ನವದೆಹಲಿ: Relationship Tips In Kannada - ನಿಮ್ಮ ಸಂಗಾತಿಯೊಂದಿಗೆ ನೀವು ನಿಮ್ಮ  ದಿನವನ್ನು ಸುಂದರವಾದ ಮನಸ್ಥಿತಿಯೊಂದಿಗೆ ಪ್ರಾರಂಭಿಸಿದರೆ, ನಿಮ್ಮ ಇಡೀ ದಿನವು ತುಂಬಾ ಅದ್ಭುತ ಮತ್ತು ಧನಾತ್ಮಕವಾಗಿರುತ್ತದೆ. ದಂಪತಿಗಳಿಗೆ ಬೆಳಗಿನ ಸಮಯ ತುಂಬಾ ರೋಮ್ಯಾಂಟಿಕ್ ಆಗಿರುತ್ತದೆ. ಹೀಗಿರುವಾಗ ನೀವು ಮಾರ್ನಿಂಗ್ ಕಿಸ್ ಮತ್ತು ಹಗ್ ಮಾಡುವಿಕೆಯ ಮೂಲಕ ನಿಮ್ಮ ಸಂಗಾತಿಯನ್ನು (Romantic Couple) ಸಂತೋಷಪಡಿಸಲು ಪ್ರಯತ್ನಿಸಬೇಕು. ಏಕೆಂದರೆ ಇಂತಹ ಸಣ್ಣ ವಿಷಯಗಳು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ಹಾಗಾದರೆ ಬನ್ನಿ ಇಂತಹ ಯಾವ ಯಾವ ಮತ್ತು ಸಣ್ಣ-ಸಣ್ಣ ಸಲಹೆಗಳ (Relationship Advice) ಮೂಲಕ ಸಂಗಾತಿಯ ಜೊತೆಗಿನ ಸಂಬಂಧವನ್ನು ನಾವು ಗಟ್ಟಿಗೊಳಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. 


COMMERCIAL BREAK
SCROLL TO CONTINUE READING

'ಮಾರ್ನಿಂಗ್ ಕಿಸ್' ನೊಂದಿಗೆ ದಿನ ಆರಂಭಿಸಿ
ಬೆಳಗ್ಗೆ ಮೊದಲನೆಯದಾಗಿ ನೀವು ನಿಮ್ಮ ಸಂಗಾತಿಗೆ ಉತ್ತಮವಾದ ನಗುವಿನೊಂದಿಗೆ ಶುಭೋದಯವನ್ನು ಕೋರಬೇಕು. ಸಾಧ್ಯವಾದರೆ, ಬೆಳಗ್ಗೆ ನಿಮ್ಮ ಸಂಗತಿಗೆ ಒಂದು ಸುಂದರವಾದ ಮುತ್ತನ್ನು ನೀಡಿ. ಏಕೆಂದರೆ ಅದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಇದರೊಂದಿಗೆ, ನಿಮ್ಮ ಇಡೀ ದಿನ ಧನಾತ್ಮಕವಾಗಿರುತ್ತದೆ.


ಪ್ರಶಂಸೆ ವ್ಯಕ್ತಪಡಿಸಿ
ಇದರ ಹೊರತಾಗಿ, ನೀವು ಬೆಳಗ್ಗೆ ನಿಮ್ಮ ಸಂಗಾತಿಯನ್ನು ಹೊಗಳಿದರೆ, ಅದು ಅವನ ಅಥವಾ ಅವಳ ಆತ್ಮವಿಶ್ವಾಸ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ. ನೀವು ಇದನ್ನು ಮಾಡಿದರೆ ಅವರ ದಿನವು ತುಂಬಾ ಚೆನ್ನಾಗಿ ಆರಂಭವಾಗುತ್ತದೆ. ಇದರೊಂದಿಗೆ ದಿನವಿಡೀ ಉತ್ಸಾಹದಿಂದ ತನ್ನ ಕೆಲಸವನ್ನು ಅವರು ನಿರ್ವಹಿಸುತ್ತಾರೆ. ನೀವು ಅವರ ಕೆಲಸ, ಅವರ ಕಠಿಣ ಪರಿಶ್ರಮ, ಅವರ ನೋಟ ಅಥವಾ ವ್ಯಕ್ತಿತ್ವದ ಬಗ್ಗೆ ಪ್ರಶಂಸೆಯಲ್ಲಿ ಮಾತನಾಡಬಹುದು. ಅವರನ್ನು ಹೊಗಳುವ ಮೂಲಕ, ನೀವು ಅವರ ಸಾಮರ್ಥ್ಯಗಳಲ್ಲಿ ನಂಬಿಕೆ ಇಡಬೇಕು ಮತ್ತು ದಿನವನ್ನು ಚೆನ್ನಾಗಿ ಪ್ರಾರಂಭಿಸಬೇಕು. ಇದರಿಂದ ಅವರಿಗೆ ಒಳ್ಳೆಯ ದಿನ ಸಿಗುತ್ತದೆ.


ಇದನ್ನೂ ಓದಿ-Turquoise Benefits : ಪ್ರೀತಿ, ಮದುವೆ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ನೀಡುತ್ತದೆ ಈ 'ರತ್ನ' : ಈ ರೀತಿ ಧರಿಸಿ!


ಒಟ್ಟಿಗೆ ಉಪಹಾರ ಮಾಡಿ ಪ್ರೀತಿ ಹೆಚ್ಚಾಗುತ್ತದೆ
ನಿಮ್ಮ ಸಂಗಾತಿಯೊಂದಿಗೆ ನೀವು ಸೇರಿ ಬೆಳಗಿನ ಉಪಹಾರವನ್ನು ಸಿದ್ಧಪಡಿಸಿ. ಏಕೆಂದರೆ ಒಟ್ಟಿಗೆ ಉಪಹಾರ ತಯಾರಿಸುವುದು ಹೆಚ್ಚು ಮೋಜಿನ ಸಂಗತಿಯಾಗಿದೆ. ಅಡುಗೆಮನೆಯಲ್ಲಿ ರೊಮ್ಯಾಂಟಿಕ್ ಮೂಡ್‌ನಲ್ಲಿ ನಿಮ್ಮ ಸಂಗಾತಿಯೊಂದಿಗೆ ಚಹಾ ಮತ್ತು ತಿಂಡಿಗಳನ್ನು ತಯಾರಿಸಿ. ಇದು ನಿಮಗೆ ಪರಸ್ಪರ ಸ್ವಲ್ಪ ಹೆಚ್ಚು ಸಮಯ ಕಳೆಯಲು ಅವಕಾಶ ನೀಡುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ನಡುವೆ ಪ್ರೀತಿ ಹೆಚ್ಚುತ್ತದೆ ಮತ್ತು ಮನೆಯ ಕೆಲಸವೂ ಆಗುತ್ತದೆ. ಒಟ್ಟಿಗೆ ಕುಳಿತು ಉಪಹಾರ ಸೇವಿಸಿ. ಆದರೆ, ಈ ಎಲ್ಲದಕ್ಕೂ ನಿಮಗೆ ಸಮಯವಿಲ್ಲದಿರಬಹುದು, ಹೀಗಾಗಿ ಈ ಅದ್ಭುತ ಕ್ಷಣಗಳನ್ನು ನಿಮ್ಮ ದಾಂಪತ್ಯ ಜೀವನದಲ್ಲಿ ಅಳವಡಿಸಲು ನೀವು  ಬೆಳಗ್ಗೆ ಸ್ವಲ್ಪ ಬೇಗನೆ ಏಳಬಹುದು.


ಇದನ್ನೂ ಓದಿ-ಮನೆಯಲ್ಲಿ ಬರುವ ಇಲಿಗಳು ಶುಭ-ಅಶುಭ ಸೂಚನೆ ನೀಡುತ್ತವೆ.. ಹೇಗೆ ಗೊತ್ತೆ?


ಕೆಲಸದ ಒತ್ತಡದಲ್ಲಿ ನಗುವುದನ್ನು ಮರೆಯಬೇಡಿ, ದಿನವನ್ನು ವಿನೋದದಿಂದ ಪ್ರಾರಂಭಿಸಿ
ನಾವು ದಿನದ ಕೆಲಸದಲ್ಲಿ ನಿರತರಾಗಿದ್ದಾಗ, ನಾವು ನಗುವುದನ್ನು ಮರೆತುಬಿಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ, ದಿನವನ್ನು ವಿನೋದದಿಂದ ಪ್ರಾರಂಭಿಸಿ. ನೀವು ಬೆಳಗ್ಗೆ ಮುಕ್ತವಾಗಿ ನಗುತ್ತಿದ್ದರೆ, ನಿಮ್ಮ ಇಡೀ ದಿನವು ಉತ್ತಮವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿಗೆ ಜೋಕ್‌ಗಳನ್ನು ಹೇಳುವ ಮೂಲಕ ಅಥವಾ ಅವರೊಂದಿಗೆ ಮೋಜು ಮಾಡುವ ಮೂಲಕ ನಿಮ್ಮ ಮುಂಜಾವಿನಲ್ಲಿ ಸಂತೋಷ ಮತ್ತು ತಾಜಾತನವನ್ನು ತುಂಬಬಹುದು. ಹೀಗೆ ಮಾಡುವುದರಿಂದ ನೀವು ದಿನವಿಡೀ ಧನಾತ್ಮಕವಾಗಿರುತ್ತೀರಿ ಮತ್ತು ಮಹತ್ವದ ವಿಷಯವೆಂದರೆ ನೀವು ದಿನವಿಡೀ ನಗುತ್ತಲೇ ಇರುವಿರಿ.


ಇದನ್ನೂ ಓದಿ-Vastu Tips: ಮನೆಯ ಉತ್ತರ ದಿಕ್ಕಿನಲ್ಲಿ ಈ 3 ವಸ್ತುಗಳನ್ನು ಇರಿಸಿ, ಸಂಪತ್ತು ಹರಿದುಬರಲಿದೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.