ಬೆಂಗಳೂರು:  Raw Food- ಆರೋಗ್ಯಕರ ಜೀವನಕ್ಕೆ ಉತ್ತಮ ಆಹಾರ ಸೇವನೆ ಕೂಡ ಅವಶ್ಯಕ. ಕೆಲವು ಆಹಾರ ಪದಾರ್ಥಗಳನ್ನು ಬೇಯಿಸಿ ತಿನ್ನುವುದು ಉತ್ತಮ. ಆದರೆ ಇನ್ನೂ ಕೆಲವು ಆಹಾರ ಪದಾರ್ಥಗಳನ್ನು ಎಂದಿಗೂ ಕೂಡ ಬೇಯಿಸಿ ತಿನ್ನಲೇಬಾರದು.  ಕೆಲವು ಆಹಾರ ಪದಾರ್ಥಗಳನ್ನು ಬೇಯಿಸಿ ತಿನ್ನುವುದರಿಂದ ಅವುಗಳಲ್ಲಿನ ಅನೇಕ ಉತ್ತಮ ಅಂಶಗಳು ನಾಶವಾಗುತ್ತವೆ. ಆದರೆ, ಈ ವಸ್ತುಗಳನ್ನು ಕಚ್ಚಾ ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅಂತಹ ಆಹಾರ ಪದಾರ್ಥಗಳು ಯಾವುವು? ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಈ ಆಹಾರಗಳನ್ನು ಹಸಿಯಾಗಿ ತಿನ್ನುವುದು ಹೆಚ್ಚು ಪ್ರಯೋಜನಕಾರಿ:-
ಕೋಸುಗಡ್ಡೆ:
ಬ್ರೊಕೊಲಿಯನ್ನು (Broccoli) ತಿನ್ನುವುದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಲ್ಲಿ ವಿಟಮಿನ್ ಎ, ಸಿ, ಪೊಟ್ಯಾಶಿಯಂ ಮತ್ತು ಪ್ರೋಟೀನ್‌ನಂತಹ ಸಾಕಷ್ಟು ಪೋಷಕಾಂಶಗಳಿವೆ. ಆದರೆ ಇದನ್ನು ಬೇಯಿಸದೆ ಹಸಿಯಾಗಿ ತಿನ್ನುವುದು ಹೆಚ್ಚು ಪ್ರಯೋಜನಕಾರಿ. ಬ್ರೊಕೊಲಿಯನ್ನು ಬೇಯಿಸುವುದರಿಂದ ಅದರಲ್ಲಿನ ಪೋಷಕಾಂಶಗಳು ನಾಶವಾಗುತ್ತವೆ.


ಇದನ್ನೂ ಓದಿ- Eating Habits: ಆಹಾರ ಸೇವಿಸುವಾಗ ಎಂದಿಗೂ ಈ ತಪ್ಪನ್ನು ಮಾಡಬೇಡಿ


ತೆಂಗಿನ ಕಾಯಿ:
ತೆಂಗಿನ ನೀರು ಮತ್ತು ಹಸಿ ತೆಂಗಿನಕಾಯಿ (Coconut) ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮೆಗ್ನೀಸಿಯಮ್, ಸೋಡಿಯಂ ಮತ್ತು ಪೊಟ್ಯಾಸಿಯಮ್ ನಂತಹ ಅನೇಕ ಪೋಷಕಾಂಶಗಳು ತೆಂಗಿನಕಾಯಿಯಲ್ಲಿ ಕಂಡುಬರುತ್ತವೆ. ಆದರೆ ತೆಂಗಿನ ಕಾಯಿಯನ್ನು ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೆ ಪ್ರಯೋಜನವಾಗುವ ಬದಲು ಹಾನಿಯಾಗುತ್ತದೆ.


ಒಣ ಹಣ್ಣುಗಳು:
ಅನೇಕ ಬಾರಿ ಜನರು ಒಣ ಹಣ್ಣುಗಳನ್ನು (Dry Fruits) ಹುರಿದು ತಿನ್ನಲು ಇಷ್ಟಪಡುತ್ತಾರೆ. ಆದರೆ ಇದರ ಅನಾನುಕೂಲವೆಂದರೆ ಈ ಪ್ರಕ್ರಿಯೆಯಲ್ಲಿ ಕಬ್ಬಿಣ ಮತ್ತು ಮೆಗ್ನೀಸಿಯಮ್ ಕಡಿಮೆಯಾಗುತ್ತದೆ ಮತ್ತು ಕ್ಯಾಲೋರಿ ಹೆಚ್ಚಳದಿಂದಾಗಿ ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತದೆ. ನೀವು ಒಣ ಹಣ್ಣುಗಳನ್ನು ಹಸಿವಾಗಿ ಸೇವಿಸಿದರೆ ಅದರಿಂದ ನಿಮಗೆ ಲಾಭವಾಗುತ್ತದೆ, ಆದರೆ ಹುರಿದ ನಂತರ ಅದನ್ನು ತಿಂದರೆ ಅದು ಹಾನಿಕಾರಕ. ಹೆಚ್ಚಿನ ಕ್ಯಾಲೋರಿಗಳಿಂದಾಗಿ, ನಿಮ್ಮ ಬೊಜ್ಜು (Obesity) ಹೆಚ್ಚಾಗಬಹುದು. ಇದು ಪೋಷಕಾಂಶಗಳನ್ನು ನಾಶಪಡಿಸುತ್ತದೆ ಮತ್ತು ಅದು ನಿಮಗೆ ಪ್ರಯೋಜನವನ್ನು ನೀಡುವುದಿಲ್ಲ.


ಇದನ್ನೂ ಓದಿ-  Covishield: ಕೋವಿಶೀಲ್ಡ್‌ನ ಬೂಸ್ಟರ್ ಡೋಸ್ ಅನ್ನು ಯಾವಾಗ ತೆಗೆದುಕೊಳ್ಳಬೇಕು?


ದೊಣ್ಣೆ ಮೆಣಸಿನ ಕಾಯಿ:
ಕ್ಯಾಪ್ಸಿಕಂ (Capsicum) ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಹೃದಯವನ್ನು ಆರೋಗ್ಯವಾಗಿರಿಸುತ್ತದೆ, ಆದರೆ ಕ್ಯಾಪ್ಸಿಕಂ ಅನ್ನು ಹೆಚ್ಚು ಬೇಯಿಸಿ ತಿನ್ನಬೇಡಿ. ಇದರಿಂದ ನೀವು ಹೆಚ್ಚು ಪ್ರಯೋಜನವನ್ನು ಪಡೆಯುವುದಿಲ್ಲ ಏಕೆಂದರೆ, ಇದನ್ನು ದೀರ್ಘಕಾಲ ಬೇಯಿಸುವುದರಿಂದ ಅದರ ಪೋಷಕಾಂಶಗಳು ನಾಶವಾಗುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ