Rahu Gochar Effects: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಶಿ ಬದಲಾವಣೆಯಾದಾಗ, ಮತ್ತು ಬೇರೆ ಗ್ರಹದೊಂದಿಗೆ ಯೋಗ ಉಂಟಾದಾಗ ಅದರ ಪರಿಣಾಮ, ಎಲ್ಲಾ ರಾಶಿಗಳ ಮೇಲೂ ಬೀಳುತ್ತದೆ. ಗ್ರಹಗಳ ರಾಶಿ ಪರಿವರ್ತನೆಯು ಕೆಲವು ರಾಶಿಯವರ ಅದೃಷ್ಟವನ್ನು ಹೆಚ್ಚಿಸುತ್ತದೆ. ಇನ್ನು ಕೆಲವು ರಾಶಿಯವರ ಮೇಲೆ ಅಶುಭ ಪರಿಣಾಮ ಬೀರುತ್ತದೆ. ರಾಹು ಗ್ರಹವು ಪ್ರಸ್ತುತ ಮೇಷ ರಾಶಿಯಲ್ಲಿ ಸಾಗುತ್ತಿದೆ. ಮೇಷ ರಾಹಿಯ ಅಧಿಪತಿ ಮಂಗಳ. ಇದರೊಂದಿಗೆ ಮಕರ ರಾಶಿಯಲ್ಲಿ ಶನಿದೇವ  ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಮಕರ ರಾಶಿಯಲ್ಲಿ ಶನಿ ಇರುವಾಗ, ಶನಿಯ ನಾಲ್ಕನೇ ಕೇಂದ್ರ ಪ್ರಭಾವವು ಮೇಷ ರಾಶಿಯ ಮೇಲೆ ಆಗುತ್ತಿರುತ್ತದೆ. ಈ ಯೋಗದಿಂದ ಶನಿದೇವನ ಪ್ರಭಾವ ರಾಹುವಿನ ಮೇಲೆ ಕೂಡಾ ಕಂಡು ಬರುತ್ತದೆ. ಎರಡೂ ಗ್ರಹಗಳು ಪರಸ್ಪರ ಸ್ನೇಹಿತರಾಗಿರುವುದರಿಂದ ಇದು ರಾಹುವಿನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. 


COMMERCIAL BREAK
SCROLL TO CONTINUE READING

ಈ ರಾಶಿಯವರು ಪ್ರಯೋಜನ ಪಡೆಯುತ್ತಾರೆ : 
ಶನಿ ಗ್ರಹದ ಕಾರಣದಿಂದಾಗಿ ರಾಹು ಬಲಗೊಳ್ಳುವುದರಿಂದ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೆ 4 ರಾಶಿಯವರಿಗೆ ವುಇಶೆಶ ಲಾಭವಾಗಲಿದೆ. ಮೇಷ, ಕಟಕ, ತುಲಾ ಮತ್ತು ಮಕರ ರಾಶಿಯವರಿಗೆ ಶನಿ ಮತ್ತು ರಾಹು ಸಂಕ್ರಮಣದಿಂದ ಅತಿ ಹೆಚ್ಚು ಲಾಭವಾಗಲಿದೆ. ಈ ರಾಶಿಯವರ ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ಇದಲ್ಲದೆ,  ಆರ್ಥಿಕ ಲಾಭವೂ ಹೆಚ್ಚುತ್ತದೆ. 


ಇದನ್ನೂ ಓದಿ ಷಡಾಷ್ಟಕ ಯೋಗದ ಪರಿಣಾಮ ಮೂರು ರಾಶಿಯವರ ಅದೃಷ್ಟ ಬೆಳಗಲಿದ್ದಾನೆ ಸೂರ್ಯ


ಮೇಷ ರಾಶಿ :
ಮೇಷ ರಾಶಿಯವರ ಪ್ರತಿಷ್ಠೆ ಸಮಾಜದಲ್ಲಿ ಹೆಚ್ಚಾಗಲಿದೆ. ಇದಲ್ಲದೆ, ಅದೃಷ್ಟದ ಬೆಂಬಲವೂ  ಸಿಗುತ್ತದೆ. ನಿಂತು ಹೋಗಿರುವ ಕೆಲಸ ಚುರುಕು ಪಡೆಯುತ್ತದೆ. ವೃತ್ತಿಜೀವನದಲ್ಲಿ ಬಡ್ತಿ ಸಿಗಲಿದೆ. ಒಳ್ಳೆಯ ಹಣ ಸಿಗುವ ಸಾಧ್ಯತೆ ಇದೆ.


ಕರ್ಕಾಟಕ ರಾಶಿ :
ಕರ್ಕಾಟಕ ರಾಶಿಯ ಜನರು ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಭೌತಿಕ ಸುಖ ಸೌಕರ್ಯಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತದೆ. 


ತುಲಾ ರಾಶಿ :
ತುಲಾ ರಾಶಿಯವರ ಶೌರ್ಯ ಮತ್ತು ಧೈರ್ಯ ಹೆಚ್ಚಾಗುತ್ತದೆ. ವೈವಾಹಿಕ ಜೀವನದಲ್ಲಿ ಸ್ವಲ್ಪ  ಸಮಸ್ಯೆ ಉಂಟಾಗಬಹುದು. ಹಣಕಾಸಿನ ಲಾಭವಾಗಬಹುದು. ವೃತ್ತಿಯಲ್ಲಿ ಬಡ್ತಿ ಪಡೆಯಬಹುದು. ಆದಾಯ ಹೆಚ್ಚಾಗಬಹುದು.


ಇದನ್ನೂ ಓದಿ : Zodiac Signs : ಪ್ರೀತಿ ವಿಚಾರದಲ್ಲಿ ನಿಷ್ಠಾವಂತರು ಈ ರಾಶಿಯ ಯುವತಿಯರು!


ಮಕರ ರಾಶಿ :
ಮಕರ ರಾಶಿಯವರು  ಆಸ್ತಿ ಖರೀದಿಸುವ ಅವಕಾಶ ಪಡೆದುಕೊಳ್ಳಬಹುದು. ಈ ದಿನಗಳಲ್ಲಿ ಹೊಸ ವಾಹನವನ್ನು ಖರೀದಿಸಲು ಮನಸ್ಸು ಮಾಡಬಹುದು. ಹೊಸ ಉದ್ಯೋಗ ಪ್ರಸ್ತಾಪ ಸಿಗಬಹುದು. ಪೋಷಕರೊಂದಿಗಿನ ಸಂಬಂಧಗಳು ಸೌಹಾರ್ದಯುತವಾಗಿರಬಹುದು.


 



( ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು  ಆಧರಿಸಿದೆ. ಜೀ  ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.