ಅಕ್ಟೋಬರ್ ನಿಂದ ಯಶಸ್ಸಿನ ಉತ್ತುಂಗದಲ್ಲಿರುತ್ತಾರೆ ಈ ರಾಶಿಯವರು, ಚತುರ್ಗ್ರಾಹಿ ಯೋಗದಿಂದ ಎಲ್ಲವೂ ಶುಭ

Chaturgrahi Yog In Libra: ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಬದಲಾವಣೆಯು ವ್ಯಕ್ತಿಯ ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಅಕ್ಟೋಬರ್ 27 ರಂದು ತುಲಾ ರಾಶಿಯಲ್ಲಿ ಚತುರ್ಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ. ಇದು ಈ ರಾಶಿಚಕ್ರದ  ಜನರಿಗೆ ಬಹಳ ಪ್ರಯೋಜನಕಾರಿಯಾಗಿರಲಿದೆ.  

Written by - Ranjitha R K | Last Updated : Aug 17, 2022, 01:06 PM IST
  • ಅಕ್ಟೋಬರ್ 27 ರಂದು ರೂಪುಗೊಳ್ಳುವುದು ಚತುರ್ಗ್ರಾಹಿ ಯೋಗ
  • ಈ ಮೂರು ರಾಶಿಯವರು ಪಡೆಯಲಿದ್ದಾರೆ ಎಲ್ಲಾ ಕೆಲಸಗಳಲ್ಲಿ ಯಶಸ್ಸು
  • ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳೂ ಚುರುಕು ಪಡೆಯಲಿವೆ
  ಅಕ್ಟೋಬರ್ ನಿಂದ ಯಶಸ್ಸಿನ ಉತ್ತುಂಗದಲ್ಲಿರುತ್ತಾರೆ ಈ ರಾಶಿಯವರು, ಚತುರ್ಗ್ರಾಹಿ ಯೋಗದಿಂದ ಎಲ್ಲವೂ ಶುಭ  title=
Planet transit october (file photo)

Chaturgrahi Yog In Libra : ಗ್ರಹಗಳ ಚಲನೆಯ ಪರಿಣಾಮವನ್ನು ಎಲ್ಲಾ 12 ರಾಶಿಚಕ್ರಗಳ ಜೀವನದ ಮೇಲೆ ಸ್ಪಷ್ಟವಾಗಿ ಕಾಣಬಹುದು. ಗ್ರಹಗಳ ಸಂಕ್ರಮಣದಿಂದ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಕಾಣಬಹುದು.  ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಸೇರಿದಾಗ, ಒಂದಲ್ಲ ಒಂದು ಯೋಗ ರೂಪುಗೊಳ್ಳುತ್ತದೆ. ಈ ಯೋಗವು ಶುಭ ಮತ್ತು ಅಶುಭ ಎರಡೂ ಫಲಗಳನ್ನು ನೀಡುತ್ತದೆ.  ಅಕ್ಟೋಬರ್ 27 ರಂದು, ತುಲಾ ರಾಶಿಯಲ್ಲಿ ಚತುರ್ಗ್ರಾಹಿ ಯೋಗವು ರೂಪುಗೊಳ್ಳಲಿದೆ.  ಇದು ಕೆಲವು ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ, ಬುಧ, ಶುಕ್ರ ಮತ್ತು ಕೇತು ಒಟ್ಟಿಗೆ ಇರುವುದರಿಂದ ಈ ಯೋಗವು ರೂಪುಗೊಳ್ಳುತ್ತಿದೆ. ಅಕ್ಟೋಬರ್ 27 ರಂದು, ಈ ಎಲ್ಲಾ ನಾಲ್ಕು ಗ್ರಹಗಳು ತುಲಾ ರಾಶಿಯಲ್ಲಿ ಸೇರಲಿವೆ. ಅದರ ಪರಿಣಾಮವು ಎಲ್ಲಾ ಜನರ ಜೀವನದ ಮೇಲೆ ಗೋಚರಿಸುತ್ತದೆ. ಆದರೆ ಈ ಮೂರೂ ರಾಶಿಯವರ ಅದೃಷ್ಟ ಮಾತ್ರ ಉತ್ತುಂಗದಲ್ಲಿರುತ್ತದೆ. 

ಇದನ್ನೂ ಓದಿ : ಮುಂದಿನ 140 ದಿನಗಳಲ್ಲಿ ಈ ನಾಲ್ಕು ರಾಶಿಯವರಿಗೆ ಭಾರೀ ಅದೃಷ್ಟ ! ವಿಶೇಷ ಕೃಪೆ ಕರುಣಿಸಲಿದ್ದಾರೆ ಮಂಗಳ, ಬುಧ ಗುರು

ಕನ್ಯಾ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯ ಎರಡನೇ ಮನೆಯಲ್ಲಿ ಚತುರ್ಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಯೋಗವು ಕನ್ಯಾ ರಾಶಿಯವರಿಗೆ ವಿಶೇಷ ಆರ್ಥಿಕ ಲಾಭವನ್ನು ನೀಡುತ್ತದೆ. ಈ ಅವಧಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಹಣ ಕೈ ಸೇರುತ್ತದೆ. ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಜನರು ಯಶಸ್ಸು ಪಡೆಯುತ್ತಾರೆ. ಹಣ ಹೂಡಿಕೆಗೆ ಇದು ಸೂಕ್ತ ಕಾಲ. ಜನರೊಂದಿಗೆ ಪ್ರೀತಿಯಿಂದ ಮಾತನಾಡುವುದರಿಂದ ಮಾತ್ರ ಪ್ರಯೋಜನವಾಗುವುದು.  

ಮಕರ ರಾಶಿ : ಈ ರಾಶಿಯವರಿಗೆ ಈ ಸಮಯವು ತುಂಬಾ ಪ್ರಯೋಜನಕಾರಿಯಾಗಿರಲಿದೆ. ಈ ರಾಶಿಚಕ್ರದ ಹತ್ತನೇ ಸ್ಥಾನದಲ್ಲಿ ಈ ಚತುರ್ಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ. ಇದನ್ನು ಕೆಲಸದ ಸ್ಥಳ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ದೀರ್ಘಕಾಲದಿಂದ ಹೊಸ ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಯಶಸ್ಸು ಸಿಗಲಿದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ವ್ಯಾಪಾರದಲ್ಲಿಯೂ ಲಾಭವಾಗಲಿದೆ.  

ಇದನ್ನೂ ಓದಿ :  Janmashtami 2022: ಕೃಷ್ಣ ಜನ್ಮಾಷ್ಟಮಿ, ಶುಭ ಮುಹೂರ್ತದಲ್ಲಿ ವಿಧಿ-ವಿಧಾನಗಳಿಂದ ಪೂಜೆ ಸಲ್ಲಿಸಲು ಈ ಸಾಮಗ್ರಿಗಳ ಪಟ್ಟಿ ನಿಮ್ಮ ಬಳಿ ಇರಲಿ

ಕುಂಭ ರಾಶಿ : ತುಲಾ ರಾಶಿಯಲ್ಲಿ ರೂಪುಗೊಳ್ಳುವ ಈ ಚತುರ್ಗ್ರಾಹಿ ಯೋಗವು ಕುಂಭ ರಾಶಿಯವರಿಗೆ ಕೂಡ ಮಂಗಳಕರವಾಗಿರುತ್ತದೆ. ಈ ರಾಶಿಯ ಒಂಭತ್ತನೇ ಮನೆಯಲ್ಲಿ ಈ ಯೋಗವು ರೂಪುಗೊಳ್ಳುತ್ತಿದೆ. ಇದು ವಿದೇಶ ಪ್ರವಾಸ ಮತ್ತು ಅದೃಷ್ಟಕ್ಕೆ ಕಾರಣವಾಗಲಿದೆ.  ಈ ಯೋಗದ ಸಮಯದಲ್ಲಿ, ಕುಂಭ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ  ಕೆಲಸ ಪೂರ್ಣಗೊಳ್ಳುವುದು. ವಿದೇಶ ಪ್ರವಾಸದ ಸಂಪೂರ್ಣ ಸಾಧ್ಯತೆಗಳೂ ಇರಲಿವೆ. 

 

( ಸೂಚನೆ :  ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು  ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News