Magh Purnima 2023 Remedies: ವೈದಿಕ ಪಂಚಾಂಗದ ಪ್ರಕಾರ, ಮಾಘ ಮಾಸದ ಹುಣ್ಣಿಮೆಯನ್ನು ಪ್ರತಿ ವರ್ಷ ಮಾಘ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ಎಂದು ಆಚರಿಸಲಾಗುತ್ತದೆ. ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆಯಾದ ಲಕ್ಷ್ಮಿ ದೇವಿಯು ಈ ದಿನದಂದು ಪ್ರಸನ್ನಳಾಗಿರುತ್ತಾಳೆ ಮತ್ತು ಮಾಘ ಹುಣ್ಣಿಮೆಯ ದಿನ ದಾನ ಮತ್ತು ಸ್ನಾನ ಮಾಡುವುದರಿಂದ ವ್ಯಕ್ತಿಗೆ ಅಕ್ಷಯ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ನಮ್ಮ ಹಿಂದೂ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಮಾಘ ಮಾಸದ ಹುಣ್ಣಿಮೆಯ ದಿನ ಕರ್ನಾಟಕದ ನದಿಗಳು ಸೇರಿದಂತೆ ದೇಶದ ಎಲ್ಲಾ ಪುಣ್ಯ ನದಿಗಳಲ್ಲಿ ಭಕ್ತರ ದಂಡೇ ನೆರೆದಿರುತ್ತದೆ. ಇದರೊಂದಿಗೆ, ಪ್ರಯಾಗದಲ್ಲಿ ಮಾಘಸ್ನಾನ ಮಾಡುವುದು ತುಂಬಾ ಪುಣ್ಯ ಫಲದಾಯಿ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಈ ದಿನದಂದು ದೇವತೆಗಳು ಭೂಮಿಗೆ ಭೇಟಿ ನೀಡಲು ಬರುತ್ತಾರೆ ಮತ್ತು ದಾನ-ಸ್ನಾನ ಮಾಡುವವರನ್ನು ಆಶೀರ್ವದಿಸುತ್ತಾರೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಈ ವರ್ಷ ಮಾಘ ಹುಣ್ಣಿಮೆಯ ದಿನದಂದು ರವಿ ಪುಷ್ಯ ಯೋಗವು ರೂಪುಗೊಂಡಿದೆ. ರವಿ ಪುಷ್ಯ ಯೋಗವು ಸಂಪತ್ತು, ಧಾನ್ಯಗಳು, ಸಂತೋಷ, ವೈಭವದಲ್ಲಿ ಪ್ರಗತಿಯನ್ನು ನೀಡುತ್ತದೆ. ಹೀಗಾಗಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ಯಾವ ಕೆಲಸವನ್ನು ಮಾಡುವುದರಿಂದ ಅಕ್ಷಯ ಪುಣ್ಯ ಮತ್ತು ಅಶ್ವಮೇಧ ಯಾಗದ ಸಮಾನ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 


ಮಾಘ ಮಾಸದ ಹುಣ್ಣಿಮೆಯ ತಿಥಿ
ಪಂಚಾಂಗದ ಪ್ರಕಾರ, ಮಾಘ ಮಾಸದ ಹುಣ್ಣಿಮೆ ಫೆಬ್ರವರಿ 04, 2023 ರಂದು ಶನಿವಾರ ರಾತ್ರಿ 09:28 ಗಂಟೆಗೆ ಪ್ರಾರಂಭವಾಗಲಿದೆ ಮತ್ತು ಮಾರನೆ ದಿನ ಫೆಬ್ರವರಿ 05, ಭಾನುವಾರ, ರಾತ್ರಿ 11:57 ಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಮಾಘಿ ಹುಣ್ಣಿಮೆಯನ್ನು ಫೆಬ್ರವರಿ 5 ರಂದು ಉದಯ ದಿನಾಂಕವನ್ನು ಆಧಾರವಾಗಿಟ್ಟುಕೊಂಡು ಆಚರಿಸಲಾಗುತ್ತದೆ.


ರವಿ-ಪುಷ್ಯ ಯೋಗ ರೂಪುಗೊಳ್ಳಲಿದೆ
ವೇದ ಪಂಚಾಂಗದ ಪ್ರಕಾರ ಫೆಬ್ರವರಿ 05 ರಂದು ಬೆಳೆಗ್ಗೆ 07.06 ರಿಂದ 12.12 ರ ನಡುವೆ ರವಿ ಪುಷ್ಯ ಯೋಗವು ರೂಪುಗೊಳ್ಳಲಿದೆ. ಈ ಯೋಗವು ಖರೀದಿಗಾಗಿ ತುಂಬಾ ಮಂಗಳಕರವಾಗಿದೆ. ನೀವು ಈ ಯೋಗದಲ್ಲಿ ವಾಹನ ಅಥವಾ ಚಿನ್ನ-ಬೆಳ್ಳಿಯನ್ನು ಖರೀದಿಸಬಹುದು.


ಈ ಜ್ಯೋತಿಷ್ಯ ಉಪಾಯಗಳನ್ನು ಮಾಡಿ
ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ಸ್ನಾನ ಮಾಡುವುದರಿಂದ ಜಾತಕದಲ್ಲಿ ಗ್ರಹಗಳ ಸ್ಥಾನವು ಬಲಗೊಳ್ಳುತ್ತದೆ ಮತ್ತು ಎಲ್ಲಾ ರೀತಿಯ ದೋಷಗಳು ನಿವಾರಣೆಯಾಗುತ್ತವೆ. ಹೀಗಾಗಿ ಈ ದಿನ, ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದ ನಂತರ, ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ. ಆದಿತ್ಯ ಹೃದಯ ಸ್ತೋತ್ರವನ್ನೂ ಪಠಿಸಿ. ಹೀಗೆ ಮಾಡುವುದರಿಂದ ಜಾತಕದಲ್ಲಿ ಸೂರ್ಯನ ದೋಷ ದೂರಾಗುತ್ತದೆ. ಇದರೊಂದಿಗೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.


ಕೆಲಸದಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗುತ್ತಿಲ್ಲ ಎಂದರೆ ಈ ಉಪಾಯ ಮಾಡಿ
ನಿಮ್ಮ ಯಾವುದೇ ಕೆಲಸದಲ್ಲಿ ನಿಮಗೆ ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ಅದರಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತಿಲ್ಲ ಎಂದಾದರೆ, ರವಿ ಪುಷ್ಯ ಯೋಗದ ಸಮಯದಲ್ಲಿ ನಿಮ್ಮ ಮನೆಯ ದೇವರ ಕೊಠಡಿಯಲ್ಲಿ ತುಪ್ಪದ ದೀಪವನ್ನು ಬೆಳಗಿಸಿ. ಇದರೊಂದಿಗೆ ಕೆಲಸ ಬೇಗ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಿ. ನಿಮ್ಮ ಕೆಲಸದಲ್ಲಿ ನಿಮಗೆ ಶೀಘ್ರವೇ ಕಾರ್ಯಸಿದ್ಧಿ ಪ್ರಾಪ್ತಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.


ಮೋಕ್ಷ ಪ್ರಾಪ್ತಿಗೆ ಈ ಉಪಾಯ ಅನುಸರಿಸಿ
ಮಾಘ ಮಾಸದ ಹುಣ್ಣಿಮೆಯ ದಿನ ಪ್ರಯಾಗದ ಸಂಗಮದಲ್ಲಿ ಸ್ನಾನ ಮಾಡಿದರೆ ಅರ್ಥ, ಧರ್ಮ, ಕಾಮ, ಮೋಕ್ಷಗಳು ಪ್ರಾಪ್ತಿಯಾಗುತ್ತವೆ ಎಂಬುದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇದರೊಂದಿಗೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.


ಇದನ್ನೂ ಓದಿ-Shani Paad Parivartan: ಲೋಹದ ಪಾದದಲ್ಲಿ ಶನಿಯ ನಡೆ, 3 ರಾಶಿಗಳ ಭಾಗ್ಯ ಪರಿವರ್ತನೆಯ ಸಾಧ್ಯತೆ, ಪ್ರತಿ ಕ್ಷೇತ್ರದಲ್ಲೂ ಯಶಸ್ಸು!


ಈ ವಸ್ತುಗಳನ್ನು ದಾನ ಮಾಡಿ
ಮಾಘ ಮಾಸದ ಹುಣ್ಣಿಮೆಯ ದಿನ ಬಡವರಿಗೆ ಮತ್ತು ನಿರ್ಗತಿಕರಿಗೆ ಬೆಲ್ಲ, ಗೋಧಿ, ಅಕ್ಕಿ, ಬಿಳಿ ಬಟ್ಟೆ, ಹಾಲು, ತುಪ್ಪ ಇತ್ಯಾದಿಗಳನ್ನು ದಾನ ಮಾಡಿ. ದಾನ ಮಾಡುವುದರಿಂದ ಆರೋಗ್ಯದ ಜೊತೆಗೆ ಸುಖ, ಸೌಭಾಗ್ಯ ಪ್ರಾಪ್ತಿಯಾಗುತ್ತದೆ.


ಇದನ್ನೂ ಓದಿ-ಬುಧನ ರಾಶಿಗೆ ಕೇತು, ಮೂರು ರಾಶಿಗಳ ಜನರ ಮೇಲೆ ಹಣದ ಸುರಿಮಳೆ!


ರವಿ ಪುಷ್ಯದಲ್ಲಿ ಚಿನ್ನ ಬೆಳ್ಳಿ ಖರೀದಿ ಉತ್ತಮ
ರವಿ ಪುಷ್ಯ ಯೋಗದಲ್ಲಿರುವ ಈ ದಿನ ಚಿನ್ನ ಬೆಳ್ಳಿ ಖರೀದಿಸಬೇಕು. ಏಕೆಂದರೆ ಲಕ್ಷ್ಮಿ ದೇವಿಯು ಚಿನ್ನ ಬೆಳ್ಳಿಯಲ್ಲಿ ನೆಲೆಸುತ್ತಾಳೆ ಎಂಬುದು ಧಾರ್ಮಿಕ ನಂಬಿಕೆ. ಬೆಳ್ಳಿಯ ಖರೀದಿಯು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.


ಇದನ್ನೂ ಓದಿ-Raj Yog: ಗುರು-ಚಂದ್ರರ ಮೈತ್ರಿಯಿಂದ ನವಪಂಚಮ ರಾಜ ಯೋಗ ನಿರ್ಮಾಣ, 3 ರಾಶಿಗಳ ಜನರಿಗೆ ಭಾರಿ ಧನಾಗಮನದ ಜೊತೆಗೆ ಭಾಗ್ಯೋದಯ ಬಾಗ್ಯ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.