Surya-Guru Yuti: ಒಂದು ನಿಶ್ಚಿತ ಕಾಲಾಂತರದಲ್ಲಿ ಪ್ರತಿಯೊಂದು ಗ್ರಹಗಳು ರಾಶಿಯನ್ನು ಪರಿವರ್ತಿಸಿ ಗೋಚರಿಸುತ್ತವೆ. ಅವುಗಳ ಪ್ರಭಾವ ಭೂಮಿಯ ಮೇಲಿರುವ ಜೀವ ರಾಶಿಗಳ ಮೇಲೂ ಬೀರುತ್ತದೆ. ಈ ಗೋಚರದ ಕಾಲದಲ್ಲಿ ಕೆಲವೊಮ್ಮೆ ಸಂಯೋಜನೆಯ ಕಾಕತಾಳೀಯಗಳು ಕೂಡ ಸಂಭವಿಸುತ್ತವೆ. ಏಪ್ರಿಲ್ ಆರಂಭದಲ್ಲಿ ಗುರು ಹಾಗೂ ಸೂರ್ಯನ ಸಂಯೋಜನೆ ನೆರವೇರಲಿದೆ. ಸುದೀರ್ಘ 12 ವರ್ಷಗಳ ಅವಧಿಯ ಬಳಿಕ ಮೇಷ ರಾಶಿಯಲ್ಲಿ ಈ ವಿಶೇಷ ಕಾಕತಾಳೀಯ ರೂಪುಗೊಳ್ಳುತ್ತಿದೆ. ಇದಕ್ಕೆ ಕಾರಣ ಎಂದರೆ 12 ವರ್ಷಗಳ ಬಳಿಕ ಗುರು ಮೇಷ ರಾಶಿಯಲ್ಲಿ ಸಂಚರಿಸಲಿದೆ. ಹೀಗಾಗಿ ಗುರು-ಸೂರ್ಯರ ಈ ಮೈತ್ರಿ ಎಲ್ಲಾ ದ್ವಾದಶ ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರಲಿದೆ. ಆದರೆ, 3 ಜಾತಕದವರ ಮೇಲೆ ಈ ಯುತಿಯ ಅತ್ಯಂತ ಶುಭ ಫಲಿತಾಂಶಗಳನ್ನು ಗಮನಿಸಬಹುದಾಗಿದೆ. ಬನ್ನಿ ಆ ಮೂರು ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಮಕರ ರಾಶಿ
ಸೂರ್ಯ ಮತ್ತು ಗುರುವಿನ ಸಂಯೋಜನೆಯು ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಏಕೆಂದರೆ ಈ ಮೈತ್ರಿಯು ನಿಮ್ಮ ರಾಶಿಯಿಂದ ಚತುರ್ಥ ಭಾವದಲ್ಲಿ ರೂಪುಗೊಳ್ಳಲಿದೆ. ಇದು ದೈಹಿಕ ಸಂತೋಷ ಮತ್ತು ತಾಯಿಯ ಸ್ಥಳವೆಂದು ಪರಿಗಣಿಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ದೈಹಿಕ ಸಂತೋಷಗಳು ಹೆಚ್ಚಾಗಬಹುದು. ಅಲ್ಲದೆ, ಈ ಅವಧಿಯಲ್ಲಿ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಲು ನಿಮ್ಮ ಮನಸ್ಸು ಹಾತೊರೆಯಬಹುದು. ಇದೇ ವೇಳೆ, ನೀವು ಮನೆಯ ಅಗತ್ಯಗಳಿಗೆ ಸಂಬಂಧಿಸಿದ ಯಾವುದೇ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ಇದರೊಂದಿಗೆ, ಈ ಸಂಯೋಗದ ದೃಷ್ಟಿ ನಿಮ್ಮ ಸಂಕ್ರಮಣದ ಜಾತಕದ ದಶಮ ಭಾವದ ಮೆಲಿರಲಿದೆ. ಇದರಿಂದ ನೀವು ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಅಲ್ಲದೆ, ಉದ್ಯಮಿಗಳು ಲಾಭ ಪಡೆಯಬಹುದು.
ಇದನ್ನೂ ಓದಿ-ಫೆ.13 ರಿಂದ ಸೂರ್ಯನ ಹಾಗೆ ಹೊಳೆಯಲಿದೆ 3 ರಾಶಿಗಳ ಜನರ ಭಾಗ್ಯ, ಸರ್ಕಾರಿ ನೌಕರಿ-ಪ್ರಮೋಶನ್ ಯೋಗ!
ಧನು ರಾಶಿ
ಸೂರ್ಯ ಮತ್ತು ಬೃಹಸ್ಪತಿಯ ಸಂಯೋಜನೆಯು ಧನು ರಾಶಿಯ ಜನರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಪಂಚಮ ಭಾವದಲ್ಲಿ ಈ ಮೈತ್ರಿಯು ರೂಪುಗೊಳ್ಳುತ್ತದೆ. ಇದು ಬಾಲ್ಯ ಮತ್ತು ಪ್ರೇಮ ವಿವಾಹದ ಕಾರಕ ಮನೆ ಪರಿಗಣಿಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ನೀವು ಪ್ರೇಮ ವಿವಾಹದಲ್ಲಿ ಯಶಸ್ಸನ್ನು ಪಡೆಯಬಹುದು. ಇದರೊಂದಿಗೆ, ನವವಿವಾಹಿತ ದಂಪತಿಗಳಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಬಹುದು. ಮತ್ತೊಂದೆಡೆ, ನೀವು ಕುಟುಂಬ ಸದಸ್ಯರು ಅಥವಾ ಪ್ರೀತಿಯ ಸಂಗಾತಿಯೊಂದಿಗೆ ಎಲ್ಲಾದರೂ ಡಿನ್ನರ್ ಡೇಟ್‌ಗೆ ಹೋಗಬಹುದು. ಅಲ್ಲದೆ, ವಿದ್ಯಾರ್ಥಿಗಳಾಗಿರುವವರು ಯಾವುದೇ ಉನ್ನತ ಸಂಸ್ಥೆಯಲ್ಲಿ ಪ್ರವೇಶ ಪಡೆಯಬಹುದು. ಇದೇ ವೇಳೆ ಸೂರ್ಯ-ಗುರು ಗ್ರಹದ ಜೊತೆಗೆ, ನಿಮಗೆ ಶನಿ ದೇವರ ಆಶೀರ್ವಾದ ಕೂಡ ಲಭಿಸಲಿದೆ. ಏಕೆಂದರೆ ಜನವರಿ 17 ರ ಶನಿ ಸಂಕ್ರಮಣದಿಂದ ಈಗಾಗಲೇ ನಿಮಗೆ ಶನಿಯ ಸಾಡೇ ಸತಿಯಿಂದ ಮುಕ್ತಿ ಸಿಕ್ಕಿದೆ.
ಇದನ್ನೂ ಓದಿ-Money Astrology: ಈ 4 ರಾಶಿಗಳ ಜನರ ಗಳಿಕೆ ಕಡಿಮೆ, ಆದರೂ ಆಗರ್ಭ ಶ್ರೀಮಂತರಾಗ್ತಾರಂತೆ! ನಿಮ್ಮ ರಾಶಿ ಇದರಲ್ಲಿದೆಯಾ?
ಸಿಂಹ ರಾಶಿ
ಗುರುವಿನ ಈ ಮೇಷ ಗೋಚರ ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಏಕೆಂದರೆ ಗುರುವು ನಿಮ್ಮ ರಾಶಿಯಿಂದ ಒಂಬತ್ತನೇ ಭಾವದಲ್ಲಿ ಗೋಚರಿಸಲಿದ್ದಾನೆ. ಹೀಗಾಗಿ ಈ ಸಮಯದಲ್ಲಿ ಅದೃಷ್ಟದ ಬೆಂಬಲ ನಿಮ್ಮೊಂದಿಗಿರಲಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಬಹುದು. ಈ ಸಮಯವು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ ಎಂದು ಸಾಬೀತಾಗಬಹುದು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೀವು ಯಶಸ್ಸನ್ನು ಪಡೆಯುವ ನಿರೀಕ್ಷೆಯಿದೆ. ಇದೇ ವೇಳೆ, ನಿಮ್ಮ ನಿಂತು ಹೋಗಿರುವ ಕೆಲಸಗಳೂ ಕೂಡ ಈ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. ಇದರೊಂದಿಗೆ, ಈ ಅವಧಿಯಲ್ಲಿ ನೀವು ಕೆಲಸ ಮತ್ತು ವ್ಯಾಪಾರಕ್ಕಾಗಿ ಪ್ರಯಾಣ ಬೆಳೆಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ, ಇದು ನಿಮಗೆ ಆಹ್ಲಾದಕರ ಮತ್ತು ಪ್ರಯೋಜನಕಾರಿ ಎಂದು ಸಾಬೀತಾಗುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.