ಮನೆಯ ಈ ದಿಕ್ಕಿನಲ್ಲಿ ನೆಟ್ಟರೆ ಈ ಬಳ್ಳಿ, ಲಕ್ಷ್ಮೀ ದೇವಿ ಬಿಡದೇ ಹರಿಸುತ್ತಾಳೆ ಕೃಪಾ ದೃಷ್ಟಿ
Aparajita Plant Vastu Tips : ಅಪರಾಜಿತಾ ಸಸ್ಯವನ್ನು ಮನೆಯಲ್ಲಿ ನೆಟ್ಟರೆ, ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ ಎಂದು ಹೇಳಲಾಗುತ್ತದೆ. ಮನೆ ಮತ್ತು ಮನೆ ಮಂದಿಯ ಮೇಲೆ ಲಕ್ಷ್ಮೀ ಕೃಪೆ ನೆಲೆಯಾಗಿ ಎಲ್ಲಾ ದುಃಖ ದುಗುಡಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.
Aparajita Plant Vastu Tips : ವಾಸ್ತು ಶಾಸ್ತ್ರದಲ್ಲಿ ಮರ ಗಿಡಗಳ ಬಗ್ಗೆ ಕೂಡಾ ಹೇಳಲಾಗಿದೆ. ಯಾವ ಸಸ್ಯವನ್ನು ನೆಟ್ಟರೆ ಶುಭ ? ಯಾವ ಸಸ್ಯ ಮನೆಯ ಸುತ್ತಲಿದ್ದಾರೆ ಅಶುಭ ಎನ್ನುವುದನ್ನು ಹೇಳಲಾಗಿದೆ. ಅಲ್ಲದೆ ಪಾಸಿಟಿವ್ ಎನರ್ಜಿಯ ಹರಿವಿಗೆ ಯಾವ ಸಸ್ಯಗಳನ್ನು ಮನೆಯ ಸುತ್ತ ನೆಡಬೇಕು ಎನ್ನುವುದನ್ನು ಕೂಡಾ ತಿಳಿಸಲಾಗಿದೆ. ಕೆಲವು ಸಸ್ಯಗಳನ್ನು ನೆಟ್ಟರೆ ಮನೆಯಲ್ಲಿ ಹಣದ ಹೊಳೆ ಹರಿಯುತ್ತದೆ ಎಂದು ಹೇಳಲಾಗುತ್ತದೆ. ಈ ಸಸ್ಯಗಳಲ್ಲಿ ಅಪರಾಜಿತಾ ಬಳ್ಳಿಯೂ ಒಂದು. ಇದನ್ನು ಮನೆಯಲ್ಲಿ ನೆಟ್ಟರೆ, ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ ಎಂದು ಹೇಳಲಾಗುತ್ತದೆ. ಮನೆ ಮತ್ತು ಮನೆ ಮಂದಿಯ ಮೇಲೆ ಲಕ್ಷ್ಮೀ ಕೃಪೆ ನೆಲೆಯಾಗಿ ಎಲ್ಲಾ ದುಃಖ ದುಗುಡಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶಿವ, ವಿಷ್ಣು, ಲಕ್ಷ್ಮೀ ಮತ್ತು ಶನಿ ದೇವರ ಪೂಜೆಯಲ್ಲಿ ಅಪರಾಜಿತ ಹೂವುಗಳನ್ನು ಬಳಸಲಾಗುತ್ತದೆ. ಅಪರಾಜಿತಾ ಬಳ್ಳಿಯ ಅನೇಕ ಪ್ರಯೋಜನಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಯಾವ ಮನೆಯಲ್ಲಿ ಅಪರಾಜಿತ ಬಳ್ಳಿ ಇರುವುದೋ ಆ ಮನೆಯಲ್ಲಿ ಧನಾತ್ಮಕ ಶಕ್ತಿ ಸಂಚರಿಸುತ್ತದೆ ಎಂದು ಹೇಳಲಾಗುತ್ತದೆ. ಈ ಬಳ್ಳಿ ಗಿಡದ ಕಾರಣ, ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಅಂಗೈಯಲ್ಲಿ ಈ ಚಿಹ್ನೆ ಇದ್ದರೆ ಒಲಿಯುವುದು ರಾಜಯೋಗ.!
ಅಪರಾಜಿತಾ ಬಳ್ಳಿಯನ್ನು ನೆಡುವುದರಿಂದ ಆಗುವ ಪ್ರಯೋಜನಗಳು :
ಅಪರಾಜಿತಾ ಸಸ್ಯವನ್ನು ನಾನಾ ರೀತಿಯ ಹೆಸರುಗಳಿಂದ ಕರೆಯಲಾಗುತ್ತದೆ. ಅದನ್ನು ವಿಷ್ಣುಪ್ರಿಯಾ, ವಿಷ್ಣುಕಾಂತ ಎಂಬ ಹೆಸರುಗಳಿಂದ ಕೂಡಾ ಕರೆಯಲಾಗುತ್ತದೆ. ಅಪರಾಜಿತಾ ಸಸ್ಯವು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಸಂಬಂಧಿಸಿದ್ದಾಗಿದೆ. ಈ ಸಸ್ಯವನ್ನು ಮನೆಯ ಸರಿಯಾದ ದಿಕ್ಕಿನಲ್ಲಿ ಇರಿಸಿದರೆ, ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
ಈ ಸಸ್ಯವು ಶನಿದೋಷವನ್ನು ಕೂಡಾ ನಿವಾರಿಸುತ್ತದೆ :
ಭಗವಾನ್ ವಿಷ್ಣು, ಮತ್ತು ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಬೇಕಾದರೆ ಅಪರಾಜಿತಾ ಬಳ್ಳಿಯನ್ನು ನೆಡುವಂತೆ ಸೂಚಿಸಲಾಗುತ್ತದೆ. ಯಾರ ಜಾತಕದಲ್ಲಿ ಶನಿಯ ಸ್ಥಾನವು ಉತ್ತಮ ಸ್ಥಿತಿಯಲ್ಲಿರುವುದಿಲ್ಲ ಅವರಿಗೆ ಈ ಸಸ್ಯ ಬಹಳ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ : Mangal Transit In Taurus: 120 ದಿನ ವೃಷಭ ರಾಶಿಯಲ್ಲಿ ಮಂಗಳ ಸಂಚಾರ: ಈ 3 ರಾಶಿಯವರು ವೃತ್ತಿ ಜೀವನದಲ್ಲಿ ಮುನ್ನಡೆಯುವುದು ಖಚಿತ
ಶುಭ ಫಲಕ್ಕಾಗಿ ಈ ದಿಕ್ಕಿನಲ್ಲಿ ನಡಿ ಅಪರಾಜಿತಾ ಸಸ್ಯ :
ವಾಸ್ತು ತಜ್ಞರ ಪ್ರಕಾರ, ಈ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟಾಗ ಮಾತ್ರ ಪ್ರಯೋಜನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಅದನ್ನು ಮನೆಯ ಪೂರ್ವ, ಉತ್ತರ, ಈಶಾನ್ಯ ದಿಕ್ಕಿನಲ್ಲಿ ನೆಡುವುದು ಮಂಗಳಕರ. ಈ ಗಿಡವನ್ನು ಮನೆಯ ಮುಖ್ಯ ಬಾಗಿಲಿನ ಬಲಭಾಗದಲ್ಲಿ ಇರಿಸಲಾಗುತ್ತದೆ. ಯಾವ ಮನೆಯಲ್ಲಿ ಅಪರಾಜಿತಾ ಸಸ್ಯ ಇರುವುದೋ ಆ ಮನೆಯಲ್ಲಿ ಲಕ್ಷ್ಮಿ ಮತ್ತು ಕುಬೇರ ದೇವನ ಆಶೀರ್ವಾದ ನೆಲೆಯಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.