Navratna Ring: ಚಮತ್ಕಾರಿ ಫಲಿತಾಂಶ ಕೊಡುತ್ತೇ ಈ ಉಂಗುರ, ಧರಿಸುತ್ತಲೆ ನೀಡುತ್ತೇ ಅಪಾರ ಧನ!

Benefits Of Navratna Ring: ನವರತ್ನ ಉಂಗುರವನ್ನು ಧರಿಸುವುದರಿಂದ  ಹಲವು ಅದ್ಭುತ ಲಾಭಗಳು ಸಿಗುತ್ತವೆ, ಆದರೆ, ಇದಕ್ಕಾಗಿ ಈ ಉಂಗುರವನ್ನು ಧರಿಸುವ ಸರಿಯಾದ ನಿಯಮ-ನಿಬಂಧನೆಗಳು ನೀವು ತಿಳಿದಿರುವುದು ತುಂಬಾ ಮುಖ್ಯ, ಬನ್ನಿ ಹಾಗಾದರೆ ಈ ಉಂಗುರದ ಮಹತ್ವ ಮತ್ತು ಅದನ್ನು ಧರಿಸುವಾಗ ಪಾಲಿಸಬೇಕಾದ ನಿಯಮ ನಿಬಂಧನೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : May 1, 2023, 04:41 PM IST
  • ರತ್ನ ಶಾಸ್ತ್ರದ ಪ್ರಕಾರ, ನವರತ್ನ ಉಂಗುರದಲ್ಲಿ ಎಲ್ಲಾ 9 ರತ್ನಗಳು ಸಮಾನ ತೂಕವನ್ನು ಹೊಂದಿರಬೇಕು ಎಂಬ ನಿಯಮವಿದೆ.
  • ರತ್ನಗಳ ತೂಕದಲ್ಲಿನ ವ್ಯತ್ಯಾಸವು ಆಯಾ ಗ್ರಹದ ಪ್ರಭಾವದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
  • ಇದಲ್ಲದೆ ನವರತ್ನದ ಉಂಗುರವನ್ನು ಧರಿಸಲು ಯಾವುದೇ ತಿಂಗಳ ಶುಕ್ಲ ಪಕ್ಷದ ಶುಕ್ರವಾರ ಅಥವಾ ಭಾನುವಾರದಂದು ಸರಿಯಾದ ದಿನವಾಗಿದೆ.
Navratna Ring: ಚಮತ್ಕಾರಿ ಫಲಿತಾಂಶ ಕೊಡುತ್ತೇ ಈ ಉಂಗುರ, ಧರಿಸುತ್ತಲೆ ನೀಡುತ್ತೇ ಅಪಾರ ಧನ! title=
ನವರತ್ನ ಉಂಗುರ ಧರಿಸುವುದರಿಂದಾಗುವ ಲಾಭಗಳು!

Benefits Of Navratna Ring:  ವೈದಿಕ ಜೋತಿಷ್ಯ ಶಾಸ್ತ್ರದ ಶಾಖೆಯಾಗಿರುವ ರತ್ನ ಶಾಸ್ತ್ರದಲ್ಲಿ, ಜಾತಕದಲ್ಲಿ ಗ್ರಹಗಳ ಪ್ರಭಾವವನ್ನು ಸಮತೋಲನದಲ್ಲಿಡಲು ಹಲವು ಪರಿಹಾರಗಳನ್ನು ಸೂಚಿಸಲಾಗಿದೆ . ಪ್ರತಿಯೊಂದು ಗ್ರಹಕ್ಕೆ ಸಂಬಂಧಿಸಿದ ಒಂದು ಅಥವಾ ಕೆಲವು ರತ್ನಗಳನ್ನು ಸೂಚಿಸಲಾಗಿದೆ. ಅಷ್ಟೇ ಅಲ್ಲ,  ಆ ರತ್ನವನ್ನು ಧರಿಸುವುದರಿಂದ, ಜಾತಕದಲ್ಲಿನ ಗ್ರಹಗಳ ಸ್ಥಾನಕ್ಕೆ ಶಕ್ತಿ ಸಿಗುತ್ತದೆ ಮತ್ತು ಅದು ಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತದೆ. ಇದರೊಂದಿಗೆ, ಗ್ರಹಗಳ ಅಶುಭ ಪರಿಣಾಮಗಳನ್ನು ತೊಡೆದುಹಾಕಲು ರತ್ನಗಳನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಇಂದು ನಾವು ನವರತ್ನ ಉಂಗುರದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ನವಗ್ರಹ ದೋಷ ನಿವಾರಣೆಯ ಜೊತೆಗೆ, ಇದು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದರೆ ನವರತ್ನ ಉಂಗುರವನ್ನು ಧರಿಸುವುದರ ಸಂಪೂರ್ಣ ಪ್ರಯೋಜನವನ್ನು ಪಡೆಯಲು, ಅದನ್ನು ಸರಿಯಾದ ರೀತಿಯಲ್ಲಿ ಧರಿಸುವುದು ತುಂಬಾ ಮುಖ್ಯ.

ಇದನ್ನೂ ಓದಿ-Lunar Eclipse 2023: 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ಚಂದ್ರ ಗ್ರಹಣದ ದಿನ ಮೇಷ ರಾಶಿಯಲ್ಲಿ 'ಚತುರ್ಗ್ರಹಿ ಯೋಗ' ನಿರ್ಮಾಣ, 3 ರಾಶಿಗಳಿಗೆ ಬಂಬಾಟ್ ಲಾಟರಿ!

ನವರತ್ನ ಉಂಗುರವನ್ನು ಧರಿಸುವುದರಿಂದ ಸಿರಿ ಸಂಪತ್ತು ಸಿಗುತ್ತದೆ. ವ್ಯಕ್ತಿಯ ಆದಾಯ ಹೆಚ್ಚಾಗುತ್ತದೆ ಮತ್ತು ಆತನ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಆದರೆ ಅದನ್ನು ಜೋತಿಷ್ಯ ತಜ್ಞರ ಸಲಹೆಯೊಂದಿಗೆ ಮಾತ್ರ ಧರಿಸಬೇಕು. ರತ್ನ ಶಾಸ್ತ್ರದ ಪ್ರಕಾರ ನವರತ್ನದ ಉಂಗುರವನ್ನು ಚಿನ್ನದಲ್ಲಿ ಧರಿಸುವುದು ಅತ್ಯಂತ ಶುಭಕರವಾದರೂ ಕೂಡ ಕೆಲವೊಮ್ಮೆ ಪರಿಸ್ಥಿತಿಗೆ ಅನುಗುಣವಾಗಿ ನೀವು ಅದನ್ನು ಪಂಚಧಾತುಗಳಲ್ಲಿಯೂ ಕೂಡ ಧರಿಸಬಹುದು. ರತ್ನ ಶಾಸ್ತ್ರದ ಪ್ರಕಾರ ನವಗ್ರಹ ಉಂಗುರವನ್ನು ಧರಿಸುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದು ವ್ಯಕ್ತಿಯ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಉದ್ಯಮಿಗಳ ವ್ಯವಹಾರವು ಹೆಚ್ಚಾಗುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದರೆ ಅವು ದೂರಾಗುತ್ತವೆ. ರಾಜಕೀಯ, ಗ್ಲಾಮರ್, ಕಲಾ ಕ್ಷೇತ್ರದೊಂದಿಗೆ ನಂಟು ಹೊಂದಿರುವ ನವರತ್ನ ಉಂಗುರ ಧರಿಸಿದರೆ ಸಾಕಷ್ಟು ಲಾಭ ಪಡೆಯಬಹುದು.

ಇದನ್ನೂ ಓದಿ-Budh Uday 2023: ಮೇಷ ರಾಶಿಯಲ್ಲಿ ಗ್ರಹಗಳ ರಾಜಕುಮಾರ ಬುಧನ ಉದಯ, 3 ರಾಶಿಗಳ ಜನರಿಗೆ ಅಪಾರ ಧನಲಾಭ ಯೋಗ!

ನವರತ್ನ ಉಂಗುರವನ್ನು ಹೇಗೆ ಧರಿಸಬೇಕು
ರತ್ನ ಶಾಸ್ತ್ರದ ಪ್ರಕಾರ, ನವರತ್ನ ಉಂಗುರದಲ್ಲಿ ಎಲ್ಲಾ 9 ರತ್ನಗಳು ಸಮಾನ ತೂಕವನ್ನು ಹೊಂದಿರಬೇಕು ಎಂಬ ನಿಯಮವಿದೆ. ರತ್ನಗಳ ತೂಕದಲ್ಲಿನ ವ್ಯತ್ಯಾಸವು ಆಯಾ ಗ್ರಹದ ಪ್ರಭಾವದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದಲ್ಲದೆ ನವರತ್ನದ ಉಂಗುರವನ್ನು ಧರಿಸಲು ಯಾವುದೇ ತಿಂಗಳ ಶುಕ್ಲ ಪಕ್ಷದ ಶುಕ್ರವಾರ ಅಥವಾ ಭಾನುವಾರದಂದು ಸರಿಯಾದ ದಿನವಾಗಿದೆ. ಶುಭ ಮುಹೂರ್ತವನ್ನು ನೋಡಿ. ನವರತ್ನ ಉಂಗುರವನ್ನು ಧರಿಸಲು ಸರಿಯಾದ ಸಮಯವೆಂದರೆ ಸೂರ್ಯೋದಯದ 1 ಗಂಟೆಯ ನಂತರದ ಸಮಯ ಅದ್ಭುತವಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News