ರಾಷ್ಟ್ರಮಟ್ಟದಲ್ಲಿ ಮಿಂಚಲು ಹೊರಟ ಹಳ್ಳಿ ಹೈದನಿಗೆ ಬೇಕಿದೆ ಸಹಾಯ ಹಸ್ತ

ಈಗ ವೆಂಕಟೇಶನನ್ನು ಸಾಕಿ ಸಲಹುತ್ತಿರುವ ಅಜ್ಜಿಗೆ ಸರಿಯಾದ ಮನೆಯಿಲ್ಲ, ಆದರೂ ಕೂಡ ಕೂಲಿ ಮಾಡಿ ಇಬ್ಬರು ಮಕ್ಕಳನ್ನು ಸಾಕಿದ್ದಾಳೆ.ಈಗ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲು ಮುಂದಾಗಿರುವ ವೆಂಕಟೇಶನಿಗೆ ಮುಂದಿನ ವಿದ್ಯಾಭ್ಯಾಸ ಮತ್ತು ಕ್ರೀಡಾ ಸಾಧನೆಗೆ ಸರ್ಕಾರದ ಸಹಾಯ ಹಸ್ತಬೇಕಾಗಿದೆ.

Written by - Zee Kannada News Desk | Last Updated : Apr 2, 2023, 04:02 PM IST
  • ವಿದ್ಯಾರ್ಥಿ ಸಾಧನೆಗೆ ಬಡತನ ಕಷ್ಟ ಕಾರ್ಪಣ್ಯಗಳು ಎದುರಾದರು ಕೂಡ ಅವುಗಳನ್ನು ಛಲ ಬಿಡದೆ ಎದುರಿಸಿ ಈಗ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲು ಹೊರಟಿದ್ದಾನೆ.
  • ಈಗ ವೆಂಕಟೇಶನನ್ನು ಸಾಕಿ ಸಲಹುತ್ತಿರುವ ಅಜ್ಜಿಗೆ ಸರಿಯಾದ ಮನೆಯಿಲ್ಲ ಆದರೂ ಕೂಡ ಕೂಲಿ ಮಾಡಿ ಇಬ್ಬರು ಮಕ್ಕಳನ್ನು ಸಾಕಿದ್ದಾಳೆ.
  • ಈಗ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲು ಮುಂದಾಗಿರುವ ವೆಂಕಟೇಶನಿಗೆ ಮುಂದಿನ ವಿದ್ಯಾಭ್ಯಾಸ ಮತ್ತು ಕ್ರೀಡಾ ಸಾಧನೆಗೆ ಸರ್ಕಾರದ ಸಹಾಯ ಹಸ್ತಬೇಕಾಗಿದೆ.
 ರಾಷ್ಟ್ರಮಟ್ಟದಲ್ಲಿ ಮಿಂಚಲು ಹೊರಟ ಹಳ್ಳಿ ಹೈದನಿಗೆ ಬೇಕಿದೆ ಸಹಾಯ ಹಸ್ತ title=

ಚಾಮರಾಜನಗರ: ಕ್ರೀಡೆ ಎಂದರೆ ಹಾಗೆ ಎಂತಹ ವ್ಯಕ್ತಿಯನ್ನೂ ಛಲ ಪರಿಶ್ರಮವೊಂದಿದ್ದರೆ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೊಗುತ್ತದೆ. ಈಗ ಇದಕ್ಕೆ ನಿದರ್ಶನ ಎನ್ನುವಂತೆ ಚಾಮರಾಜನಗರದ ವಿಕಲಚೇತನ ವಿದ್ಯಾರ್ಥಿಯೊಬ್ಬ ಈಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾನೆ.

ಹೌದು,ಚಾಮರಾಜನಗರ ಜಿಲ್ಲೆ ಯಳಂದೂರು ಕಿನಕನಹಳ್ಳಿ ಗ್ರಾಮದ ಅಂದ ವಿದ್ಯಾರ್ಥಿ ವೆಂಕಟೇಶ್ ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಪ್ರೌಢಶಾಲೆಯಲ್ಲಿ ವ್ಯಾಸಂಗಮಾಡುತ್ತಿದ್ದುಈಗ ಆ ವಿದ್ಯಾರ್ಥಿ ಸಾಧನೆಗೆ ಬಡತನ ಕಷ್ಟ ಕಾರ್ಪಣ್ಯಗಳು ಎದುರಾದರು ಕೂಡ ಅವುಗಳನ್ನು ಛಲ ಬಿಡದೆ ಎದುರಿಸಿ ಈಗ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲು ಹೊರಟಿದ್ದಾನೆ.

ಇದನ್ನೂ ಓದಿ: Crime News: ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ, 8 ಮಂದಿ ಸಾವು!

ಚಿಕ್ಕಂದಿನಿಂದಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದ ವೆಂಕಟೇಶನಿಗೆ ಆರಂಭದಲ್ಲಿ ಕ್ರೀಡೆಯಲ್ಲಿ ಆಸಕ್ತಿ ಇದ್ದರೂ ಕೂಡ ಅದನ್ನು ವ್ಯಕ್ತಪಡಿಸದೆ ಹಾಗೆ ಇದ್ದ, ಇದರ ಜೊತೆಗೆ ಶೇ ೮೦ ರಷ್ಟು ಕಣ್ಣಿನ ದೋಷ ಬೇರೆ, ಹೀಗಾಗಿ ಓದಲು ಕೂಡ ಸಾಕಷ್ಟು ಪರಿಪಾಟ ಪಡಬೇಕಾಗಿ ಬಂತು.ಅಜ್ಜಿಯ ಆಶ್ರಯದಲ್ಲಿ ಇದ್ದು ಈಗ ಕೆಸ್ತೂರು ಪ್ರೌಢಶಾಲೆಯಲ್ಲಿ ಹತ್ತನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವೆಂಕಟೇಶ್ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಈಗ ತಮ್ಮ ಜಿಲ್ಲೆಗೆ ಹೆಸರು ತಂದಿದ್ದಾನೆ.ಪ್ರತಿ ಗ್ರಾಮಗಳಲ್ಲಿ ಪಂಚಾಯಿತ್ತಿ ಮಟ್ಟದಲ್ಲಿ ನಡೆಯುವ ಈ ಗ್ರಾಮೀಣ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಈಗ ಗುಂಡು ಮತ್ತು ತಟ್ಟೆ ಎಸೆತದ ಸ್ಪರ್ಧೆಯಲ್ಲಿ ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ.ಇದಕ್ಕೆ ಅವರ ಶಿಕ್ಷಕರಾಗಿರುವ ಕುಮಾರ ನಾಯಕ ಮಾರ್ಗದರ್ಶನವೂ ಕೂಡ ಕಾರಣವಾಗಿದೆ.

ಇದನ್ನೂ ಓದಿ: Nadoja Belagallu Veeranna: ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಸಾವು!

ಈಗ ವೆಂಕಟೇಶನನ್ನು ಸಾಕಿ ಸಲಹುತ್ತಿರುವ ಅಜ್ಜಿಗೆ ಸರಿಯಾದ ಮನೆಯಿಲ್ಲ ಆದರೂ ಕೂಡ ಕೂಲಿ ಮಾಡಿ ಇಬ್ಬರು ಮಕ್ಕಳನ್ನು ಸಾಕಿದ್ದಾಳೆ.ಈಗ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲು ಮುಂದಾಗಿರುವ ವೆಂಕಟೇಶನಿಗೆ ಮುಂದಿನ ವಿದ್ಯಾಭ್ಯಾಸ ಮತ್ತು ಕ್ರೀಡಾ ಸಾಧನೆಗೆ ಸರ್ಕಾರದ ಸಹಾಯ ಹಸ್ತಬೇಕಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

Trending News