ಚಿಟಿಕೆ ಉಪ್ಪು ವಾಸ್ತು ದೋಷ ನಿವಾರಣೆಗೆ ಸಹಾಯ ಮಾಡುತ್ತದೆ..!

ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ವಾತಾವರಣವನ್ನು ಕಾಪಾಡಿಕೊಳ್ಳಲು ಪ್ಪನ್ನು ಬಳಸಲಾಗುತ್ತದೆ. ನೀವು ಮನೆಯನ್ನು ಸ್ವಚ್ಛಗೊಳಿಸುವಾಗ  ನೀರಿಗೆ ಒಂದು ಚಿಟಿಕೆ ಉಪ್ಪು ಸೇರಿಸಿ ಮನೆ ಒರಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಗೊಳ್ಳುತ್ತದೆಯಂತೆ.

Written by - Ranjitha R K | Last Updated : Mar 8, 2021, 12:09 PM IST
  • ವಾಸ್ತು ಶಾಸ್ತ್ರದಲ್ಲಿ ಉಪ್ಪಿಗೆ ಇದೆ ಬಹಳ ಪ್ರಾಮುಖ್ಯತೆ
  • ಚಿಟಿಕೆ ಉಪ್ಪಿಗೆ ನೆಗೆಟಿವ್ ಎನರ್ಜಿಯನ್ನು ತೊಡೆದು ಹಾಕುವ ಶಕ್ತಿಯಿದೆ
  • ವಾಸ್ತು ಸಮಸ್ಯೆ ನಿವಾರಣೆಗೆ ಉಪ್ಪನ್ನು ಈ ರೀತಿ ಬಳಸಿ ನೋಡಿ
ಚಿಟಿಕೆ ಉಪ್ಪು ವಾಸ್ತು ದೋಷ ನಿವಾರಣೆಗೆ ಸಹಾಯ ಮಾಡುತ್ತದೆ..! title=
ಚಿಟಿಕೆ ಉಪ್ಪಿಗೆ ನೆಗೆಟಿವ್ ಎನರ್ಜಿಯನ್ನು ತೊಡೆದು ಹಾಕುವ ಶಕ್ತಿಯಿದೆ (file photo)

ನವದೆಹಲಿ : ಉಪ್ಪು (Salt) ಇಲ್ಲದೆ ನಮ್ಮ ಆಹಾರದ ರುಚಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಉಪ್ಪು ಇಲ್ಲದೆ ಇರುವ ಆಹಾರವನ್ನು (Food) ತಿನ್ನಲು ಸಾಧ್ಯವೇ ಇಲ್ಲ. ನಮ್ಮ ಅಡುಗೆಮನೆಯ ಪ್ರಮುಖ ಪದಾರ್ಥಗಳಲ್ಲಿ ಒಂದಾದ ಉಪ್ಪಿಗೆ ವಾಸ್ತು ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಜ್ಯೋತಿಷ್ಯ ಮತ್ತು ವಾಸ್ತು ತಜ್ಞರ ಪ್ರಕಾರ, ಒಂದು ಚಿಟಿಕೆ ಉಪ್ಪು ಮನೆಯ negative ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ. ಸಂತೋಷ, ಸಮೃದ್ಧಿ, ಮನಸ್ಸಿನ ಶಾಂತಿ ನೆಲೆಗೊಳ್ಳುವಂತೆ ಮಾಡುತ್ತದೆ.  ವಾಸ್ತು ಶಾಸ್ತ್ರದ ಪ್ರಕಾರ  ಉಪ್ಪನ್ನು ಹೇಗೆ ಬಳಸಬಹುದು ಎಂದು ತಿಳಿಯಿರಿ.

ವಾಸ್ತು ಶಾಸ್ತ್ರದಲ್ಲಿ ಉಪ್ಪಿನ ಪ್ರಾಮುಖ್ಯತೆ :
1. ಮನೆಯಲ್ಲಿ ಸಕಾರಾತ್ಮಕ ಶಕ್ತಿಯ (positive energy) ವಾತಾವರಣವನ್ನು ಕಾಪಾಡಿಕೊಳ್ಳಲು ಉಪ್ಪನ್ನು ಬಳಸಲಾಗುತ್ತದೆ. ನೀವು ಮನೆಯನ್ನು ಸ್ವಚ್ಛಗೊಳಿಸುವಾಗ  ನೀರಿಗೆ ಒಂದು ಚಿಟಿಕೆ ಉಪ್ಪು ಸೇರಿಸಿ ಮನೆ ಒರಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಗೊಳ್ಳುತ್ತದೆಯಂತೆ. ಇದು ಕುಟುಂಬ ಸದಸ್ಯರ ನಡುವಿನ ವೈಮನಸ್ಯವನ್ನು ದೂರ ಮಾಡಿ, ಸಂಬಂಧವನ್ನು ಸುಧಾರಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಇದನ್ನೂ ಓದಿ : vastu tips : ಮನೆಯಲ್ಲಿ ಮನಿಪ್ಲಾಂಟ್ ಇಡುವ ಮೊದಲು ಈ ಮಾತುಗಳನ್ನು ತಿಳಿದುಕೊಳ್ಳಿ..!

2. ನಿಮ್ಮ ಮನೆಯಲ್ಲಿ ನೀವು ಯಾವ ಪಾತ್ರೆಯಲ್ಲಿ ಉಪ್ಪನ್ನು ಇಟ್ಟುಕೊಳ್ಳುತ್ತೀರಿ ಎನ್ನುವ ಅಂಶ ಕೂಡಾ ಬಹಳ ಮುಖ್ಯ.  ಅದು ವಾಸ್ತು ಮೇಲೆ ಸಹ ಹೆಚ್ಚಿನ ಪರಿಣಾಮ ಬೀರುತ್ತದೆ. ಆದ್ದರಿಂದ, ಉಪ್ಪನ್ನು ಯಾವತ್ತೂ ಉಕ್ಕಿನ ಅಥವಾ ಕಬ್ಬಿಣದ ಪಾತ್ರೆಗಳಲ್ಲಿ (iron) ಸಂಗ್ರಹಿಸಬಾರದು. ಉಪ್ಪನ್ನು ಯಾವಾಗಲೂ ಗಾಜಿನ ಜಾರ್ ನಲ್ಲಿಯೇ (Glass jar)ಇಡಬೇಕು.  ಹೀಗೆ ಮಾಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಅಲ್ಲದೆ ಆರ್ಥಿಕ ಸಮಸ್ಯೆಗಳು ಉದ್ಭವಿಸುವುದಿಲ್ಲ. 

3. ಕೆಲವೊಮ್ಮೆ ರಾಹುವಿನ negative  ಎಜರ್ಜಿಯಿಂದಾಗಿ  ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹರಡುತ್ತದ. , ಈ ಕಾರಣದಿಂದಾಗಿ ಕುಟುಂಬ ಸದಸ್ಯರು ಅನಾರೋಗ್ಯದಿಂದ ಬಳಲಬೇಕಾಗುತ್ತದೆ. ಇದನ್ನು ತಪ್ಪಿಸಲು ವಾಸ್ತುವಿನಲ್ಲಿ ಉಪಾಯವಿದೆ. ಗಾಜಿನ ಬಟ್ಟಲಿನಲ್ಲಿ ಹರಳು ಉಪ್ಪನ್ನು ಹಾಕಿ ಅದನ್ನು ಸ್ನಾನದ ಮನೆಯಲ್ಲಿ ಇಡಬೇಕು. ಈ ಉಪ್ಪನ್ನು ಪ್ರತೀ 15 ದಿನಗಳಿಗೊಮ್ಮೆ ಬದಲಾಯಿಸುತ್ತಿರಬೇಕು. ಹೀಗೆ ಮಾಡುವುದರಿಂದ  ರಾಹುವಿನ negative energyಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆಯಂತೆ. 

ಇದನ್ನೂ ಓದಿ : Vastu tips: ನಿಮ್ಮ ಪರ್ಸ್ ನಲ್ಲಿ ಈ ಐದು ವಸ್ತುಗಳಿದ್ದರೆ ನಷ್ಟ ತಪ್ಪಿದ್ದಲ್ಲ..!

4. ಇನ್ನು ನೀವು ಮಾನಸಿಕ ಶಾಂತಿಯನ್ನು ಕಳೆದುಕೊಂಡಿದ್ದರೂ , ಉಪ್ಪು ಸಹಾಯ ಮಾಡುತ್ತದೆ. ಇದಕ್ಕಾಗಿ, ನಿಮ್ಮ ಸ್ನಾನದ ನೀರಿಗೆ ಒಂದು ಚಿಟಿಕೆ ಉಪ್ಪು ಸೇರಿಸಿ ಮತ್ತು ಸ್ನಾನ ಮಾಡಿ. ರಾತ್ರಿ ಮಲಗುವ ಮುನ್ನ ಕೈ ಕಾಲುಗಳನ್ನು ಉಪ್ಪು ನೀರಿನಿಂದ ತೊಳೆಯಬಹುದು. ಹೀಗೆ ಮಾಡುವುದರಿಂದ, ಒತ್ತಡ ನಿವಾರಣೆಯಾಗುತ್ತದೆ ಮತ್ತು ನಿಮಗೆ ಉತ್ತಮ ನಿದ್ರೆ ಬರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News