ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ಪಿತೃಗಳಿಗೆ (Forefathers) ಮಹತ್ವದ ಸ್ಥಾನಮಾನ ಇದೆ. ಪಿತೃಗಳನ್ನು ಸಂತೃಪ್ತಿ ಪಡಿಸುವುದು ಆದ್ಯ ಕರ್ತವ್ಯ. ಜೀವನದಲ್ಲಿ ಉದ್ದಾರವಾಗ ಬೇಕಾದರೆ ಅದಕ್ಕೆ ಪಿತೃಪರಂಪರೆಯ ಆಶೀರ್ವಾದ ಅತಿಮುಖ್ಯ. ಪಿತೃಪರಂಪರೆಯ ಆಶೀರ್ವಾದ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ, ಕೆಲವೊಂದು ಸಂದರ್ಭದಲ್ಲಿ ಪಿತೃದೋಷ ಸುತ್ತಿಕೊಳ್ಳುತ್ತದೆ. ಇದರಿಂದ ಪಿತೃಗಳ ಆಶೀರ್ವಾದ, ರಕ್ಷೆ ನಮಗೆ ಲಭಿಸುವುದಿಲ್ಲ. ಅದಕ್ಕೆ ಪಿತೃದೋಷ (Pitra Dosha) ಕಾರಣ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಪಿತೃದೋಷ ಯಾವಾಗ ಆವರಿಸುತ್ತದೆ..?
1. ಹಿಂದಿನ ತಲೆಮಾರಿನವರು ಸತ್ತ ಮೇಲೆ ಮೋಕ್ಷ (Moksha) ಸಿಗದೇ ಹೋದರೆ ಪಿತೃದೋಷ ಆವರಿಸುತ್ತದೆ.
2. ಪೂರ್ವಜರು ತಿಳಿದೋ ತಿಳಿಯದೆಯೋ ಕೆಟ್ಟ ಕರ್ಮ (sin) ಮಾಡಿದ್ದರೆ ಜೀವಿತದಲ್ಲಿರುವವರಿಗೆ ಪಿತೃದೋಷ ಸುತ್ತಿಕೊಳ್ಳುತ್ತದೆ. 
3. ಪಿತೃ ಪರಂಪರೆಯಲ್ಲಿ ಯಾರಾದರೂ ತೃಪ್ತಿ ಇಲ್ಲದೇ ತೀರಿಕೊಂಡರೆ, ಅಂದರೆ ಅವರ ಯಾವುದಾದರೂ ಆಸೆ ಬಾಕಿ ಇದ್ದಾಗಲೂ ಪಿತೃದೋಷ (Pitra Dosha) ಉಂಟಾಗುತ್ತದೆ.
4. ಮೃತದೇಹಕ್ಕೆ ವಿಧಿವತ್ತಾಗಿ ಸಂಸ್ಕಾರ (Last rites) ಮಾಡದೇ ಹೋದಾಗಲೂ ಪಿತೃದೋಷ ಖಂಡಿತ
5. ಜ್ಯೋತಿಷ್ಯ ಪ್ರಕಾರ,  ರವಿ ಮತ್ತು ಶನಿಗ್ರಹಗಳು (Saturn) ಪರಿವರ್ತನೆಯಾದರೆ ಅಂದರೆ ರವಿ ರಾಶಿಯಲ್ಲಿ ಶನಿ ಮತ್ತು ಶನಿ ರಾಶಿಯಲ್ಲಿ ರವಿ ಇದ್ದರೆ ಪಿತೃದೋಷವಿರುತ್ತದೆ. 


 ಇದನ್ನೂ ಓದಿ : Mahashivratri 2021 : ಮಹಾ ಶಿವರಾತ್ರಿ ಉಪವಾಸದ ಮಹತ್ವ ಏನು


ಗಂಡನಿಗೆ ಪಿತೃದೋಷ ಇದ್ದರೆ ಅದಕ್ಕೆ ಹೆಂಡತಿ ಕೂಡಾ ಬಾಧ್ಯಸ್ಥಳು. ಅಂದರೆ ಗಂಡನ ಪಿತೃದೋಷದಲ್ಲಿ ಹೆಂಡತಿಯ ಪಾಲು ಕೂಡಾ ಇರುತ್ತದೆ. ಜ್ಯೋತಿಷ್ಯ (Astrology)  ಶಾಸ್ತ್ರದ ಪ್ರಕಾರ ಪಿತೃದೋಷ ಇದ್ದಾಗ ಈ ಕೆಳಗಿನ ಎಲ್ಲಾ ಸಮಸ್ಯೆಗಳು ಉಂಟಾಗುತ್ತವೆ
1. ಸಂತಾನ ಭಾಗ್ಯ ಇರುವುದಿಲ್ಲ
2. ಮಕ್ಕಳು ಉದ್ದಾರ ಆಗುವುದಿಲ್ಲ
3. ಮನೆಯಲ್ಲಿ ಸಾವು, ನೋವು ಉಂಟಾಗುತ್ತದೆ
4. ವೈವಾಹಿಕ ಜೀವನದಲ್ಲಿ (Marraige life) ನೆಮ್ಮದಿ ಇರುವುದಿಲ್ಲ
5. ವ್ಯಾಪಾರದಲ್ಲಿ ಸಾಕಷ್ಟು ಕಷ್ಟ, ನಷ್ಟ ಉಂಟಾಗುತ್ತದೆ.
6. ಸೂಕ್ತ ಸ್ಥಳದಲ್ಲಿ ಮನೆಕಟ್ಟಲು ಆಗುವುದಿಲ್ಲ


 ಇದನ್ನೂ ಓದಿ : ಇಲ್ಲಿನ ಶಿವಲಿಂಗದ ಬಣ್ಣ ದಿನಕ್ಕೆ ಮೂರು ಬಾರಿ ಬದಲಾಗುತ್ತದೆ..!


ಪಿತೃದೋಷ ನಿವಾರಣೆಯಾದರೆ ಏನಾಗುತ್ತದೆ?
ಪಿತೃದೋಷ ಒಂದು ರೀತಿಯಲ್ಲಿ ಸಾಲವಿದ್ದಂತೆ. ಅದನ್ನು ನೀವು ಸಂದಾಯ ಮಾಡಲೇ ಬೇಕು. ಜೊತೆಗೆ ನಾವು ಬದುಕಿನಲ್ಲಿ ಉದ್ದಾರವಾಗಬೇಕಾದರೆ, ಪಿತೃದೇವತೆಗಳ ಆಶೀರ್ವಾದ ಇರಲೇ ಬೇಕು. ಪಿತೃಗಳು ಪ್ರಸನ್ನರಾದಾಗ ನಮಗೆ ಜೀವನದಲ್ಲಿ ರಕ್ಷಣೆ ಸಿಗುತ್ತದೆ. ಯಾವುದೇ ಕಷ್ಟಗಳಿದ್ದರೂ ದೂರವಾಗುತ್ತದೆ. ಗತಿಸಿದ ಪಿತೃಗಳು ಸದ್ಗತಿಗಾಗಿ ಕಾಯುತ್ತಿರುತ್ತಾರೆ. ಮತ್ತು ತರ್ಪಣಕ್ಕಾಗಿ ಕಾಯುತ್ತಿರುತ್ತಾರೆ. ವಿಧಿವತ್ತಾಗಿ ಶ್ರಾದ್ದ ಮಾಡುವುದರಿಂದಲೂ ಪಿತೃದೋಷ ನಿವಾರಣೆಯಾಗುತ್ತದೆ.


ಸನಾತನ  ಜ್ಯೋತಿಷ್ಯ ಪರಂಪರೆಯಲ್ಲಿ ಪಿತೃದೋಷಕ್ಕೆ ಏನಿದೆ ಪರಿಹಾರ.?
1. ಮುಖ್ಯವಾಗಿ ಹಿರಿಯರಿಗೆ ಸರಿಯಾದ ರೀತಿಯಲ್ಲಿ ಶ್ರಾದ್ದ ಮಾಡಬೇಕು. ಇದರಿಂದ ಹಿಂದಿನ ತಲೆಮಾರಿನ ಪಾಪಗಳಿಂದ ಮುಕ್ತಿ ಸಿಗುತ್ತದೆ. 
2. ಹೊಸ ಕಾರ್ಯ, ಶುಭ ಕೆಲಸ ಆರಂಭಿಸುವಾಗ ತಂದೆ ತಾಯಿಯರ ಆಶೀರ್ವಾದ ಪಡೆಯಬೇಕು. ಹೆತ್ತ ತಂದೆ ತಾಯಿಯರ (Parents) ಚಿತ್ತವ ನೋಯಿಸಿದವರು ಉದ್ದಾರ ಆಗುವುದಿಲ್ಲ
3. ಬಡ ಹೆಣ್ಣುಮಕ್ಕಳ ಮದುವೆಗೆ ನೆರವಾದರೆ ಪಿತೃ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಕೂಡಾ ಇದೆ.  ಅದೇ ರೀತಿ ಅನಾಥರು, ದುರ್ಬಲರಿಗೆ ನೆರವಾಗುವುದರಿಂದಲೂ ಪಿತೃದೋಷದಿಂದ ಮುಕ್ತಿ ಪಡೆಯಬಹುದು. 
4. ಪಿತೃ ಪಕ್ಷ ಸಂದರ್ಭದಲ್ಲಿ ಪಿತೃಗಳಿಗೆ ಪೂಜೆ (Pooja) ಶ್ರಾದ್ಧ ಮಾಡುವುದು ಕೂಡಾ ಪೂರ್ವಜರನ್ನು ಸಂತೃಪ್ತಿಪಡಿಸಲು ಇರುವ ಉತ್ತಮ ಮಾರ್ಗ ಎಂದು ನಂಬಲಾಗಿದೆ.


 ಇದನ್ನೂ ಓದಿ : Vastu Tips: ಮಲಗುವಾಗ ಈ ವಸ್ತುಗಳನ್ನು ನಿಮ್ಮ ದಿಂಬಿನ ಕೆಳಗಿಡಿ, ಅದೃಷ್ಟ ಬದಲಾಗುತ್ತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.