ವಿವಾಹಕ್ಕೂ ಮುನ್ನ ಈ ಕಾರಣಕ್ಕಾಗಿ ಅರಶಿನ ಶಾಸ್ತ್ರ ಮಾಡಲಾಗುತ್ತದೆ ! ಧರ್ಮ, ವಿಜ್ಞಾನಗಳೆರಡರಲ್ಲೂ ಇದೆ ಮಹತ್ವ
ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿರುವ ಪ್ರತಿಯೊಂದು ಶಾಸ್ತ್ರ ಸಂಪ್ರದಾಯಗಳ ಹಿಂದೆಯೂ ಒಂದು ಕಾರಣವಿದೆ. ಹಿಂದೂ ಧರ್ಮದಲ್ಲಿ, ಮದುವೆಗೂ ಮುನ್ನ ಅರಿಶಿನ ಶಾಸ್ತ್ರವನ್ನು ನಡೆಸಲಾಗುತ್ತದೆ. ಇದರ ಹಿಂದೆ ಧಾರ್ಮಿಕ ಮಾತ್ರವಲ್ಲದೆ ವೈಜ್ಞಾನಿಕ ಕಾರಣಗಳೂ ಅಡಗಿವೆ.
ಬೆಂಗಳೂರು : ಮದುವೆ ಅನ್ನುವುದು ಒಂದು ದಿನದ ಆಟವಲ್ಲ. ಮದುವೆಯ ದಿನಕ್ಕೂ ಮುನ್ನ ಅನೇಕ ಶಾಸ್ತ್ರ ಸಂಪ್ರದಾಯಗಳನ್ನು ನೆರವೇರಿಸಲಾಗುತ್ತದೆ. ಅಲ್ಲಿ ಒಂದು ಸಂಸ್ಕೃತಿಯೇ ಮೇಳೈಸುತ್ತದೆ. ಸಮಾಜಕ್ಕೆ ಅನುಗುಣವಾಗಿ ಮದುವೆಯ ಸಂಪ್ರದಾಯಗಳು ಭಿನ್ನವಾಗಿರುತ್ತವೆ. ಆ ಸಂಪ್ರದಾಯಕ್ಕೆ ಅನುಗುಣವಾಗಿ ವಿವಾಹ ನಡೆಯುತ್ತದೆ. ಹಿಂದೂ ಧರ್ಮದಲ್ಲೂ ಮದುವೆಗೆ ಮುನ್ನ ಅನೇಕ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಕೆಲವೊಮ್ಮೆ ಈ ಸಂಪ್ರದಾಯಗಳಿಗೆ ಅರ್ಥವಿಲ್ಲ, ಇದು ಕೇವಲ ಆಡಂಬರ ಎನ್ನುವ ಮಾತು ಕೆಲವರ ಬಾಯಿಯಲ್ಲಿ ಬರುತ್ತದೆ. ಅವರ ಯೋಚನೆಯ ಅನುಗುಣವಾಗಿ ಅದು ಅವರಿಗೆ ಸರಿ ಎನ್ನಿಸಬಹುದು. ಆದರೆ ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿರುವ ಪ್ರತಿಯೊಂದು ಶಾಸ್ತ್ರ ಸಂಪ್ರದಾಯಗಳ ಹಿಂದೆಯೂ ಒಂದು ಕಾರಣವಿದೆ.
ಹಿಂದೂ ಧರ್ಮದಲ್ಲಿ, ಮದುವೆಗೂ ಮುನ್ನ ಅರಿಶಿನ ಶಾಸ್ತ್ರವನ್ನು ನಡೆಸಲಾಗುತ್ತದೆ. ಈ ಶಾಸ್ತ್ರವನ್ನು ಪಾಲಿಸುವುದು ಅಗತ್ಯವಾಗಿರುತ್ತ ದೆ. ಏಕೆಂದರೆ ಇದರ ಹಿಂದೆ ಧಾರ್ಮಿಕ ಮಾತ್ರವಲ್ಲದೆ ವೈಜ್ಞಾನಿಕ ಕಾರಣಗಳೂ ಅಡಗಿವೆ.
ಇದನ್ನೂ ಓದಿ : Love Relationship: ವರ್ಷದ ಯಾವ ತಿಂಗಳಿನಲ್ಲಿ ಮಹಿಳಾ-ಪುರುಷರು ಪ್ರೀತಿಯಲ್ಲಿ ಹೆಚ್ಚು ಮೋಸ ಹೋಗುತ್ತಾರೆ ಗೊತ್ತಾ?
ಅರಿಶಿನ ಶಾಸ್ತ್ರವನ್ನು ಏಕೆ ಮಾಡಲಾಗುತ್ತದೆ ? :
ಹಿಂದೂ ಧರ್ಮದಲ್ಲಿ, ಮದುವೆಯ ಮೊದಲು, ವಧು ಮತ್ತು ವರನಿಗೆ ಅರಿಶಿನ ಹಚ್ಚುವ ಶಾಸ್ತ್ರ ನಡೆಯುತ್ತದೆ. ಹಿಂದೂ ಧರ್ಮದಲ್ಲಿ ಯಾವುದೇ ಮಂಗಳಕರ ಕೆಲಸದಲ್ಲಿ ಅರಿಶಿನಕ್ಕೆ ವಿಶೇಷ ಮಹತ್ವವಿದೆ. ಅರಶಿನ ಅಪೇಕ್ಷಿತ ಫಲಿತಾಂಶವನ್ನು ನೀಡುತ್ತದೆ ಎನ್ನಲಾಗಿದೆ. ಅರಿಶಿನ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಿ ಧನಾತ್ಮಕ ಶಕ್ತಿಯು ನಮ್ಮ ಸುತ್ತಲೂ ಹರಡುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಹಳದಿ ಬಣ್ಣವನ್ನು ಮದುವೆಯ ಸಮಯದಲ್ಲಿ ಸಮೃದ್ಧಿ ಮತ್ತು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಪದ್ಧತಿಯಿಂದ, ವಧು ಮತ್ತು ವರನ ಭವಿಷ್ಯದ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಮದುವೆ ಆಮಂತ್ರಣ ಪತ್ರಿಕೆಗೂ ಅರಿಶಿನವನ್ನು ಹಚ್ಚಲಾಗುತ್ತದೆ. ವಿಶೇಷವಾಗಿ ಹಳದಿ ಬಣ್ಣವು ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ. ಆದ್ದರಿಂದ ವಿಷ್ಣು ಆಶೀರ್ವಾದವನ್ನು ಪಡೆಯಲು ಅರಿಶಿನವನ್ನು ಹಚ್ಚಲಾಗುತ್ತದೆ.
ಅರಶಿನ ಶಾಸ್ತ್ರದ ಹಿಂದಿದೆ ವೈಜ್ಞಾನಿಕ ಕಾರಣ :
ಅರಿಶಿನ ಶಾಸ್ತ್ರ ಮಾಡುವಾಗ ಮೈ ತುಂಬಾ ಅರಶಿನ ಹಚ್ಚಲಾಗುತ್ತದೆ. ವಧು-ವರರ ಮುಖ ಮತ್ತು ದೇಹದ ಮೇಲೆ ಅರಿಶಿನವನ್ನು ಹಚ್ಚಿದಾಗ ಅದು ಚರ್ಮದ ಟೋನ್ ಅನ್ನು ಸುಧಾರಿಸುತ್ತದೆ ಮತ್ತು ದೇಹವನ್ನು ನಿರ್ವಿಷಗೊಳಿಸುತ್ತದೆ ಎನ್ನುವುದು ಈ ಶಾಸ್ತ್ರದ ಹಿಂದಿರುವ ವೈಜ್ಞಾನಿಕ ಕಾರಣ. ಇದರ ಹೊರತಾಗಿ ಹಿಂದಿನ ಕಾಲದಲ್ಲಿ ಬ್ಯೂಟಿ ಪಾರ್ಲರ್‌ಗಳು ಇರಲಿಲ್ಲ. ಇದರಿಂದಾಗಿ ವಧು-ವರರ ಮುಖದ ಅಂದವನ್ನು ಹೆಚ್ಚಿಸಲು ಅರಿಶಿನವನ್ನು ಬಳಸಲಾಗುತ್ತಿತ್ತು. ಅರಿಶಿನವು ನಂಜುನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಚರ್ಮದ ಮೇಲಿನ ಸೋಂಕನ್ನು ಸಹ ತೆಗೆದುಹಾಕುತ್ತದೆ. ಹಲವಾರು ದಿನಗಳವರೆಗೆ ಅರಿಶಿನವನ್ನು ಹಚ್ಚುವುದರಿಂದ ಮದುವೆಯ ದಿನದಂದು ಮುಖವು ಫಳ ಫಳನೆ ಹೊಳೆಯಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ : Navratna Ring: ಚಮತ್ಕಾರಿ ಫಲಿತಾಂಶ ಕೊಡುತ್ತೇ ಈ ಉಂಗುರ, ಧರಿಸುತ್ತಲೆ ನೀಡುತ್ತೇ ಅಪಾರ ಧನ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.