Money plant on Diwali: ದೀಪಾವಳಿ ಹಬ್ಬ ಎಂದರೆ ಅದೇನೋ ಸಂತೋಷ..ದೀಪಗಳ ಬೆಳಕಿನೊಂದಿಗೆ ಈ ದಿನ ಜನರ ಬಾಳಿನಲ್ಲಿ ಸಂತೋಷವನ್ನು ಹೊತ್ತು ತರುವ ದಿನ. ಈ ದಿನ ಹೆಚ್ಚು ಪ್ರಾಮುಕ್ಯತೆಯನ್ನು ಹೊಂದಿದ್ದು, ಈ ದಿನದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆಗೆ ನೀವು ಪಾತ್ರರಾಗಬಹುದು.

ದೀಪಾವಳಿ ಹಬ್ಬದಂದು ನೀವು ಮನಿ ಪ್ಲಾಂಟ್ ಅನ್ನು ನೆಡುವುದರಿಂದ ಲಲ್ಷ್ಮೀ ದೇವಿ ಸದಾ ನಿಮ್ಮ ಮನೆಯಲ್ಲಿ ನೆಲೆಸುವಂತೆ ಮಾಡಬಹುದು. ಹಾಗಾದರೆ ಈ ಗಿಡವನ್ನು ನೆಡುವುದು ಹೇಗೆ..? ಈ ಗಿಡ ನೆಡಲು ಯಾವುದು ಸೂಕ್ತ ಸಮಯ..? ತಿಳಿಯಲು ಮುಂದೆ ಓದಿ...
ಒಂದು ಮಡಕೆಯಲ್ಲಿ ಮಣ್ಣಿನೊಂದಿಗೆ ಕೋಕೋಪೀಟ್ ಅನ್ನು ಬೆರೆಸಿ ಕಾಂಪೋಸ್ಟ್ ತಯಾರಿಸಿದ ನಂತರ, ಮನಿ ಪ್ಲಾಂಟ್ ಅನ್ನು ಕತ್ತರಿಸಿ ಅದರಲ್ಲಿ ನೆಡಿ, ಎಲೆಯ ಭಾಗವು ನೆಲದ ಮೇಲೆ ಇರಬೇಕು. ಮಣ್ಣನ್ನು ತೇವವಾಗಿಡಲು ಪ್ರತಿದಿನ ನೀರು ಹಾಕಿ. ನೇರ ಸೂರ್ಯನ ಬೆಳಕಿನಿಂದ ಗಿಡವನ್ನು ದೂರವಿಡಿ.
ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ, ಅಷ್ಟೆ ಅಲ್ಲ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಆರ್ಥಿಕ ಸಂಪತ್ತು ಹೆಚ್ಚಾಗುತ್ತದೆ ಎನ್ನು ನಂಬಿಕೆ ಇದೆ.
ಪೂಜೆಯ ಸ್ಥಳದಲ್ಲಿ ಮನಿ ಪ್ಲಾಂಟ್ ಅನ್ನು ಸಹ ಇರಿಸಲಾಗುತ್ತದೆ ಇದರಿಂದ ಅದರ ಶಕ್ತಿಯು, ಭಕ್ತಿಯಿಂದ ಹೆಚ್ಚಾಗುತ್ತದೆ. ಇದಲ್ಲದೆ, ಇದು ಕಚೇರಿ ಮತ್ತು ಕೆಲಸದ ವಾತಾವರಣವನ್ನು ತಂಪಾಗಿರಿಸುತ್ತದೆ.
ದೀಪಾವಳಿ ದಿನ ವಿಶೇಷವಾಗಿ ಇರುವುದರಿಂದ ಒಂದು ವೇಳೆ ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇಲ್ಲಿದದ್ದರೆ ಈ ಗಿಡವನ್ನು ತಂದು ನೆಡಿ.
ಮನಿ ಪ್ಲಾಂಟ್ ಅನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಪಾಸಿಟಿವ್ ವಾತಾವರಣ ಉಂಟಾಗುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.