ನವದೆಹಲಿ : ದಿನನಿತ್ಯ ದೇವರ ಪೂಜೆಯೊಂದಿಗೆ (Daily pooja) ನಮ್ಮ ದಿನ ಆರಂಭವಾಗುತ್ತದೆ. ಹಾಗೆಯೇ ವಾರದ ಎಲ್ಲಾ ಏಳು ದಿನಗಳೂ  ಯಾವುದಾದರೊಂದು ದೇವರಿಗೆ ಸಮರ್ಪಿತವಾಗಿರುತ್ತದೆ. ಆ ದಿನ ಆ ದೇವರನ್ನು ಪೂಜಿಸಿದರೆ ವಿಶೇಷ ಫಲ ಸಿಗುತ್ತದೆ ಎನ್ನಲಾಗಿದೆ. ಅಂತೆಯೇ, ಮಂಗಳವಾರವನ್ನು ಹನುಮಾನ್ (Hanuman Pooja) ದೇವರ ದಿನವೆಂದು ಪರಿಗಣಿಸಲಾಗುತ್ತದೆ.  ಈ ದಿನ ಭಜರಂಗಬಲಿಯನ್ನು ಪೂಜಿಸಿದರೆ ಮನೋಕಾಮನೆಗಳು ಈಡೇರುತ್ತದೆ ಎಂದು ಹೇಳಲಾಗುತ್ತದೆ.  ಆದರೆ ಮಂಗಳವಾರವೇ (Tuesday) ಹನುಮಾನ್ ಜಿಯನ್ನು ಪೂಜಿಸುವ ಹಿಂದಿನ ಕಾರಣವೇನು? ಇದಕ್ಕೂ ಕಾರಣವಿದೆ. ಅಲ್ಲದೆ, ಹನುಮಾನ್  ಪೂಜೆಯನ್ನು ಮಾಡುವಾಗ ಯಾವ ನಿಯಮಗಳನ್ನು ಪಾಲಿಸಬೇಕು ಎಂಬ ಮಾಹಿತಿ ಇಲ್ಲಿದೆ.


COMMERCIAL BREAK
SCROLL TO CONTINUE READING

ಈ ಕಾರಣದಿಂದಾಗಿ ಮಂಗಳವಾರದ ಪೂಜೆ ಹನುಮಂತನಿಗೆ ಅರ್ಪಣೆ : 
ಪೌರಾಣಿಕ ನಂಬಿಕೆಗಳ ಪ್ರಕಾರ ಮತ್ತು ವಿಶೇಷವಾಗಿ ಸ್ಕಂದ ಪುರಾಣದ ಪ್ರಕಾರ, ಮಂಗಳವಾರ  ಹನುಮಾನ್ (Hanuman) ಜನನವಾಯಿತು.  ಹಾಗಾಗಿ ಈ ದಿನವನ್ನು ಅವರ ಆರಾಧನೆಗೆ ಮೀಸಲಿಡಲಾಯಿತು. ಈ ದಿನ, ಯಾರು ವಿಧಿ ವಿಧಾನಗಳೊಂದಿಗೆ  ಭಜರಂಗಬಲಿಯನ್ನು ಪೂಜಿಸುತ್ತಾರೋ (Bhajarangabali pooja) ಅವರ ಎಲ್ಲಾ ಇಚ್ಛೆಗಳು ಈಡೇರುತ್ತವೆಯಂತೆ.  ಹನುಮಂತನನ್ನು ಸಂಕಟ ಹರಣ ದೂ ಕರೆಯುತ್ತಾರೆ. ಇದಲ್ಲದೆ, ಹನುಮಾನ್ ಅನ್ನು ಮಂಗಳ ಗ್ರಹದ (Mars) ನಿಯಂತ್ರಕ ಎಂದು ಪರಿಗಣಿಸಲಾಗಿದೆ. ಹಾಗಾಗಿ ಹನುಮಂತನನ್ನು ಮಂಗಳವಾರ ಪೂಜಿಸಲಾಗುತ್ತದೆ. ಈ ದಿನ, ಉಪವಾಸ ಮಾಡುವುದು ಮತ್ತು ಉಪವಾಸದ ಜೊತೆಗೆ, ಹನುಮಾನ್ ಚಾಲಿಸಾ (Hanuman Chalisa)ಪಠಣ ಮತ್ತು ಸುಂದರ ಕಾಂಡ ಪಠಣ ಮಾಡಿದರೆ, ಫಲಪ್ರದವಾಗಿರುತ್ತದೆಯಂತೆ.  


ಇದನ್ನೂ ಓದಿ : ಚಿಟಿಕೆ ಉಪ್ಪು ವಾಸ್ತು ದೋಷ ನಿವಾರಣೆಗೆ ಸಹಾಯ ಮಾಡುತ್ತದೆ..!


ಹನುಮಾನ್ ಜಿ ಪೂಜೆ ಉಪವಾಸದ ಸಮಯದಲ್ಲಿ ಈ ವಿಷಯಗಳನ್ನು ನೆನಪಿರಲಿ: 
- ಹನುಮಾನ್ ಜಿ ಯನ್ನು ಪೂಜಿಸುವಾಗ, ಮಡಿ ಮೈಲಿಗೆಗಯತ್ತ ವಿಶೇಷ ಕಾಳಜಿ ವಹಿಸಬೇಕು.
- ಪೂಜೆ ವೇಳೆ  ಮನಸ್ಸು ಮತ್ತು ದೇಹ ಪರಿಶುದ್ಧರಾಗಿರಲಿ. ಶಾಂತ ಮನಸ್ಸಿನಿಂದ ಪೂಜೆ ಮಾಡಿ.
- ಮಂಗಳವಾರ (Tuesday) ಉಪವಾಸ ಮಾಡುತ್ತಿದ್ದರೆ, ಈ ದಿನ ಉಪ್ಪು ತಿನ್ನಬೇಡಿ.  ಸಿಹಿ ಪದಾರ್ಥಗಳನ್ನು ಏನನ್ನಾದರೂ ದಾನ ಮಾಡುತ್ತಿದ್ದರೆ, ಅದನ್ನು ಸಹ ಸೇವಿಸಬಾರದು. 
- ಮಂಗಳವಾರ ಹನುಮನನ್ನು ಪೂಜಿಸುವುದು ಮತ್ತು 'ಶ್ರೀ ಹನುಮತೆ ನಮಃ ಎಂದು ಜಪಿಸುವುದರಿಂದ ಪೂಜೆಯ ಉತ್ತಮ ಫಲ ಸಿಗುತ್ತದೆ. 
-ಈ ದಿನ ಕೆಂಪು ಬಟ್ಟೆಗಳನ್ನು (Red cloth) ಧರಿಸುವುದು ಶುಭ. ನೆನಪಿರಲಿ ಪೂಜೆಯ ವೇಳೆ ಕಪ್ಪು ಅಥವಾ ಬಿಳಿ ವಸ್ತ್ರಗಳನ್ನು ತಪ್ಪಿಯೂ ಧರಿಸಬೇಡಿ. 
- ಮಂಗಳವಾರದ ಉಪವಾಸವನ್ನು ಆಚರಿಸುವ ವ್ಯಕ್ತಿ ದಿನಕ್ಕೆ ಒಮ್ಮೆ ಮಾತ್ರ ಆಹಾರವನ್ನು (food) ಸೇವಿಸಬೇಕು.


ಇದನ್ನೂ ಓದಿ : vastu tips : ಮನೆಯಲ್ಲಿ ಮನಿಪ್ಲಾಂಟ್ ಇಡುವ ಮೊದಲು ಈ ಮಾತುಗಳನ್ನು ತಿಳಿದುಕೊಳ್ಳಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.