Ram Navami 2021: ಈ ಮಂತ್ರಗಳನ್ನು ಜಪಿಸಿ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಿ
Ram Navami 2021 - ಪ್ರತಿವರ್ಷ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಶ್ರೀ ರಾಮ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಅನುಸಾರ, ಈ ದಿನ ಶ್ರೀ ರಾಮಚಂದ್ರ ಕೌಶಲ್ಯಾ ದೇವಿಯ ಹೊಟ್ಟೆಯಿಂದ ಜನಿಸಿದ ಎಂದು ಹೇಳಲಾಗುತ್ತದೆ.
ನವದೆಹಲಿ : Ram Navami 2021 - ಪ್ರತಿವರ್ಷ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಶ್ರೀ ರಾಮ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಅನುಸಾರ, ಈ ದಿನ ಶ್ರೀ ರಾಮಚಂದ್ರ ಕೌಶಲ್ಯಾ ದೇವಿಯ ಹೊಟ್ಟೆಯಿಂದ ಜನಿಸಿದ ಎಂದು ಹೇಳಲಾಗುತ್ತದೆ. ಈ ವರ್ಷ ಏಪ್ರಿಲ್ 21 (Ram Navami 2021 Date)ರಂದು ಬುಧವಾರ ಶ್ರೀರಾಮ ನವಮಿ (Ram Navami 2021) ಉತ್ಸವ ಆಚರಿಸಲಾಗುತ್ತಿದೆ. ಈ ದಿನ ಶ್ರೀರಾಮಚಂದ್ರನಿಗೆ ವಿಧಿ-ವಿಧಾನಗಳಿಂದ ಪೂಜೆ ಸಲ್ಲಿಸಿ, ಅರ್ಚನೆ ಮಾಡಬೇಕು. ರಾಮನವಮಿಯ ದಿನ ರಾಮನ ಮಂತ್ರ (Shri Ram Siddhi Mantra) ಜಪಿಸಿದರೆ ಎಲ್ಲಾ ರೀತಿಯ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ ಹಾಗೂ ಶ್ರೀ ರಾಮನ ಆಶಿರ್ವಾದ ಪ್ರಾಪ್ತಿಯಾಗುತ್ತದೆ. ಹಾಗಾದರೆ ಬನ್ನಿ ಈ ದಿನ ಯಾವ ಯಾವ ಮಂತ್ರಗಳನ್ನು ಜಪಿಸಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ
ರಾಮ - ಸ್ವಯಂ ರಾಮ ಈ ಹೆಸರೇ ಒಂದು ಸಿದ್ದ ಮಂತ್ರವಾಗಿದೆ. ನಿತ್ಯ ರಾಮ ನಾಮ ಜಪಿಸುವವರಿಗೆ ಜೀವನದಲ್ಲಿ ಯಾವುದೆ ರೀತಿಯ ಸಂಕಷ್ಟ ಎದುರಾಗುವುದಿಲ್ಲ. ಹೀಗಾಗಿ ರಾಮನವಮಿಯ ಪವಿತ್ರ ಪರ್ವದಂದು ನೀವೂ ಕೂಡ ನಿಮ್ಮ ಇಚ್ಛೆಗೆ ಅನುಗುಣವಾಗಿ ರಾಮನಾಮ (Ram Mantra) ಜಪಿಸಬಹುದು.
ಓಂ ರಾಂ ರಾಮಾಯನಮಃ - ಈ ಮಂತ್ರ ಜಪಿಸುವುದರಿಂದ ಎಲ್ಲಾ ರೀತಿಯ ವಿಪತ್ತುಗಳು ದೂರವಾಗುತ್ತವೆ. ಶ್ರೀರಾಮನ ಈ ಮಂತ್ರ ತುಂಬಾ ಪ್ರಭಾವಶಾಲಿ ಹಾಗೂ ಶಕ್ತಿಶಾಲಿಯಾಗಿದೆ. ರಾಮ ನವಮಿಯ ದಿನ ಈ ಮಂತ್ರವನ್ನು ಪಠಿಸಲು ಮರೆಯದಿರಿ.
ಓಂ ರಾಮಚಂದ್ರಾಯನಮಃ - ಈ ಮಂತ್ರ ಜಪಿಸುವ ವ್ಯಕ್ತಿಯ ಮೇಲೆ ಶ್ರೀರಾಮಚಂದ್ರನ ವಿಶೇಷ ಕೃಪೆ ಇರುತ್ತದೆ. ಈ ಮಂತ್ರ ಜಪಿಸುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಾಗುತ್ತದೆ. ಶ್ರೀ ರಾಮನ ಪೂಜೆಯ (Ram Puja Shubha Muhurat) ವೇಳೆಗೆ ಈ ಮಂತ್ರವನ್ನು ಒಂದು ಮಾಲೆ ಮುಗಿಯುವವರೆಗೆ ಜಪಿಸಿ.
ಓಂ ರಾಮಭದ್ರಾಯನಮಃ - ಶ್ರೀರಾಮಚಂದ್ರನ ಈ ಸಿದ್ಧಿಮಂತ್ರವನ್ನು 108 ಬಾರಿ ಜಪಿಸಬೇಕು. ಈ ಮಂತ್ರ ಜಪಿಸುವುದರಿಂದ ಎಲ್ಲಾ ರೀತಿಯ ಅಡೆತಡೆಗಳು ದೂರವಾಗುತ್ತವೆ ಹಾಗೂ ಶ್ರೀರಾಮನ ಆಶೀರ್ವಾದ ಪ್ರಾಪ್ತಿಯಾಗುತ್ತದೆ.
ಇದನ್ನೂ ಓದಿ- Ram Navami 2021: ಶ್ರೀರಾಮ ನವಮಿಯ ಶುಭ ಮುಹೂರ್ತ ಯಾವಾಗ? ಪೂಜೆ-ಹವನ ಪ್ರಕ್ತಿಯೆಯ ವಿಧಾನ ಹೇಗಿರಬೇಕು?
ಓಂ ಜಾನಕಿ ವಲ್ಲಭ ಸ್ವಾಹಾ - ಶ್ರೀ ರಾಮನವಮಿಯ ಪವಿತ್ರ ಪರ್ವದಂದು ಶ್ರೀರಾಮನ ಜೊತೆಗೆ ಮಾತೆ ಸೀತೆಯನ್ನು ಕೂಡ ಆರಾಧಿಸಬೇಕು. ಈ ಮಂತ್ರ ಪಠಿಸುವುದರಿಂದ ಶ್ರೀರಾಮನ ಜೊತೆಗೆ ಮಾತೆ ಸೀತೆಯ ಆಶಿರ್ವಾದ ಕೂಡ ಲಭಿಸುತ್ತದೆ.
ಇದನ್ನೂ ಓದಿ- Staircase Vastu Tips - ಮನೆಯ Staircaseನಲ್ಲಿ ಅಡಗಿದೆ ಯಶಸ್ಸಿನ ಗುಟ್ಟು
ದೀನ ದಯಾಳ ಬಿರಿಂದು ಸಂಭಾರಿ, ಹರತು ನಾಥ ಮಮ ಸಂಕಟ ಭಾರಿ - ಈ ಮಂತ್ರ ಪಠಿಸುವುದರಿಂದ ಎಲ್ಲ ರೀತಿಯ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ. ಜೀವನದಲ್ಲಿ ಬರುವ ಯಾವುದೇ ರೀತಿಯ ಸಂಕಷ್ಟ ದೂರಾಗುತ್ತದೆ.
ಇದನ್ನೂ ಓದಿ-Sindhoora: ನಕಾರಾತ್ಮಕ ಶಕ್ತಿ, ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡುತ್ತೆ ಸಿಂಧೂರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.