ಧಾರವಾಡ : ಧಾರವಾಡ ತಾಲ್ಲೂಕು ಮುಗದ ಗ್ರಾಮದ ನಿವಾಸಿ ಶಂಕರ ದಂಡಗಲ್ ಅನ್ನುವವರ ಮೋಟರ್ ಸೈಕಲ್ ನಂ.ಕೆಎ-25-ಎಕ್ಸ್-2906 ದಿ:10/01/2021ರಂದು ಕಳ್ಳತನವಾಗಿತ್ತು. ಆ ವಾಹನಕ್ಕೆ ಅವರು ಇಫ್ಕೋ ಟೋಕಿಯೋ ಜನರಲ್ ಇನಸುರೆನ್ಸ್ ಕಂಪನಿಯಿಂದ ವಿಮಾ ಮಾಡಿಸಿದ್ದರು. ಈ ಬಗ್ಗೆ ದೂರುದಾರ ಶಂಕರ ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: Nadoja Belagallu Veeranna: ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಸಾವು!
ವಿಮೆ ಮಾಡಿಸಿದ ತನ್ನ ದ್ವಿ ಚಕ್ರ ವಾಹನ ಕಳ್ಳತನವಾಗಿರುವುದರಿಂದ ಮತ್ತು ಆ ವಾಹನದ ಮೇಲೆ ತಾನು ಮಾಡಿಸಿದ ಎದುರುದಾರರ ಕಂಪನಿಯ ವಿಮೆ ಚಾಲ್ತಿಯಲ್ಲಿರುವುದರಿಂದ ಆ ವಾಹನದ ಆಯ್.ಡಿ.ವಿ. ಮೌಲ್ಯ ರೂ.30,000/- ಕೊಡುವಂತೆ ವಿಮಾ ಕಂಪನಿಗೆ ಕ್ಲೇಮ್ ಅರ್ಜಿ ಸಲ್ಲಿಸಿದ್ದರು.ಆ ಕ್ಲೇಮ ಅರ್ಜಿಯ ಮೇಲೆ ವಿಮಾ ಕಂಪನಿಯವರು ಯಾವುದೇ ಆದೇಶ ಮಾಡಿರಲಿಲ್ಲ. ಆ ರೀತಿ ವಿಮಾ ಕಂಪನಿಯವರು ಯಾವುದೇ ಆದೇಶ ಮಾಡದಿರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ವಿಮಾ ಕಂಪನಿಯವರ ಮೇಲೆ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: ರಾಷ್ಟ್ರಮಟ್ಟದಲ್ಲಿ ಮಿಂಚಲು ಹೊರಟ ಹಳ್ಳಿ ಹೈದನಿಗೆ ಬೇಕಿದೆ ಸಹಾಯ ಹಸ್ತ
ಸದರಿ ದೂರುಗಳ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರು ದೂರುದಾರನ ದ್ವಿ ಚಕ್ರ ವಾಹನದ ಮೇಲೆ ಎದುರುದಾರರು ನೀಡಿರುವ ವಿಮಾ ಪಾಲಸಿ ಚಾಲ್ತಿಯಿರುವುದರಿಂದ ಆ ವಾಹನ ಕಳ್ಳತನವಾದ ಪ್ರಯುಕ್ತ ಅದರ ಆಯ್.ಡಿ.ವಿ ಮೌಲ್ಯವನ್ನು ಕೊಡಲು ವಿಮಾ ಕಂಪನಿಯ ಹೊಣೆಯಾಗಿರುತ್ತದೆ ಅಂತಾ ತೀರ್ಪು ನೀಡಿದೆ.
ಅದಕ್ಕಾಗಿ ವಾಹನದ ಆಯ್.ಡಿ.ವಿ. ಮೌಲ್ಯ ರೂ.29,000/- ಹಾಗೂ ಅದರ ಮೇಲೆ ಶೇ.8 ರಂತೆ ದಿನಾಂಕ:11/01/2023 ರಿಂದ ಪೂರ್ತಿ ಸಂದಾಯವಾಗುವವರೆಗೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಆದೇಶಿಸಿದೆ. ಜೊತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ತೊಂದರೆಗಾಗಿ ರೂ.15,000/- ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.5,000/- ಸೇರಿ ಒಟ್ಟು ರೂ.49,000/- ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ವಿಮಾ ಕಂಪನಿಗೆ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.