Ramadan 2023 Date and time : ಇಂದಿನಿಂದ ಮುಸ್ಲಿಮರ ಪವಿತ್ರ ಮಾಸ ರಂಜಾನ್ ಆರಂಭ. ರಂಜಾನ್ ಹಬ್ಬವನ್ನು ಜಗತ್ತಿನಾದ್ಯಂತ ಮುಸ್ಲಿಮರು ಆಚರಿಸುತ್ತಾರೆ. ರಂಜಾನ್ ತಿಂಗಳಲ್ಲಿ ಭಕ್ತರು ರೋಜಾವನ್ನು ಆಚರಿಸುತ್ತಾರೆ. ಈ ಸಂದರ್ಭದಲ್ಲಿ  ಒಂದು ತಿಂಗಳು ಪೂರ್ತಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಒಂದು ತೊಟ್ಟು ನೀರನ್ನೂ ಕುಡಿಯದೆ ಶೃದ್ದಾ ಭಕ್ತಿಯಿಂದ ಉಪವಾಸ ಆಚರಿಸಲಾಗುತ್ತದೆ. ಈ ಪವಿತ್ರ ಮಾಸ ಈದ್-ಉಲ್-ಫಿತರ್‌ನೊಂದಿಗೆ ಕೊನೆಗೊಳ್ಳುತ್ತದೆ. ಭಾರತದಲ್ಲಿ ಈದ್-ಉಲ್-ಫಿತರ್ ಅನ್ನು ಏಪ್ರಿಲ್ 21ರ ಶುಕ್ರವಾರ ಅಥವಾ ಶನಿವಾರ ಆಚರಿಸಲಾಗುತ್ತದೆ. ಈ ಹಬ್ಬ ಚಂದ್ರ ಯಾವಾಗ ಕಾಣಿಸುತ್ತಾನೆ ಎನ್ನುವುದನ್ನು ಅವಲಂಬಿಸಿರುತ್ತದೆ. 


COMMERCIAL BREAK
SCROLL TO CONTINUE READING

ರಂಜಾನ್ 2023 : 
ರಂಜಾನ್ ಆರಂಭ: ಮಾರ್ಚ್ 22, ಬುಧವಾರ 
ರಂಜಾನ್ ಅಂತ್ಯ: ಏಪ್ರಿಲ್ 21, ಶುಕ್ರವಾರ 
ಲೈಲತ್ ಅಲ್-ಕದ್ರ್: ಏಪ್ರಿಲ್ 17, ಸೋಮವಾರ 
ಈದ್ ಅಲ್-ಫಿತರ್ : ಏಪ್ರಿಲ್ 22, ಶನಿವಾರ 


ಇದನ್ನೂ ಓದಿ : "ವರುಷಕೊಂದು ಹೊಸತು ಜನ್ಮ, ವರುಷಕೊಂದು ಹೊಸತು ನೆಲೆಯು, ಅಖಿಲ ಜೀವಜಾತಕೆ"


ರಂಜಾನ್ 2023:  ಸೆಹ್ರಿ ಮತ್ತು ಇಫ್ತಾರ್ ವೇಳಾಪಟ್ಟಿ :


ರೋಜಾ     ದಿನಾಂಕ  ಸೆಹ್ರಿ      ಇಫ್ತಾರ್
1 23 ಮಾರ್ಚ್ 2023 05:02 18:36
2 24 ಮಾರ್ಚ್ 2023 05:01 18:37
3 25 ಮಾರ್ಚ್ 2023 05:00 18:38
4 26 ಮಾರ್ಚ್ 2023 04:59     18:38
5 27 ಮಾರ್ಚ್ 2023 04:57 18:39
6 28 ಮಾರ್ಚ್ 2023 04:56 18:39
7 29 ಮಾರ್ಚ್ 2023 04:55     18:40
8 30 ಮಾರ್ಚ್ 2023 04:53     18:40
9 31 ಮಾರ್ಚ್ 2023 04:52 18:41
10  01 ಏಪ್ರಿಲ್ 2023 04:51 18:41
11 02 ಏಪ್ರಿಲ್ 2023 04:50     18:42
12 03 ಏಪ್ರಿಲ್ 2023 04:48 18:43
13 04 ಏಪ್ರಿಲ್ 2023 04:47 18:43
14 05 ಏಪ್ರಿಲ್ 2023 04:46     18:44
15 06 ಏಪ್ರಿಲ್ 2023 04:45 18:44
16 07 ಏಪ್ರಿಲ್ 2023 04:43 18:45
17 08 ಏಪ್ರಿಲ್ 2023 04:42 18:45
18 09 ಏಪ್ರಿಲ್ 2023 04:41 18:46
19 10 ಏಪ್ರಿಲ್ 2023 04:40 18:46
20 11 ಏಪ್ರಿಲ್ 2023 04:38 18:47
21 12 ಏಪ್ರಿಲ್ 2023 04:37 18:48
22 13 ಏಪ್ರಿಲ್ 2023 04:36 18:48
23 14 ಏಪ್ರಿಲ್ 2023 04:35 18:49
24 15 ಏಪ್ರಿಲ್ 2023 04:33 18:49
25 16 ಏಪ್ರಿಲ್ 2023 04:32 18:50
26 17 ಏಪ್ರಿಲ್ 2023 04:31 18:50
27 18 ಏಪ್ರಿಲ್ 2023 04:30 18:51
28 19 ಏಪ್ರಿಲ್ 2023 04:28 18:52
29 20 ಏಪ್ರಿಲ್ 2023 04:27 18:52
30 21 ಏಪ್ರಿಲ್ 2023 04:26 8:53

ಇದನ್ನೂ ಓದಿ :  Happy Ugadi 2023 : ನಿಮ್ಮ ಪ್ರೀತಿ ಪಾತ್ರರಿಗೆ ನೀವೂ ಕಳುಹಿಸಿ ಯುಗಾದಿ ಶುಭಾಶಯ
 
ರಂಜಾನ್‌ಗೆ ಸಂಬಂಧಿಸಿದ ಪ್ರಮುಖ ವಿಷಯಗಳು :
1. ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್‌ನ 9 ನೇ ತಿಂಗಳು. ಇದು ಅತ್ಯಂತ ಪವಿತ್ರವಾದ ತಿಂಗಳು. ನಂಬಿಕೆಗಳ ಪ್ರಕಾರ, ಪ್ರವಾದಿ ಮುಹಮ್ಮದ್ ರಂಜಾನ್ ತಿಂಗಳಲ್ಲಿ ದೇವರಿಂದ ಖುರಾನ್ ಪದ್ಯಗಳನ್ನು ಪಡೆದಿದ್ದರು ಎನ್ನಲಾಗುತ್ತದೆ. ಈ ಕಾರಣಕ್ಕಾಗಿ, ಈ ತಿಂಗಳಲ್ಲಿ ಉಪವಾಸ ಮಾಡುವ ಮೂಲಕ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ. 


2. ರೋಜಾ ಸಮಯದಲ್ಲಿ, ಸೂರ್ಯೋದಯಕ್ಕೆ ಮುನ್ನ  ಸೆಹ್ರಿ  ಸೇವಿಸಬೇಕು. ನಂತರ ದಿನವಿಡೀ ಏನನ್ನೂ ತಿನ್ನುವಂತಿಲ್ಲ, ಕುಡಿಯುವಂತಿಲ್ಲ. ಸಂಜೆ ಖರ್ಜೂರ ತಿಂದು ಉಪವಾಸ ಬಿಡಲಾಗುತ್ತದೆ. ಇದಾದ ನಂತರ ಇಫ್ತಾರ್ ನಡೆಯುತ್ತದೆ.


3. ರೋಸಾದಲ್ಲಿ, ಸೂರ್ಯಾಸ್ತದ ನಂತರ ನಮಾಜ್ ಅನ್ನು ಪಠಿಸಲಾಗುತ್ತದೆ. ಅದರ ನಂತರವೇ ಉಪವಾಸ ಬಿಡಲಾಗುತ್ತದೆ. 


4. ರಂಜಾನ್ ಅನ್ನು ಆಶೀರ್ವಾದಗಳ ತಿಂಗಳು ಎಂದು ಕರೆಯಲಾಗುತ್ತದೆ. ಈ ಮಾಸದಲ್ಲಿ ಮಾಡಿದ ಪ್ರಾರ್ಥನೆ ವಿಶೇಷ ಫಲ ನೀಡುತ್ತದೆಯಂತೆ. 


5. ಸೆಹ್ರಿ ಮತ್ತು ಇಫ್ತಾರಿಯನ್ನು ರಂಜಾನ್‌ನಲ್ಲಿ ಪ್ರಾಮಾಣಿಕವಾಗಿ ಗಳಿಸಿದ ಹಣದಿಂದ ಮಾಡಲಾಗುತ್ತದೆ. ಅಪ್ರಾಮಾಣಿಕ ಹಣದಿಂದ ಸೆಹ್ರಿ ಮತ್ತು ಇಫ್ತಾರಿ ಮಾಡುವವರ ಮೇಲೆ ಅಲ್ಲಾಹುವಿನ ಆಶೀರ್ವಾದ ಇರುವುದಿಲ್ಲ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ