Happy Ugadi 2023 : ನಿಮ್ಮ ಪ್ರೀತಿ ಪಾತ್ರರಿಗೆ ನೀವೂ ಕಳುಹಿಸಿ ಯುಗಾದಿ ಶುಭಾಶಯ

Ugadi 2023 Wishes in kannada:  ಯುಗಾದಿಯನ್ನು ಮುಖ್ಯವಾಗಿ ದೇಶದ ದಕ್ಷಿಣಾರ್ಧದಲ್ಲಿ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಗೋವಾ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ.  

Written by - Ranjitha R K | Last Updated : Mar 22, 2023, 11:28 AM IST
  • ಇಂದು ಎಲ್ಲೆಡೆ ಯುಗಾದಿ ಸಂಭ್ರಮ.
  • ಚಾಂದ್ರಮಾನ ಪಂಚಾಂಗದ ಮೊದಲ ದಿನ ಯುಗಾದಿ
  • ಪ್ರೀತಿ ಪಾತ್ರರಿಗೆ ನೀವೂ ಕಳುಹಿಸಿ ಯುಗಾದಿ ಶುಭಾಶಯ
 Happy Ugadi 2023 : ನಿಮ್ಮ ಪ್ರೀತಿ ಪಾತ್ರರಿಗೆ  ನೀವೂ ಕಳುಹಿಸಿ ಯುಗಾದಿ ಶುಭಾಶಯ  title=

ಬೆಂಗಳೂರು : ಇಂದು ಎಲ್ಲೆಡೆ ಯುಗಾದಿ ಸಂಭ್ರಮ. ಹೊಸ ವರ್ಷವನ್ನು ಹೊಸ ಉತ್ಸಾಹ ಮತ್ತು ಪ್ರೀತಿಯಿಂದಲೇ ಬರ ಮಾಡಿಕೊಳ್ಳಲಾಗುತ್ತದೆ. ಯುಗಾದಿಯನ್ನು ಮುಖ್ಯವಾಗಿ ದೇಶದ ದಕ್ಷಿಣಾರ್ಧದಲ್ಲಿ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಗೋವಾ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ.

ಹಿಂದೂ ಚಾಂದ್ರಮಾನ ಪಂಚಾಂಗದ ಮೊದಲ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಈ ದಿನ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸುವುದಲ್ಲದೆ, ಮನೆಯ ಮುಖ್ಯ ದ್ವಾರಗಳಿಗೆ ಮಾವಿನ ಎಲೆಗಳ ತೋರಣ ಕಟ್ಟಿ ಅಲಂಕಾರ ಮಾಡಲಾಗುತ್ತದೆ. ಯುಗಾದಿ ದಿನ ಅಭ್ಯಂಜನ ಮಾಡಿ ಹೊಸ ಬಟ್ಟೆ ಧರಿಸಿ, ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಪೂಜೆ ಸಲ್ಲಿಸಲಾಗುತ್ತದೆ. ಯುಗಾದಿ ದಿನ ಒಬ್ಬಟ್ಟನ್ನು ವಿಶೇಷ ಖಾದ್ಯವಾಗಿ ಬಡಿಸಲಾಗುತ್ತದೆ.  

ಇದನ್ನೂ ಓದಿ : Ugadi 2023: ಮನೆಯಲ್ಲಿ ಹಣದ ಕೊರತೆಯನ್ನು ಶಾಶ್ವತವಾಗಿ ದೂರ ಮಾಡಲು ಯುಗಾದಿಯಂದು ಈ ವಸ್ತುಗಳನ್ನು ಖರೀದಿಸಿ

ಯುಗಾದಿಯೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡಿರುವ ವೇಳೆ, ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಬಹುದಾದ ಶುಭಾಶಯಗಳು, ಸಂದೇಶಗಳು ಪಟ್ಟಿ ಇಲ್ಲಿದೆ:

ಯುಗಾದಿ ಹೊಸ ವರ್ಷದ ಆರಂಭ.
ಈ ವರ್ಷ ನಿಮ್ಮ ಮತ್ತು ನಿಮ್ಮ ಕುಟುಂಬದವರ ಬಾಳಲ್ಲಿ ಬೆಲ್ಲದ ಸಿಹಿಯೇ ತುಂಬಿರಲಿ.. 
ಯುಗಾದಿ ಹಬ್ಬದ ಶುಭಾಶಯಗಳು.

ಬಾಳು ಹಸನಾಗಲಿ
ವರ್ಷವೆಲ್ಲಾ ಸಂತೋಷ ತುಂಬಿರಲಿ 
ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು 

ಇದನ್ನೂ ಓದಿ : Ugadi 2023: 30 ವರ್ಷಗಳ ಬಳಿಕ ಆಗಮಿಸಿದೆ ಇಂಥಾ ‘ವಿಶೇಷ ಯುಗಾದಿ’: ಈ ರಾಶಿಯವರಿಗೆ ಊಹಿಸಲಾಗದಷ್ಟು ಲಾಭವೋ ಲಾಭ!

ಜೀವನದಲ್ಲಿ ಬೇವಿನ ಕಹಿಯೂ ಇರುತ್ತದೆ, ಬೆಲ್ಲದ ಸಿಹಿಯೂ ಇರುತ್ತದೆ 
ನೋವಿಗೆ ಕುಗ್ಗದೆ, ನಲಿವಿಗೆ ಹಿಗ್ಗದೆ ಸಮಚಿತ್ತದಿಂದ ಇರಿ
ಯುಗಾದಿ ನಿಮ್ಮ ಬಾಳಿನ ಕಹಿಯನ್ನು ದೂರ ಮಾಡಲಿ 

ಈ ವರ್ಷ ದೇವರು ನಿಮಗೆ ಬಯಸಿದ್ದೆಲ್ಲವನ್ನೂ ಕರುಣಿಸಲಿ.
 ನಿಮಗೂ, ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು

ಹೊಸ ಸಂವತ್ಸರ ನಿಮ್ಮ ಜೀವನದಲ್ಲಿ ಹೊಸ ಹುರುಪು, ಹೊಸ ಭರವಸೆ, ಹೊಸ ಸಾಧನೆಯ ಕನಸು, ಯಶಸ್ಸನ್ನು ತರಲಿ. ಯುಗಾದಿ ಹಬ್ಬದ ಶುಭಾಶಯಗಳು.

ಜೀವನದಲ್ಲಿ ಸಿಹಿ ಕಹಿ ಇರಲೇ ಬೇಕು 
ನೋವು - ನಲಿವು ಇದ್ದಾಗಲೇ ಜೀವನ
ಸುಖ ದುಃಖ ಎರಡನ್ನು ಸಮಾನವಾಗಿ ಸ್ವೀಕರಿಸಿ ಮುಂದುವರಿಯೋಣ 
ಯುಗಾದಿ 2023 ರ ಶುಭಾಶಯಗಳು. 

ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೆಲ್ಲವನ್ನೇ ಉಣಬಡಿಸಲಿ. ನಿಮ್ಮೆಲ್ಲ ಕನಸುಗಳು ನನಸಾಗಲಿ. 
ಹಬ್ಬದ ಹಾರ್ದಿಕ ಶುಭಾಶಯಗಳು 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News