Vastu Tips: ಮನೆಯ ಉತ್ತರ ದಿಕ್ಕಿನಲ್ಲಿ ಈ 3 ವಸ್ತುಗಳನ್ನು ಇರಿಸಿ, ಸಂಪತ್ತು ಹರಿದುಬರಲಿದೆ!

ಉತ್ತರ ದಿಕ್ಕು ಸಂಪತ್ತಿನ ದೇವರಾದ ಕುಬೇರನ ದಿಕ್ಕು. ಮನೆಯ ಈ ದಿಕ್ಕಿಗೆ ಸಂಬಂಧಿಸಿದಂತೆ ಕೆಲವು ವಾಸ್ತುಸಲಹೆಗಳನ್ನು ಪಾಲಿಸಿದರೆ ಸುಖ-ಸಂಪತ್ತು, ಸಂತೋಷಮಯ ಜೀವನ ನಿಮ್ಮದಾಗುತ್ತದೆ.

Written by - Puttaraj K Alur | Last Updated : Jan 16, 2022, 09:05 AM IST
  • ಮನೆಯ ಮುಖ್ಯ ದ್ವಾರವು ಉತ್ತರ ದಿಕ್ಕಿನಲ್ಲಿರುವುದು ತುಂಬಾ ಶುಭಕರವೆಂದು ನಂಬಲಾಗಿದೆ
  • ಉತ್ತರ ದಿಕ್ಕಿನಲ್ಲಿ ಅಡುಗೆ ಮನೆ ಇದ್ದರೆ ಹಣ ಮತ್ತು ಧಾನ್ಯಗಳ ದಾಸ್ತಾನು ತುಂಬಿರುತ್ತದೆ
  • ಕುಬೇರನ ಪ್ರತಿಮೆ ಅಥವಾ ಫೋಟೋವನ್ನು ಉತ್ತರದಲ್ಲಿ ಇರಿಸಿದರೆ ವೃತ್ತಿಯಲ್ಲಿ ಸಾಕಷ್ಟು ಪ್ರಗತಿಯಾಗಲಿದೆ
Vastu Tips: ಮನೆಯ ಉತ್ತರ ದಿಕ್ಕಿನಲ್ಲಿ ಈ 3 ವಸ್ತುಗಳನ್ನು ಇರಿಸಿ, ಸಂಪತ್ತು ಹರಿದುಬರಲಿದೆ! title=
ಈ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇರಿಸಿ

ನವದೆಹಲಿ: ವಾಸ್ತು ಶಾಸ್ತ್ರ(Vastu Tips)ವು ಪ್ರಗತಿ, ಹಣ, ಆರೋಗ್ಯ, ವ್ಯಕ್ತಿತ್ವ ಮತ್ತು ಗೌರವದಂತಹ ಪ್ರತಿಯೊಂದು ಅಂಶದ ಮೇಲೆ ಪರಿಣಾಮ ಬೀರುತ್ತದೆ. ಮನೆಯ ವಾಸ್ತುವಿನಲ್ಲಿ ತೊಂದರೆಯಾದರೆ ಅನಾವಶ್ಯಕ ನಷ್ಟ ಅನುಭವಿಸಬೇಕಾಗುತ್ತದೆ. ಮತ್ತೊಂದೆಡೆ ಸರಿಯಾದ ವಾಸ್ತು ಅದೃಷ್ಟವನ್ನು ಹೆಚ್ಚಿಸುವ ಮೂಲಕ ಪ್ರತಿಯೊಂದು ಕೆಲಸ ಸುಲಭವಾಗುತ್ತದೆ.  ವಾಸ್ತು ಶಾಸ್ತ್ರ(Vastu Shastra)ದ ಪ್ರಕಾರ ನೀವು ನಿಮ್ಮ ಜೀವನದುದ್ದಕ್ಕೂ ಲಕ್ಷ್ಮಿ ದೇವಿಯ ಆಶೀರ್ವಾದ ಬಯಸಿದರೆ, ತುಂಬಾ ಶ್ರೀಮಂತರಾಗ ಬಯಸಿದರೆ ಮನೆಯ ಉತ್ತರ ದಿಕ್ಕಿನಲ್ಲಿ ಕೆಲವು ವಿಶೇಷ ವಸ್ತುಗಳನ್ನು ಹೊಂದುವುದು ಅವಶ್ಯಕ. ಈ ರೀತಿ ಮಾಡಿದಾಗ ಮನೆಯಲ್ಲಿ ಯಾವುದೇ ಹಣದ ಕೊರತೆ ಇರುವುದಿಲ್ಲ ಮತ್ತು ಈ ಜನರು ಯಾವಾಗಲೂ ಸಂತೋಷದ ಜೀವನವನ್ನು ನಡೆಸುತ್ತಾರೆ.

ಕುಬೇರನ ದಿಕ್ಕು ಉತ್ತರ

ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕನ್ನು ಸಂಪತ್ತಿನ ದೇವರಾದ ಕುಬೇರನ ದಿಕ್ಕು(House's North Direction) ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮನೆಯ ಈ ಭಾಗದಲ್ಲಿ ಬಹಳ ಮುಖ್ಯವಾದ ವಸ್ತುಗಳು ಮಾತ್ರ ಇರಬೇಕು ಮತ್ತು ಇಲ್ಲಿ ಯಾವುದೇ ಅನಗತ್ಯ ವಸ್ತುಗಳು ಇರಬಾರದು. ಇಲ್ಲದಿದ್ದರೆ ಆರ್ಥಿಕ ಬಿಕ್ಕಟ್ಟು ಕೊನೆಗೊಳ್ಳುವುದಿಲ್ಲ.

ಇದನ್ನೂ ಓದಿ: Morning Tips : ಬೆಳಿಗ್ಗೆ ಎದ್ದ ನಂತರ ಮರೆತು ನೋಡಬೇಡಿ ಈ ವಸ್ತುಗಳನ್ನ! ಇಲ್ಲದಿದ್ದರೆ ತಪ್ಪಿದಲ್ಲ ಸಮಸ್ಯೆ

ಈ ವಸ್ತುಗಳು ಉತ್ತರ ದಿಕ್ಕಿನಲ್ಲಿರಬೇಕು

  • ಮನೆಯ ಮುಖ್ಯ ದ್ವಾರ ಉತ್ತರ ದಿಕ್ಕಿನಲ್ಲಿರುವುದು ತುಂಬಾ ಶುಭ. ಹೀಗೆ ಮಾಡುವುದರಿಂದ ಮನೆಯಲ್ಲಿ ಸದಾ ಸುಖ, ಸಮೃದ್ಧಿ ಮತ್ತು ಸಕಾರಾತ್ಮಕತೆ ಇರುತ್ತದೆ. ತಾಯಿ ಲಕ್ಷ್ಮಿದೇವಿ(Goddess Lakshmi)ಯ ಕೃಪೆಯಿಂದ ಇಂತವರ ಮನೆಯಲ್ಲಿ ಯಾವಾಗಲೂ ಸಂಪತ್ತು ತುಂಬಿ ತುಳುಕುತ್ತಿರುತ್ತದೆ.
  • ಸಂಪತ್ತಿನ ದೇವರಾದ ಕುಬೇರನ ಪ್ರತಿಮೆ ಅಥವಾ ಫೋಟೋವನ್ನು ಉತ್ತರದಲ್ಲಿ ಇರಿಸಿದರೆ ವೃತ್ತಿಯಲ್ಲಿ ಸಾಕಷ್ಟು ಪ್ರಗತಿ ಕಂಡುಬರುತ್ತದೆ.   
  • ಉತ್ತರ ದಿಕ್ಕಿನಲ್ಲಿ ಅಡುಗೆ ಮನೆ ಇದ್ದರೆ ಹಣ ಮತ್ತು ಧಾನ್ಯಗಳ ದಾಸ್ತಾನು ತುಂಬಿರುತ್ತದೆ. ಮನೆಯಲ್ಲಿ ತಾಯಿ ಅನ್ನಪೂರ್ಣೆಯ ಕೃಪೆ ಸದಾ ಇರುತ್ತದೆ.
  • ಮನೆಯ ಉತ್ತರ ದಿಕ್ಕಿನಲ್ಲಿ ಯಾವುದೇ ಭಾರವಾದ ವಸ್ತುಗಳನ್ನು ಇಡಬೇಡಿ ಅಥವಾ ಗೋಡೆಗಳ ಮೇಲೆ ಬಿರುಕು ಬಿಡಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಯಶಸ್ಸಿನ ಹಾದಿ ಬಂದ್ ಆಗುತ್ತದೆ ಮತ್ತು ಹಣದ ನಷ್ಟವೂ ಉಂಟಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ನೆನಪಿಡಬೇಕು.

ಇದನ್ನೂ ಓದಿ: Vastu Tips Related To Parijat: ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿದ್ದೀರಾ? ಮನೆಯಲ್ಲಿರಲಿ ಈ ವಿಶೇಷ ಗಿಡ

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News