ಬೆಂಗಳೂರು : ಜ್ಯೋತಿಷ್ಯದಂತೆ, ಸಂಖ್ಯಾಶಾಸ್ತ್ರವು ವ್ಯಕ್ತಿಯ ಗುಣ ಸ್ವಭಾವ ಮತ್ತು ಭವಿಷ್ಯದ ಬಗ್ಗೆ ಹೇಳುತ್ತದೆ. ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆ, ಅವನ ಸ್ವಭಾವ, ವ್ಯಕ್ತಿತ್ವ, ಅನುಕೂಲಗಳು ಮತ್ತು ಅನಾನುಕೂಲಗಳನ್ನು ತಿಳಿಯಬಹುದು. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಕೆಲವು ಒಳ್ಳೆಯ ವಿಷಯಗಳಿದ್ದರೆ, ಕೆಲವು ಕೆಟ್ಟ ವಿಷಯಗಳೂ ಇರುತ್ತವೆ. ವ್ಯಕ್ತಿಯ ಒಳ್ಳೆಯತನವು ಅವನನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ದರೆ, ಕೆಟ್ಟ ವ್ಯಕ್ತಿತ್ವ ಯಶಸ್ಸಿನ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ. 


COMMERCIAL BREAK
SCROLL TO CONTINUE READING

ಜನ್ಮ ದಿನಾಂಕದ ಆಧಾರದ ಮೇಲೆ, ನಿಮ್ಮೊಳಗಿನ ದೌರ್ಬಲ್ಯಗಳೇನು ಎಂಬುದನ್ನು ತಿಳಿದುಕೊಳ್ಳಬಹುದು. ಯಾವುದೇ ತಿಂಗಳ 2, 11 ಮತ್ತು 20 ರಂದು ಜನಿಸಿದವರ ಬಗ್ಗೆ ಇಲ್ಲಿ ಹೇಳುತ್ತಿದ್ದೇವೆ. ಈ ಜನರ ರಾಡಿಕ್ಸ್ ಸಂಖ್ಯೆ 2 . ಮೂಲಾಂಕ 2 ರ ಜನರು  ಹೊಂದಿರುವ ಒಂದೇ ಒಂದು ದೌರ್ಬಲ್ಯದ ಕಾರಣದಿಂದ ಅವರು ಜೀವನದಲ್ಲಿ ಯಶಸ್ಸು ಹೊಂದುವುದು ಸಾಧ್ಯವಾಗುವುದಿಲ್ಲ. 


ಇದನ್ನೂ ಓದಿ : Chanakya Niti: ಇಂತಹ ಸ್ನೇಹಿತರು ಶತ್ರುಗಿಂತ ಹೆಚ್ಚು ಅಪಾಯಕಾರಿ.. ಜೀವನವೇ ಸರ್ವನಾಶವಾಗಬಹುದು


ಈ ದಿನಾಂಕದಂದು ಜನಿಸಿದ ಜನರು ರಾಡಿಕ್ಸ್ ಸಂಖ್ಯೆ 2 ಅನ್ನು ಹೊಂದಿರುತ್ತಾರೆ : 
ಯಾವುದೇ ತಿಂಗಳ 2, 11, 20 ಮತ್ತು 29 ರಂದು ಜನಿಸಿದವರ  ರಾಡಿಕ್ಸ್ ಸಂಖ್ಯೆ 2 ಆಗಿರುತ್ತದೆ. ಈ ರಾಡಿಕ್ಸ್‌ನ ಜನರು ತಮ್ಮಲ್ಲಿರುವ ಏಕೈಕ  ದೌರ್ಬಲ್ಯವನ್ನು ಅರಿತುಕೊಳ್ಳಬೇಕು. ಮಾತರವಲ್ಲ ಅದನ್ನು ಸುಧಾರಿಸಿಕೊಳ್ಳಬೇಕು. ಇವರ ಈ ದೌರ್ಬಲ್ಯವನ್ನು ಗೆಲ್ಲುವುದು ಸಾಧ್ಯವಾದರೆ ಜೀವನದಲ್ಲಿ ಯಶಸ್ಸಿನ ಹಾಡಿ ಹಿಡಿಯುತ್ತಾರೆ. ಸಮಾಜದಲ್ಲಿ ಗೌರವ ಪಡೆಯುತ್ತಾರೆ. 


ಮೂಲತಃ  ನಾಚಿಕೆ ಸ್ವಭಾವದವರು :
ಸಂಖ್ಯಾಶಾಸ್ತ್ರದ ಪ್ರಕಾರ, ರಾಡಿಕ್ಸ್ 2ರ ಜನರು ನಾಚಿಕೆ ಸ್ವಭಾವದವರು. ಈ ಸ್ವಭಾವದ ಕಾರಣದಿಂದ ಇವರು ಯಾರೊಂದಿಗೆ ಮಾತನಾಡಬೇಕಾದರೂ ಹಿಂಜರಿಯುತ್ತಾರೆ. ಯಾರು ಏನು ಕೆಲಸ ಹೇಳಿದರೂ ಇವರು ಇಲ್ಲ ಎನ್ನುವುದಿಲ್ಲ. ತಮ್ಮ ಸಾಮರ್ಥ್ಯ ಮೀರಿದ ಕೆಲಸವನ್ನು ಮಾಡಿ ಮುಗಿಸುತ್ತಾರೆ.  


ಇದನ್ನೂ ಓದಿ :  Janmashtami 2022: ಜನ್ಮಾಷ್ಟಮಿಯಂದು ರೂಪುಗೊಳ್ಳಲಿದೆ ವಿಶೇಷ ಯೋಗ


ಈ ಜನರು ಭಾವನಾತ್ಮಕ :
ಸಂಖ್ಯಾಶಾಸ್ತ್ರದ ಪ್ರಕಾರ, ಈ ಜನರು ತುಂಬಾ ಸೂಕ್ಷ್ಮ ಸ್ವಭಾವದವರು. ಸಣ್ಣ ಸಣ್ಣ ವಿಚಾರಗಳಿಗೂ ಬೇಗನೆ ಭಾವುಕರಾಗುತ್ತಾರೆ. ಇವರ ಈ ಸ್ವಭಾವದ ಲಾಭವನ್ನು ಬೇರೆಯವರು ಅವರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ತಮ್ಮ ಭಾವನೆಯನ್ನು ನಿಯಂತ್ರಿಸಿದರೆ, ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ.  


ಇತರರನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ : 
ರಾಡಿಕ್ಸ್ 2 ರ ಜನರು ಶುದ್ಧ ಹೃದಯವಂತರು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಅವರು ಇತರರನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಜನರನ್ನು ಬೇಗನೆ ನಂಬುತ್ತಾರೆ.  ಹಿಂದೆ ಮುಂದೆ ನೋಡದೆ ಜನರನ್ನು ನಂಬುವುದರಿಂದ ಅನೇಕ ಬಾರಿ ನಷ್ಟವನ್ನು ಎದುರಿಸಬೇಕಾಗುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.