ದೀಪಾವಳಿ ದಿನ ಈ ಸಸ್ಯವನ್ನು ಮನೆಯಲ್ಲಿ ತಂದು ನೆಟ್ಟರೆ ಸಂಪತ್ತಿನ ಮಳೆಯಾಗುವುದು! ಎಷ್ಟೇ ಸಾಲ ಇದ್ದರೂ ಪರಿಹಾರವಾಗುವುದು
ದೀಪಾವಳಿ ದಿನ ಮನೆಯಲ್ಲಿ ಈ ಗಿಡವನ್ನು ತಂದು ಕೊಟ್ಟರೆ ಉಕ್ಕಿ ಬರುವ ಧನ ಸಂಪತ್ತನ್ನು ಯಾರೂ ನಿಲ್ಲಿಸುವುದು ಸಾಧ್ಯವಿಲ್ಲ ಎನ್ನಲಾಗುತ್ತದೆ.
ಬೆಂಗಳೂರು : ದೀಪಾವಳಿಯು ದೇಶದಾದ್ಯಂತ ಅತ್ಯಂತ ದೊಡ್ಡ ಹಬ್ಬ.ಈ ದಿನದಂದು, ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ಮನೆಮಂದಿಯ ಮೇಲೆ ಸದಾಕಾಲಕ್ಕೂ ಇರಲಿ ಎಂದು ಪ್ರಾರ್ಥನೆ ಸಲ್ಲಿಸಲಾಗುತ್ತದೆ. ದೀಪಾವಳಿ ದಿನ ನೀತಿ ನಿಯಮ ನಿಷ್ಠೆಯಿಂದ ಲಕ್ಷ್ಮಿ ಪೂಜೆ ಮಾಡಿದರೆ ಆ ಪೂಜೆಯ ಫಲವಾಗಿ ಹಣದ ಹೊಳೆ ಹರಿಯುತ್ತದೆ ಎಂದು ಹೇಳಲಾಗುತ್ತದೆ. ಕುಟುಂಬದಲ್ಲಿ ಸಂಪತ್ತು, ಸಂತೋಷ, ಸಮೃದ್ಧಿ ಉಕ್ಕುತ್ತದೆ. ಇನ್ನು ದೀಪಾವಳಿ ದಿನ ಮನೆಯಲ್ಲಿ ಈ ಗಿಡವನ್ನು ತಂದು ಕೊಟ್ಟರೆ ಉಕ್ಕಿ ಬರುವ ಧನ ಸಂಪತ್ತನ್ನು ಯಾರೂ ನಿಲ್ಲಿಸುವುದು ಸಾಧ್ಯವಿಲ್ಲ ಎನ್ನಲಾಗುತ್ತದೆ.
ಹಣವನ್ನು ಆಕರ್ಷಿಸುವ ಸಸ್ಯ :
ಜ್ಯೋತಿಷಿಗಳ ಪ್ರಕಾರ,ಈ ಮಾಂತ್ರಿಕ ಸಸ್ಯವನ್ನು ರಬ್ಬರ್ ಸಸ್ಯ ಎಂದು ಕರೆಯಲಾಗುತ್ತದೆ.ಅದರ ವೈಜ್ಞಾನಿಕ ಹೆಸರು ಫಿಸ್ಕಸ್ ಎಲಾಸ್ಟಿಕ. ಈ ಸಸ್ಯವು ಹೊಳೆಯುವ ಅಂಡಾಕಾರದ ಎಲೆಗಳನ್ನು ಹೊಂದಿದೆ. ಇದರಿಂದಾಗಿ ಈ ಸಸ್ಯವು ತುಂಬಾ ಆಕರ್ಷಕವಾಗಿ ಕಾಣುತ್ತದೆ.ಈ ಸಸ್ಯಕ್ಕೆ ಕಡಿಮೆ ನೀರು ಮತ್ತು ಸೂರ್ಯನ ಬೆಳಕು ಬೇಕಾಗುತ್ತದೆ. ಇದರಿಂದಾಗಿ ಇದು ಮನೆಯೊಳಗೆ ಸುಲಭವಾಗಿ ಬೆಳೆಯುತ್ತದೆ. ಮನೆಯಲ್ಲಿ ಈ ಗಿಡವನ್ನು ನೆಟ್ಟರೆ ಶಾಂತಿ ಮತ್ತು ನೆಮ್ಮದಿ ಹೆಚ್ಚುತ್ತದೆ.
ಇದನ್ನೂ ಓದಿ : ದೀಪಾವಳಿಯಂದು ಈ ಗಿಡವನ್ನು ನಿಮ್ಮ ಮನೆಯಲ್ಲಿ ನೆಡಿ..!ಲಕ್ಷ್ಮೀ ದೇವಿ ಸದಾ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ
ಕುಟುಂಬವಾಗುವುದು ಸಂತೋಷ ಮತ್ತು ಸಮೃದ್ಧಿಯ ನೆಲೆ:
ಈ ಸಸ್ಯವು ಸಂಪತ್ತನ್ನು ಆಕರ್ಷಿಸುವ ಮಾಂತ್ರಿಕ ಸಾಮರ್ಥ್ಯವನ್ನು ಹೊಂದಿದೆ. ದೀಪಾವಳಿಯಂತಹ ಶುಭ ದಿನದಂದು ಮನೆಯಲ್ಲಿ ಈ ಗಿಡವನ್ನು ನೆಟ್ಟ ನಂತರ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ, ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಇದು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.
ಮಾಲಿನ್ಯವನ್ನು ತೊಡೆದುಹಾಕಲು ಸಹಾಯ :
ರಬ್ಬರ್ ಸಸ್ಯದ ಹಲವು ವಿಶೇಷ ಗುಣಲಕ್ಷಣಗಳಿವೆ. ಅದರ ಮೊಗ್ಗುಗಳಿಂದ ಹೊಸ ಸಸ್ಯಗಳನ್ನು ಬೆಳೆಯಬಹುದು. ಅಂದರೆ, ಹೊಸ ಸಸ್ಯವನ್ನು ತರುವ ಅಗತ್ಯವಿಲ್ಲ. ಈ ಸಸ್ಯಕ್ಕೆ ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ.ವಾತಾವರಣವನ್ನು ಸ್ವಚ್ಛವಾಗಿಡಲು ಈ ಸಸ್ಯವು ತುಂಬಾ ಸಹಾಯ ಮಾಡುತ್ತದೆ.ಇದು ಬೆಂಜೀನ್, ಕಾರ್ಬನ್ ಮಾನಾಕ್ಸೈಡ್ ಮತ್ತು ಫಾರ್ಮಾಲ್ಡಿಹೈಡ್‌ನಂತಹ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುವ ಮೂಲಕ ಮಾಲಿನ್ಯದಿಂದ ರಕ್ಷಿಸುತ್ತದೆ.
ಇದನ್ನೂ ಓದಿ : ಪೊರಕೆ ಕೊಳ್ಳುವಾಗ ಈ ವಿಷಯಗಳನ್ನು ಗಮನದಲ್ಲಿಡಿ.. ಇಲ್ಲದಿದ್ದರೆ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ! ಬಡತನ-ಕಷ್ಟ ಎದುರಾಗುತ್ತೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ