ ಗೆ ಫಿದಾ ಆಗಿ ಲೋಕವನ್ನು ಮರೆತು ಫೋಟೋ ಕ್ಲಿಕ್ ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ .


COMMERCIAL BREAK
SCROLL TO CONTINUE READING

ಹೌದು, ಉದ್ಯಾನ ನಗರಿ ಎಂದೇ ಖ್ಯಾತಿ ಪಡೆದಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ  ಎಲ್ಲಿ ನೋಡಿದರೂ ಪಿಂಕ್‌ ಕಲರ್ ನ ಆರ್ಭಟ ಜೋರಾಗಿದೆ. ಪಾರ್ಕ್ ಗಳಲ್ಲಿ ಹೆಜ್ಜೆ ಹೆಜ್ಜೆಗೂ ಪಿಂಕ್‌ ಕಲರ್ ಕಣ್ಮನ ಸೆಳೆಯುತ್ತಿದೆ. ಕೆಳಗೆ ನೋಡಿದರು ಪಿಂಕ್‌ ಕಲರ್.. ಆಕಾಶದತ್ತ ನೋಡಿದ್ರೂ ಪಿಂಕ್‌ ಕಲರ್ ಹೀಗೆ ಗಾರ್ಡನ್ ಸಿಟಿಯಲ್ಲಿ ಎಲ್ಲಿ ನೋಡಿದರೂ ಪಿಂಕ್‌ ಮೋನಿಯಾ ಮನೆಮಾಡಿದೆ. 


ಮೇಲಿನ ಚಿತ್ರದಲ್ಲಿ ನೀವು ನೋಡ್ತಿರುವ ಹೂವಿನ ಹೆಸರು ಟಬುಬಿಯಾ ಹೂವು ಹುಟ್ಟಿದ್ದು ಅಮೆರಿಕ ದೇಶದಲ್ಲಿ ಆದರೂ ಬೆಂಗಳೂರಿನಲ್ಲಿ ಹವಾ ತೋರಿತ್ತಿದೆ. ಬೆಂಗಳೂರಿನಲ್ಲಿ ಜನವರಿಯಿಂದ ಶುರುವಾಗಿ ಮಾರ್ಚ್, ಏಪ್ರಿಲ್, ಮೇ,  ತಿಂಗಳು ಬಂತಂದ್ರೇ ಸಾಕು ಈ ಟಬುಬಿಯಾದ ಹೂವಿನ ಸೊಬಗು ಜಾಸ್ತಿ ಆಗುತ್ತದೆ. ಟಬುಬಿಯಾ ಮರದ ಸುತ್ತ ಮುತ್ತ ಮೇಲೆ ಕೆಳಗೆ ಎಲ್ಲಿ ನೋಡಿದರೂ ಪಿಂಕ್‌ ಮಯ ಆಗ್ಬಿಡುತ್ತೆ....


ಇದನ್ನೂ ಓದಿ- ಸೇವಾ ನ್ಯೂನ್ಯತೆ ಎಸಗಿದ ಇಫ್ಕೋ ಟೋಕಿಯೋ ವಿಮಾ ಕಂಪನಿಗೆ ದಂಡ 


ಟಬುಬಿಯ ಹೂವಿನ ಪಿಂಕ್‌ ಕಲರ್ ಕಂಡು ಟಬುಬಿಯಾ ಹೂವಿನ ಜೊತೆಗೆ ಜನರು ಫೋಟೋ, ಸೆಲ್ಫಿ, ಕ್ಲಿಕ್ ಮಾಡುವದ್ರಲ್ಲಿ ಬ್ಯುಸಿ ಆಗಿದ್ದಾರೆ. ಇನ್ನೂ ಯುವಕ ಮತ್ತು ಯುವತಿಯರನ್ನು ಕೇಳಲೇ ಬೇಕಿಲ್ಲ. ಅವರೂ ಸಹ ತಮ್ಮ ಮೊಬೈಲ್ ನಿಂದಲೇ ಸಿನಿಮಾ ಸ್ಟೈಲ್ ನಲ್ಲಿ ಟಬಿಬಿಯಾ ಜೊತೆಗೆ ವಿವಿಧ ರೀತಿಯಲ್ಲಿ ರೀಲ್ಸ್ ಮಾಡುತ್ತಾ ಫೋಸ್ ನೀಡೋರ ಸಂಖ್ಯೆಯೂ ಹಚ್ಚಾಗಿದೆ.


ಸದ್ಯ ಬೆಂಗಳೂರಿನ ಕಬ್ಬನ್ ಪಾರ್ಕ್ , ಲಾಲ್ಬಾಗ್ ಪಾರ್ಕ್, ಫ್ರೀಡಂ ಪಾರ್ಕ್ ರಸ್ತೆ, ಕೆ ಆರ್, ಪುರಂ, ಎಚ್‌ಎಸ್‌ಆರ್ ಲೇಔಟ್ ನ ರಸ್ತೆಗಳಲ್ಲಿ ಟಬೂಬಿಯದ ಪಿಂಕ್‌ ಬ್ಯೂಟಿದ್ದೇ ಕಾರುಬಾರು. ಪಾರ್ಕ್ ಗೆ ಬಂದ ಜನರು ಪಿಂಕ್‌ ಬ್ಯೂಟಿ ಕಂಡು ಹೊಸ ಲೋಕಕ್ಕೆ ಹೋಗಿ ಟಬಿಬಿಯಾ ಜೊತೆಗೆ ಖುಷಿಯಿಂದ ಮುಳುಗಿ ತೇಲಾಡ್ತಿದ್ದಾರೆ. ಇನ್ನೂ ಮರದ ಕೆಳಗೆ ಕೂಡ ಸಂಪೂರ್ಣ ಪಿಂಕ್‌ ಮಯವಾಗಿದ್ದು ಜನರು ಕುಳಿತು ಎಂಜಾಯ್ ಮಾಡ್ತಿದ್ದಾರೆ.


ಇದನ್ನೂ ಓದಿ- ದೇವಾಲಯದ ಸಿಸಿ ಟಿವಿಯಲ್ಲಿ ನಿಗೂಢ ಬೆಳಕು- ದಿವ್ಯ ಜ್ಯೋತಿ ಎಂದ ಭಕ್ತರು


ಒಟ್ಟಿನಲ್ಲಿ ಪ್ರತಿ ಒಂದು ಋತುವಿಗೂ ಅದರದೇ ಆದ ಸೊಬಗಿದೆ. ಒಂದು ಕಾಲದಲ್ಲಿ ಒಂದೊಂದು ಹೂವು ಅರಳಿ ಜನರು ಗಮನ ಸೆಳೆಯುತ್ತದೆ. ಇನ್ನೂ ಈ ಹೂವನ್ನು ಎಲ್ ಸಾಲ್ವಡಾರ್ ದೇಶ ತನ್ನ ರಾಷ್ಟ್ರೀಯ ಹೂವಾಗಿ ಘೋಷಿಸಿದೆ ಎಂದು ಹೇಳಲಾಗುತ್ತದೆ. ಸದ್ಯ ಬೆಂಗಳೂರಿನಲ್ಲಿ ಕೂಡ ಟಬುಬಿಯದ ಪಿಂಕ್‌ ಹೂವಿನ ಸೊಬಗು ಎಲ್ಲರನ್ನು ಸಿಲಿಕಾನ್ ಸಿಟಿ ಪಿಂಕ್‌ ಮಯವಾಗಿದೆ ಅಂದರೆ ತಪ್ಪಾಗಲಾರದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.