ನವದೆಹಲಿ: ಗುರುವಾರ ದೇವಗುರು ಬೃಹಸ್ಪತಿ ಮತ್ತು ಭಗವಾನ್ ಶ್ರೀ ಹರಿಗೆ ಸಮರ್ಪಿತವಾಗಿದೆ. ವ್ಯಕ್ತಿಯ ಜಾತಕದಲ್ಲಿ ಗುರುದೋಷವಿದ್ದರೆ ಆ ವ್ಯಕ್ತಿ ಗುರುವಾರದಂದು ಶ್ರೀ ಹರಿಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿದರೆ ದೇವರು ಪ್ರಸನ್ನನಾಗಿ ಆತನ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬ ನಂಬಿಕೆ ಇದೆ. ಈ ದಿನ ಮಾಡುವ ಉಪವಾಸವು ವ್ಯಕ್ತಿಯ ಎಲ್ಲಾ ಸಮಸ್ಯೆಗಳನ್ನು ದೂರವಾಗುತ್ತವೆ ಮತ್ತು ಮನೆ ಸಂಪತ್ತಿನಿಂದ ತುಂಬಿರುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಈ ದಿನ ಮಹಾವಿಷ್ಣುವಿನ ಪೂಜೆಯ ಜೊತೆಗೆ ಲಕ್ಷ್ಮಿ ದೇವಿಯನ್ನು ಪೂಜಿಸುವ ನಿಯಮವೂ ಇದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯದಲ್ಲಿ ಪೂಜೆಯ ನಂತರ ಮಂತ್ರಗಳ ಪಠಣಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ದೇವರನ್ನು ಮೆಚ್ಚಿಸಲು ಮತ್ತು ಶುಭ ಫಲಿತಾಂಶಗಳನ್ನು ಪಡೆಯಲು ಮಂತ್ರವನ್ನು ಪಠಿಸಬೇಕು ಎಂದು ಹೇಳಲಾಗುತ್ತದೆ. ಮಂತ್ರಗಳ ಪಠಣವೂ ಬಹಳ ಶಕ್ತಿಯುತವಾಗಿದೆ. ಭಗವಾನ್ ವಿಷ್ಣುವಿನ ಈ ಅದ್ಭುತ ಮಂತ್ರಗಳ ಪಠಣವು ವ್ಯಕ್ತಿಯ ಪ್ರತಿಯೊಂದು ಈಡೇರದ ಬಯಕೆಯನ್ನು ಶೀಘ್ರವೇ ಪೂರೈಸುತ್ತದೆ.


ಇದನ್ನೂ ಓದಿ: Dream Meaning : ಈ ರೀತಿಯ ಕನಸುಗಳು ವ್ಯಕ್ತಿಯ ನಾಶವನ್ನು ಸೂಚಿಸುತ್ತವೆ, ಜಾಗರೂಕರಾಗಿರಿ.!


ಭಗವಾನ್ ಶ್ರೀಹರಿ ವಿಷ್ಣುವಿನ ಪವಿತ್ರ ಮಂತ್ರಗಳು


1) ‘‘ಶ್ರೀಕೃಷ್ಣ ಗೋವಿಂದ ಹರೇ ಮುರಾರೇ|


ಹೇ ನಾಥ ನಾರಾಯಣ ವಾಸುದೇವಾಯ||’’


2) ‘‘ಓಂ ನಾರಾಯಣಾಯ ವಿದ್ಮಹೇ|


ವಾಸುದೇವಾಯ ಧೀಮಹಿ|


ತನ್ನೋ ವಿಷ್ಣು ಪ್ರಚೋದಯಾತ್‌||’’


3) ‘‘ಓಂ ನಮೋ ಭಗವತೇ ವಾಸುದೇವಾಯ’’


4) ಲಕ್ಷ್ಮೀ ವಿನಾಯಕ ಮಂತ್ರ -


‘‘ದಂತಾಭಯೇ ಚಕ್ರ ದರೋ ದಧಾನಂ


ಕರಾಗ್ರಗಸ್ವರ್ಣಘಟಂ ತ್ರಿನೇತ್ರಂ|


ಧೃತಾಬ್ಜಯಾ ಲಿಂಗಿತಂಬ್ದಿಪುತ್ರಾಯ


ಲಕ್ಷ್ಮಿ ಗಣೇಶಂ ಕನಕಾಭಮಿಢೇ||’’


5)  ‘‘ಓಂ ವಿಷ್ಣವೇ ನಮಃ’’


6) ‘‘ಓಂ ನಮೋ ನಾರಾಯಣ|


ಶ್ರೀ ಮನ್‌ ನಾರಾಯಣ ನಾರಾಯಣ ಹರಿ ಹರಿ|’’


7) ಸರಳ ಮಂತ್ರಗಳು –


- ‘‘ಓಂ ಅಂ ವಾಸುದೇವಾಯ ನಮಃ’’


- ‘‘ಓಂ ಆಂ ಸಂಕರ್ಷಣಾಯ ನಮಃ’’


- ‘‘ಓಂ ಅಂ ಪ್ರದ್ಯುಮ್ನಾಯ ನಮಃ’’


- ‘‘ಓಂ ಅಃ ಅನಿರುದ್ಧಾಯ ನಮಃ’’


- ‘‘ಓಂ ನಾರಾಯಣಾಯ ನಮಃ’’


8. ಓಂ ವಿಷ್ಣವೇ ನಮಃ:


9. ಸಂಪತ್ತು ಮತ್ತು ಸಮೃದ್ಧಿಯ ಮಂತ್ರ –


‘‘ಓಂ ಭೂರಿದಾ ಭೂರಿ ದೇಹಿನೋ, ಮಾ ದಭ್ರಂ ಭೂರ್ಯಾ ಭರ|


ಭೂರಿ ಘೋದಿಂದ್ರ ದಿಸ್ತಸಿ|


ಓಂ ಭೂರಿದಾ ತ್ಯಸಿ ಶೃತಃ ಪುರುತ್ರಾ ಶೂರ ವೃತ್ರಹನ್‌|


ಆ ನೋ ಭಜಸ್ವ ರಾಧಸಿ|’’


10. ವಿಷ್ಣುವಿನ ಪಂಚರೂಪ ಮಂತ್ರ -


‘‘ಓಂ ಹ್ರೀಂ ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹು ಸಹಸ್ತ್ರವಾನ್‌|


ಯಸ್ಯ ಸ್ಮರೇಣ್‌ ಮಾತ್ರೇಣ ಹೃತಂ ನಷ್ಟಂ ಚ ಲಭ್ಯತೇ||’’


ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ಈ ಮಂತ್ರಗಳನ್ನು ಪ್ರತಿದಿನ ಜಪಿಸಬೇಕು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಇದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಅಪಾರ ಸಂಪತ್ತು ಮತ್ತು ವೈಭವವನ್ನು ನೀವು ಪಡೆಯುತ್ತೀರಿ. ಆದರೆ ಮಂತ್ರವನ್ನು ಪಠಿಸುವಾಗ ಉಚ್ಚಾರಣೆಯು ಸ್ಪಷ್ಟ ಮತ್ತು ಶುದ್ಧವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಆಗ ಮಾತ್ರ ಇದರ ಶುಭ ಫಲ ಸಿಗುತ್ತದೆ.


ಇದನ್ನೂ ಓದಿ: ಹವಳ ಧರಿಸುವುದರಿಂದ ಜೀವನದಲ್ಲಿ ಅದ್ಭುತ ಬದಲಾವಣೆ, ಯಾರಿಗೆ ಲಾಭ ಗೊತ್ತಾ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ