Ram Mandira Trust - ಚಂದಾ ಸಂಗ್ರಹ ಅಭಿಯಾನ ಆರಂಭ, ರಾಷ್ಟ್ರಪತಿಗಳಿಗೆ ಟ್ರಸ್ಟ್ ಗೆ 5 ಲಕ್ಷ ರೂ. ಕೊಡುಗೆ
Ram Mandira Trust - ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು 5,00,100 ರೂ.ಗಳ ಕೊಡುಗೆಯನ್ನು ದೇವಸ್ಥಾನದ ಟ್ರಸ್ಟ್ಗೆ ಹಸ್ತಾಂತರಿಸಿದ್ದಾರೆ. ರಾಷ್ಟ್ರಪತಿಗಳು ತಮ್ಮ ಈ ಕೊಡುಗೆಯನ್ನು ಚೆಸ್ ಮೂಲಕ ಟ್ರಸ್ಟ್ಗೆ ಹಸ್ತಾಂತರಿಸಿದ್ದಾರೆ.
Ram Mandira Trust - ನವದೆಹಲಿ: ಅಯೋಧ್ಯೆಯಲ್ಲಿನ ಭವ್ಯ ರಾಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಹಣ ಸಂಗ್ರಹಿಸಲಾಗುತ್ತಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಅಭಿಯಾನವೂ ಕೂಡ ಇಂದಿನಿಂದ ಪ್ರಾರಂಭವಾಗಿದೆ. ಇದೆ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಮಮಂದಿರ ನಿರ್ಮಾಣಕ್ಕಾಗಿ ಮೊದಲ ದೇಣಿಗೆ ನೀಡಿ, ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರಾಮ್ ಮಂದಿರ ನಿರ್ಮಾಣಕ್ಕಾಗಿ ಐದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ರಾಮ್ ದೇವಾಲಯ ನಿರ್ಮಾಣಕ್ಕಾಗಿ ರಾಷ್ಟ್ರಪತಿಗಳು ತಮ್ಮ ಈ ಕೊಡುಗೆಯನ್ನು ಚೆಕ್ ರೂಪದಲ್ಲಿ ದೇವಸ್ಥಾನದ ಟ್ರಸ್ಟ್ ಗೆ ನೀಡಿದ್ದಾರೆ.
ರಾಮನ ನಗರಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯ ಹಾಗೂ ದಿವ್ಯ ರಾಮ ಮಂದಿರಕ್ಕಾಗಿ ಇಂದಿನಿಂದ ದೇಣಿಗೆ ಸಂಗ್ರಹ ಅಭಿಯಾನ ಆರಂಭಗೊಂಡಿದೆ. ದೇಶದ ಮೊದಲ ಪ್ರಜೆಯಾಗಿರುವ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಐದು ಲಕ್ಷ ಮೇಲೆ ನೂರು ರೂಪಾಯಿ ನೀಡುವ ಮೂಲಕ ಈ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ VHP ಜಂಟಿಯಾಗಿ ದೇಶಾದ್ಯಂತ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನ ನಡೆಸಲಿವೆ. ಸುಮಾರ ಒಂದೂವರೆ ತಿಂಗಳುಗಳ ಕಾಲ ಈ ಅಭಿಯಾನ ನಡೆಯಲಿದೆ. ಇದರಡಿ ದೇಶದ ಸುಮಾರು 13 ಕೋಟಿ ಕುಟುಂಬಗಳನ್ನು ತಲುಪುವ ಗುರಿ ಹೊಂದಲಾಗಿದೆ.
ಇದನ್ನು ಓದಿ- ನಕಲಿ ಚೆಕ್‌ನಿಂದ ಹಣ ವಿತ್ ಡ್ರಾ: ಎಸ್‌ಬಿಐನಿಂದ 6 ಲಕ್ಷ ರೂ. ವಾಪಸ್ ಕೇಳಿದ ರಾಮ್ ಮಂದಿರ್ ಟ್ರಸ್ಟ್
ಫೆಬ್ರುವರಿ ತಿಂಗಳವರೆಗೆ ನಡೆಯಲಿದೆ ಈ ಅಭಿಯಾನ
ಈ ಅಭಿಯಾನದ ಮೂಲಕ ಫೆಬ್ರುವರಿ 27ರವರೆಗೆ ದೇಶದ ಕೋಟ್ಯಾಂತರ ಜನರನ್ನು ತಲುಪುವ ಪ್ರಯತ್ನ ನಡೆಸಲಾಗುವುದು ಹಾಗೂ ಚಂದಾ ಸಂಗ್ರಹ ಕಾರ್ಯಕ್ರಮ ನಡೆಸಲಾಗುವುದು. ಶ್ರೀರಾಮ ಮಂದಿರ ದೇಣಿಗೆ ಸಂಗ್ರಹ ಕಾರ್ಯಕ್ರಮದ ಅಡಿ 10, 100 ಹಾಗೂ 1000 ರೂ.ಗಳ ಭಿತ್ತಿಪತ್ರ ದಾನ ನೀಡುವವರಿಗೆ ಕೊಡಲಾಗುವುದು. ಈ ಭಿತ್ತಿಪತ್ರದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರದ ಚಿತ್ರ ಹಾಗೂ ಶ್ರೀರಾಮನ ಭಾವಚಿತ್ರ ಕೂಡ ಇರಲಿದೆ. ಈ ಅಭಿಯಾನದ ಅಡಿ ದೇಣಿಗೆ ನೀಡುವವರಿಗೆ ಈ ಭಿತ್ತಿಪತ್ರವನ್ನು ಪಾವತಿಯ ರೂಪದಲ್ಲಿ ನೀಡಲು ಉದ್ದೇಶಿಸಲಾಗಿದೆ.
ಇದನ್ನು ಓದಿ- ಅಯೋಧ್ಯೆಯಲ್ಲಿ ರಾಮ್ ಮಂದಿರ ನಿರ್ಮಾಣ 36-40 ತಿಂಗಳಲ್ಲಿ ಪೂರ್ಣಗೊಳ್ಳಲಿದೆ-ಟ್ರಸ್ಟ್
ದೂರ ದೂರದ ಪ್ರದೇಶಗಳಿಗೆ ತಲುಪಲು ಯೋಜನೆ ರೂಪಿಸಲಾಗಿದೆ
ಎರಡು ಸಾವಿರಕ್ಕಿಂತ ಹೆಚ್ಚಿಗೆ ದೇಣಿಗೆ ನೀಡುವವರಿಗೆ ಪ್ರತ್ಯೇಕ ರಶೀದಿ ನೀಡಲಾಗುವುದು. ಈ ರಶೀದಿಯನ್ನು ಪಡೆದು ಅವರು ಆದಾಯ ತೆರಿಗೆ ವಿನಾಯ್ತಿ ಕೂಡ ಪಡೆಯಬಹುದು. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ವಿ.ಎಚ್.ಪಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಆಲೋಕ್ ಕುಮಾರ್, ರಾಮ ಮಂದಿರ (Ram Mandir) ದೇಣಿಗೆ ಸಂಗ್ರಹ ಅಭಿಯಾನವನ್ನು ರಾಷ್ಟ್ರಪತಿಗಳಿಂದ ಚಾಲನೆ ನೀಡಿಸಿದ ಬಳಿಕ ಇದೀಗ ಉಪರಾಷ್ಟ್ರಪತಿಗಳ ಬಳಿ ಹೋಗಿ ದೇಣಿಗೆ ಸಂಗ್ರಹಿಸಲಾಗುವುದು. ಇದಲ್ಲದೆ ದೇಶದ ಪ್ರಧಾನಿಗಳು ಸೇರಿದಂತೆ ಬುಡಕಟ್ಟು ಪ್ರದೇಶಗಳಲ್ಲಿರುವ ಗ್ರಾಮಗಳಿಗೂ ಕೂಡ ದೇಣಿಗೆ ಸಂಗ್ರಹಕ್ಕಾಗಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.