ಅಕ್ಟೋಬರ್ 23 ರವರೆಗೆ ಮೂರು ರಾಶಿಯವರ ಮೇಲಿರಲಿದೆ ಶನಿಯ ಕೃಪಾ ದೃಷ್ಟಿ

ಶನಿಯು ಪ್ರಸ್ತುತ ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಅಕ್ಟೋಬರ್ 23 ರವರೆಗೆ ಹಿಮ್ಮುಖ ಚಲನೆಯಲ್ಲಿಯೇ ಇರುತ್ತಾನೆ. ಈ ಅವಧಿಯಲ್ಲಿ ಮೂರೂ ರಾಶಿಯವರ ಮೇಲೆ ತನ್ನ ಕೃಪಾ  ದೃಷ್ಟಿ ಹೆಚ್ಚೇ ಹರಿಸುತ್ತಾನೆ.  

Written by - Ranjitha R K | Last Updated : Sep 12, 2022, 01:47 PM IST

  • ಹಿಮ್ಮುಖ ಚಲನೆಯಲ್ಲಿರುವ ಶನಿ ದೇವ
  • ಅಕ್ಟೋಬರ್ 23 ರವರೆಗೆ ಹಿಮ್ಮುಖವಾಗಿಯೇ ಸಂಚರಿಸಲಿರುವ ಶನಿಮಹಾತ್ಮ
  • ಮೂರು ರಾಶಿಯವರ ಮೇಲೆ ಇರಲಿದೆ ಶನಿಯ ಕೃಪಾ ದೃಷ್ಟಿ
ಅಕ್ಟೋಬರ್ 23 ರವರೆಗೆ ಮೂರು ರಾಶಿಯವರ ಮೇಲಿರಲಿದೆ ಶನಿಯ ಕೃಪಾ ದೃಷ್ಟಿ  title=
Shani Planet Retrograde 2022 (file photo)

ಬೆಂಗಳೂರು : ಜ್ಯೋತಿಷ್ಯದಲ್ಲಿ, ನಿಶ್ಚಿತ ಸಮಯಕ್ಕೆ ಪ್ರತಿ ಗ್ರಹದ ಸಂಚಾರ ಅಥವಾ ರಾಶಿಚಕ್ರದ ಬದಲಾವಣೆಯಾಗುತ್ತದೆ. ನ್ಯಾಯದ ದೇವರಾದ  ಶನೀಶ್ವರನು ಅತ್ಯಂತ ನಿಧಾನವಾಗಿ ಚಲಿಸಿ, ರಾಶಿ ಪರಿವರ್ತನೆಗೆ ಒಂದೂವರೆ ವರ್ಷ ತೆಗೆದುಕೊಳ್ಳುತ್ತಾನೆ. ಕರ್ಮ ಮತ್ತು ನಿಧಾನ ಚಲನೆಗೆ ಅನುಗುಣವಾಗಿ ಶನಿ ದೇವ ಫಲವನ್ನು ನೀಡುವುದರಿಂದ ಶನಿಯ ಸ್ಥಾನದಲ್ಲಿ ಆಗುವ ಸಣ್ಣ ಬದಲಾವಣೆಯು ಕೂಡಾ ಜಾತಕದ ಮೇಲೆ ಭಾರೀ ಪರಿಣಾಮಾವನ್ನು ಬೀರುತ್ತದೆ.  ಶನಿಯು ಪ್ರಸ್ತುತ ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಅಕ್ಟೋಬರ್ 23 ರವರೆಗೆ ಹಿಮ್ಮುಖ ಚಲನೆಯಲ್ಲಿಯೇ ಇರುತ್ತಾನೆ. ಈ ಅವಧಿಯಲ್ಲಿ ಮೂರು ರಾಶಿಯವರ ಮೇಲೆ ತನ್ನ ಕೃಪಾ  ದೃಷ್ಟಿ ಹೆಚ್ಚೇ ಹರಿಸುತ್ತಾನೆ. 

ಮೇಷ ರಾಶಿ : ಶನಿ ಮಹಾತ್ಮ ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವುದು ಮೇಷ ರಾಶಿಯವರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಅಕ್ಟೋಬರ್ 23 ರವರೆಗೆ ಶನಿಯೂ ಹಿಮ್ಮುಖ ಚಲನೆಯಲ್ಲಿದ್ದು,  ಈ ಸಮಯದಲ್ಲಿ,  ಮೇಷ ರಾಶಿಯವರು, ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತಾರೆ. ಇವರ ಆದಾಯ, ಗೌರವ ಹೆಚ್ಚಾಗಲಿದೆ. ಹೊಸ ಉದ್ಯೋಗ ಅಥವಾ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಸಾಧ್ಯತೆಗಳಿವೆ. ವ್ಯಾಪಾರ ವಿಸ್ತರಣೆಯಾಗಲಿದೆ. 

ಇದನ್ನೂ ಓದಿ : 72 ಗಂಟೆಗಳ ಕತ್ತಲೆ, ಕ್ಷುದ್ರಗ್ರಹ ಪತನ.. ನಾಸ್ಟ್ರಾಡಾಮಸ್ ನುಡಿದ ಭೀಕರ ಭವಿಷ್ಯ!

ಧನು ರಾಶಿ : ಶನಿಗ್ರಹದ ಹಿಮ್ಮುಖ ಚಲನೆಯು ಧನು ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ.  ಹಣಕಾಸಿನ ವಿಚಾರದಲ್ಲಿ ದೊಡ್ಡ ಮಟ್ಟದ ಲಾಭ ಗಳಿಸುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಆದಾಯ ಹೆಚ್ಚಾಗಬಹುದು. ಎಲ್ಲಿಂದಲಾದರೂ ಇದ್ದಕ್ಕಿದ್ದಂತೆ ಹಣ ಸಿಗುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ.  ಬಡ್ತಿಯೂ ಸಿಗುವುದು ವೇತನವೂ ಹೆಚ್ಚುವುದು. ಷೇರು ಮಾರುಕಟ್ಟೆಯಿಂದ ಲಾಭ ಪಡೆಯಬಹುದು. ನಿಮ್ಮ ಮಾತಿನ ಆಧಾರದ ಮೇಲೆ ಎಲ್ಲಾ ಕೆಲಸ ನಡೆಯುವುದು. ಆದರೆ ಚಾಲನೆ ಮಾಡುವಾಗ ಮಾತ್ರ ಜಾಗರೂಕರಾಗಿರಿ. 

ಮೀನ ರಾಶಿ : ಶನಿಯು ಮೀನ ರಾಶಿಯವರಿಗೆ ಸಾಕಷ್ಟು ಲಾಭಗಳನ್ನು ನೀಡುತ್ತಾನೆ. ಈ  ರಾಶಿಯವರು  ಹಣದ ವಿಷಯದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಆದಾಯದ ಹೆಚ್ಚಳವು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಉದ್ಯೋಗಿಗಳ ಸಂಬಳ ಹೆಚ್ಚಾಗುತ್ತದೆ. ಹಣ ಸಂಪಾದನೆಗೆ ಹೊಸ ಮಾರ್ಗಗಳು ಸೃಷ್ಟಿಯಾಗಲಿವೆ. ಹೂಡಿಕೆಯಿಂದ ಲಾಭವಾಗಲಿದೆ. 

ಇದನ್ನೂ ಓದಿ : Pitru Paksha 2022: ಕನಸಿನಲ್ಲಿ ಅಗಲಿದ ಪಿತೃರು ಕಂಡರೆ ಅದರ ಅರ್ಥ ಏನು?

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News