ಶನಿ ಅಮಾವಾಸ್ಯೆಯ ದಿನವೇ ಸಂಭವಿಸಲಿದೆ ಸೂರ್ಯ ಗ್ರಹಣ, ಯಾರ ಮೇಲಾಗಲಿದೆ ಪರಿಣಾಮ ?
ಮಾರ್ಗಶೀರ್ಷ ಮಾಸದ ಈ ಅಮಾವಾಸ್ಯೆ ಡಿಸೆಂಬರ್ 3 ರಂದು ಸಂಜೆ 04:55 ರಿಂದ ಡಿಸೆಂಬರ್ 4 ರಂದು ಮಧ್ಯಾಹ್ನ 01:12 ರವರೆಗೆ ಇರುತ್ತದೆ. ಸೂರ್ಯಗ್ರಹಣದ ಸಮಯವು ಡಿಸೆಂಬರ್ 4 ರಂದು ಬೆಳಿಗ್ಗೆ 10:59 ರಿಂದ ಮಧ್ಯಾಹ್ನ 03:07 ರವರೆಗೆ ಇರುತ್ತದೆ.
ನವದೆಹಲಿ : 2021 ರ ಕೊನೆಯ ಸೂರ್ಯಗ್ರಹಣವು (Solar eclipse) 2021ರ ಡಿಸೆಂಬರ್ 4 ರ ಶನಿವಾರದಂದು ಸಂಭವಿಸಲಿದೆ. ಆ ದಿನ ಶನಿ ಅಮಾವಾಸ್ಯೆ ಕೂಡಾ ಇರಲಿದೆ. ಧರ್ಮ ಮತ್ತು ಜ್ಯೋತಿಷ್ಯದ (Astrology) ದೃಷ್ಟಿಯಿಂದ ಈ ದಿನವು ತುಂಬಾ ವಿಶೇಷವಾಗಿದೆ. ಶನಿ ಅಮಾವಾಸ್ಯೆಯ (Shani amavasye)ದಿನದಂದು ಸೂರ್ಯಗ್ರಹಣ ಸಂಭವಿಸಿದಾಗ ವಿಶೇಷ ಯೋಗ ರೂಪುಗೊಳ್ಳುತ್ತದೆ. ಅಮಾವಾಸ್ಯೆಗಳ ಪೈಕಿ ಶನಿ ಅಮಾವಾಸ್ಯೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಆ ದಿನ ಸಂಭವಿಸುವ ಗ್ರಹಣವನ್ನು ಅಶುಭವೆಂದು ಹೇಳಲಾಗುತ್ತದೆ.
ಸೂರ್ಯಗ್ರಹಣ ಮತ್ತು ಅಮಾವಾಸ್ಯೆಯ ಸಮಯ :
ಮಾರ್ಗಶೀರ್ಷ ಮಾಸದ ಈ ಅಮಾವಾಸ್ಯೆ ಡಿಸೆಂಬರ್ 3 ರಂದು ಸಂಜೆ 04:55 ರಿಂದ ಡಿಸೆಂಬರ್ 4 ರಂದು ಮಧ್ಯಾಹ್ನ 01:12 ರವರೆಗೆ ಇರುತ್ತದೆ. ಸೂರ್ಯಗ್ರಹಣದ (Solar eclipse) ಸಮಯವು ಡಿಸೆಂಬರ್ 4 ರಂದು ಬೆಳಿಗ್ಗೆ 10:59 ರಿಂದ ಮಧ್ಯಾಹ್ನ 03:07 ರವರೆಗೆ ಇರುತ್ತದೆ. ಈ ರೀತಿ ಸೂರ್ಯಗ್ರಹಣದ ಅರ್ಧದಷ್ಟು ಸಮಯ ಅಮವಾಸ್ಯೆ ತಿಥಿಯಲ್ಲಿ ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ಸೂರ್ಯಗ್ರಹಣದ ಜೊತೆಗೆ ಶನಿದೇವನ (Shani dev) ಕ್ರೋಧವನ್ನೂ ಕೂಡಾ ತಪ್ಪಿಸಬೇಕಾಗುತ್ತದೆ. ಶನಿಯ ಪ್ರಕೋಪವನ್ನು ತಪ್ಪಿಸಿಕೊಳ್ಳಲು 'ಸೂರ್ಯ ಪುತ್ರೋ ದೀರ್ಘ ದೇಹೋ ವಿಶಾಲಾಕ್ಷ: ಶಿವ ಪ್ರಿಯ:. ಮಂದಾಚಾರಹ ಪ್ರಸನ್ನಾತ್ಮ ಪೀಡಾ ದಾತುಹೂ ಮೆ ಶನಿ ಮಂತ್ರವನ್ನು ಪಠಿಸಿದರೆ ಲಾಭವಾಗಲಿದೆ.
ಇದನ್ನೂ ಓದಿ: ನಿಮ್ಮ ಜಾತಕದಲ್ಲಿ ಈ 4 ಯೋಗಗಳಿದ್ದರೆ, ಉದ್ಯೋಗ, ವ್ಯವಹಾರದಲ್ಲಿ ಯಶಸ್ಸು ನಿಮ್ಮದೆ
ಈ ವಿಷಯಗಳನ್ನು ನೆನಪಿನಲ್ಲಿಡಿ :
ಸೂರ್ಯಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಶನಿ ಅಮಾವಾಸ್ಯೆಯ (Shani amavasye) ದಿನದಂದು ಸಂಭವಿಸುವ ಸೂರ್ಯಗ್ರಹಣವು ಇನ್ನೂ ಕೆಟ್ಟ ಪರಿಣಾಮವನ್ನು ನೀಡುತ್ತದೆ. ಆದ ಕಾರಣ ಗ್ರಹಣದ ದಿನ ಯಾವುದೇ ಶುಭ ಕಾರ್ಯವನ್ನು ಮಾಡಬೇಡಿ. ಮಾತ್ರವಲ್ಲ ಸಾಧ್ಯವಾದಷ್ಟು ದೂರ ಪ್ರಯಾಣಿಸಬೇಡಿ. ಇಷ್ಟ ದೇವನನ್ನು ಆರಾಧಿಸಿ. ಗ್ರಹಣದ ಸಮಯದಲ್ಲಿ ಚೂಪಾದ ವಸ್ತುಗಳನ್ನು ಖರೀದಿಸಬೇಡಿ ಅಥವಾ ಬಳಸಬೇಡಿ. ಚಾಕುಗಳು, ಕತ್ತರಿಗಳನ್ನು ಬಳಸುವುದನ್ನು ತಪ್ಪಿಸಿ. ಈ ದಿನ ಶನಿ ಅಮಾವಾಸ್ಯೆಯೂ ಇರುವುದರಿಂದ ಈ ದಿನ ದಾನ ತಪ್ಪದೇ ದಾನ ಮಾಡಬೇಕು. ಸಾಧ್ಯವಾದರೆ ಕಪ್ಪು ವಸ್ತುಗಳನ್ನು ದಾನ ಮಾಡಿ. ಈ ದಿನ ಯಾವುದೇ ಕಪ್ಪು ವಸ್ತುಗಳನ್ನು ಖರೀದಿಸಬೇಡಿ.
ಸೂರ್ಯಗ್ರಹಣದ ಸಮಯದಲ್ಲಿ ಏನನ್ನೂ ತಿನ್ನಬಾರದು. ಗ್ರಹಣದ ಮೊದಲು ಆಹಾರಗಳಿಗೆ (food) ತುಳಸಿ ಎಲೆಗಳನ್ನು (tulsi leaves) ಹಾಕಿಡಿ, ಗ್ರಹಣದ ನಂತರ ತುಳಸಿ ಎಳೆಯನ್ನು ಹಾಕಿಟ್ಟ ಆಹಾರವನ್ನು ಮಾತ್ರ ಸೇವಿಸಿ,. ಯಾಕೆಂದರೆ ಗ್ರಹಣದ ಸಮಯದಲ್ಲಿ ತುಳಸಿ ಹಾಕಿರದ ಆಹಾರ ಮತ್ತು ನೀರು ಅಶುದ್ಧವಾಗುತ್ತದೆ ಎಂಬುದು ನಂಬಿಕೆ. ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಹೊರಗೆ ಹೋಗಬಾರದು.
ಇದನ್ನೂ ಓದಿ: ಅದೃಷ್ಟವಂತ ಮಹಿಳೆಯರು ಈ ವಿಶೇಷ ಗುಣಗಳನ್ನು ಹೊಂದಿರುತ್ತಾರೆ: ಏನೆಂದು ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.