ನವದೆಹಲಿ : ದೇವಾಲಯದ ಒಳಗೆ ಪ್ರವೇಶಿಸುವಾಗ ಪ್ರತಿ ದೇವಾಲಯದಲ್ಲೂ ಸಾಮಾನ್ಯವಾಗಿ ಗಂಟೆ (Temple bell)ಸದ್ದು ಕೇಳಿ ಬರುತ್ತದೆ. ಪೂಜೆ ನಡೆಯುತ್ತಿದೆ ಅಥವಾ ಆರತಿ (Aarti) ನಡೆಯುತ್ತಿದೆ ಎಂದು ಗಂಟೆ ಸದ್ದಿನಿಂದಲೇ ತಿಳಿಯುತ್ತದೆ. ಪ್ರತಿಯೊಬ್ಬರ ಮನೆಯಲ್ಲಿಯೂ ಸಾಮಾನ್ಯವಗಿ ಚಿಕ್ಕ ಗಂಟೆಯಾದರೂ ಇರುತ್ತದೆ. ಪೂಜೆ ಅಥವಾ ಆರತಿಯ ಪೂಜೆಯ ಸಮಯದಲ್ಲಿ ಗಂಟೆ ಬಾರಿಸುವುದು ಅಗತ್ಯ ಎನ್ನುವುದು ಸನಾತನ ಧರ್ಮದ ನಂಬಿಕೆ. ಗಂಟೆಯಿಲ್ಲದೆ ಮಾಡಿದ ಆರತಿಯನ್ನು ಅಪೂರ್ಣ ಎಂದೇ ಪರಿಗಣಿಸಲಾಗುತ್ತದೆ. ವೈದಿಕ ಕಾಲದಿಂದಲೂ ಪೂಜಾ ಸಮಯದಲ್ಲಿ ಗಂಟೆ ಬಾರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಆದರೆ ಪೂಜೆ ವೇಳೆ ಗಂಟೆ ಬಾರಿಸುವುದು ಯಾಕೆ ಎನ್ನುವುದು ತಿಳಿದಿದೆಯಾ? ಆರತಿ ಸಮಯದಲ್ಲಿ ಗಂಟೆ ಬಾರಿಸುವ ಕ್ರಮ ಯಾಕೆ ಬಹಳ ಮುಖ್ಯವಾಗಿದೆ? ಈ ಗಂಟೆ ಬಾರಿಸುವ ಹಿಂದಿನ ಕಾರಣ ಏನು ತಿಳಿಯಿರಿ.. ಈ ಕ್ರಮದ ಹಿಂದ ಧಾರ್ಮಿಕ ಕಾರಣಗಳಷ್ಟೇ ಅಲ್ಲ ವೈಜ್ಞಾನಿಕ ಕಾರಣವೂ ಇದೆ.
ಪೂಜೆಯ ವೇಳೆ ಗಂಟೆ ಬಾರಿಸುವುದರ ಹಿಂದಿರುವ ಧಾರ್ಮಿಕ ಕಾರಣಗಳು :
ಸ್ಕಂದ ಪುರಾಣದ ಪ್ರಕಾರ, ಗಂಟೆ ಬಾರಿಸಿದಾಗ ಹೊರಬರುವ ಶಬ್ದವು ಓಂನ (Omkara) ಶಬ್ದಕ್ಕೆ ಹೋಲುತ್ತದೆ. ಆದ್ದರಿಂದ ದೇವಸ್ಥಾನದಲ್ಲಿ (Temple) ಅಥವಾ ಪೂಜೆಯ ಸಮಯದಲ್ಲಿ ಗಂಟೆ ಬಾರಿಸಿದಾಗ ಅದರಿಂದ ಹೊರ ಬರುವ ಸದ್ದು ಓಂಕಾರಕ್ಕೆ ಸಮನಾಗಿರುತ್ತದೆ. ಮತ್ತು ಓಂಕಾರ ಉಚ್ಛಾರಣೆಯ ಪುಣ್ಯವೇ ಪ್ರಾಪ್ತಿಯಾಗಲಿದೆ ಎನ್ನುವುದು ನಂಬಿಕೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಪೂಜೆಯ (Pooja) ಸಮಯದಲ್ಲಿ ಗಂಟೆ ಬಾರಿಸಿದಾಗ, ಅದು ದೇವರ ಎದುರು ನಿಂತಿರುವ ವ್ಯಕ್ತಿಯ ಉಪಸ್ಥಿತಿಯನ್ನು ಖಚಿತಪಡಿಸುತ್ತದೆ. ಮತ್ತೊಂದೆಡೆ, ಗಂಟೆ ಬಾರಿಸುವುದರ ಮೂಲಕ, ದೇವತೆಗಳ ವಿಗ್ರಹದಲ್ಲಿ (Statue) ಪ್ರಜ್ಞೆ ಜಾಗೃತಗೊಳ್ಳುತ್ತದೆ ಎಂದು ನಂಬಲಾಗುತ್ತದೆ.
ಇದನ್ನೂ ಓದಿ : Vastu Tips - ಸುಖ ದಾಂಪತ್ಯ ಜೀವನಕ್ಕೆ ಮನೆಯ ಈ ದಿಕ್ಕಿನಲ್ಲಿರಲಿ ರಾಧಾ-ಕೃಷ್ಣರ ಭಾವಚಿತ್ರ
ಇನ್ನು ದೇವಾಲಯದ ಪ್ರವೇಶದ್ವಾರದಲ್ಲಿ ಹಾಕಲಾಗಿರುವ ಗಂಟೆಯ ಹಿಂದಿರುವ ನಂಬಿಕೆಯೆಂದರೆ, ದೇವಾಲಯ ಪ್ರವೇಶಿಸುವ ಮುನ್ನ ಗಂಟೆ ಬಾರಿಸಿ ದೇವರ ಅನುಮತಿ (permission) ಪಡೆದು ದೇವಸ್ಥಾನ ಪ್ರವೇಶಿಸುವುದು ಎಂದು. ದೇವಾಲಯ ಪ್ರವೇಶೀಸುವ ವೇಳೆ ಗಂಟೆ ಬಾರಿಸಿ ತಾನು ಆಲಯಕ್ಕೆ ಬರುತ್ತಿರುವ ಬಗ್ಗೆ ದೇವರಿಗೆ ತಿಳಿಸುವುದು ಎಂದು.
ಪರಿಸರದೊಂದಿಗಿನ ಸಂಬಂಧ :
ಗಂಟೆ ಬಾರಿಸುವುದರ ಮೂಲಕ, ವ್ಯಕ್ತಿಯ ಮನಸ್ಸಿನಲ್ಲಿ ಧಾರ್ಮಿಕ ಭಾವನೆಗಳು ಉದ್ಭವಿಸುವುದರ ಜೊತೆಗೆ ಗಂಟೆಯ ಮೊಳಗಿಸುವಿಕೆಯು ಪರಿಸರವನ್ನು ಶುದ್ಧೀಕರಿಸುತ್ತದೆ. ಗಂಟೆಯ ಸದ್ದು ವಾತಾವರಣದಲ್ಲಿ (enivironment) ಕಂಪನಕ್ಕೆ ಕಾರಣವಾಗುತ್ತದೆ, ಅದು ಆ ಪ್ರದೇಶದಲ್ಲಿ ಇರುವ ಹಾನಿಕಾರಕ ವೈರಸ್‌ಗಳು (virus), ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿಗಳನ್ನು ನಾಶಪಡಿಸುತ್ತದೆ. ಸುತ್ತಮುತ್ತಲಿನ ಪರಿಸರವು ಶುದ್ಧವಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : Hanuman Pooja: ರಾತ್ರಿ ಪೂಜೆ ಮಾಡುವಾಗ ಮಾಡಬೇಡಿ ಈ ತಪ್ಪು..!
ಗಂಟೆಯ ಸದ್ದು ಸುತ್ತಲಿನ ನಕಾರಾತ್ಮಕ ಶಕ್ತಿಯನ್ನು (Negetive energy) ಹೋಗಲಾಡಿಸುತ್ತದೆ. ಮತ್ತು ಸುತ್ತಲಿನ ಪರಿಸರದಲ್ಲಿ ಪಾಸಿಟಿವ್ ಎನರ್ಜಿ (positive energy)ನೆಲೆಗೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಗಂಟೆ ಸದ್ದಿನಿಂದ ವ್ಯಕ್ತಿಯ ಮನಸ್ಸು ಮತ್ತು ಮೆದುಳಿನ ಮೇಲೆ ಪರಿಣಾಮ ಉಂಟಾಗುತ್ತದೆ. ಇದರಿಂದ ಒತ್ತಡ ಕಡಿಮೆಯಾಗುತ್ತದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.