Romantic Messages Promise Day 2023 : ವ್ಯಾಲೆಂಟೈನ್ಸ್ ವೀಕ್ ನ ಐದನೇ ದಿನದಂದು ಪ್ರಾಮಿಸ್ ಡೇ ಆಚರಿಸಲಾಗುತ್ತದೆ. ಇದನ್ನು ಪ್ರತಿ ವರ್ಷ ಫೆಬ್ರವರಿ 11 ರಂದು ಆಚರಿಸಲಾಗುತ್ತದೆ. ಈ ದಿನ, ಜನರು ತಮ್ಮ ಪ್ರೀತಿ ಮತ್ತು ಸಂಬಂಧದ ಕಡೆಗೆ ಬದ್ಧತೆಯನ್ನು ವ್ಯಕ್ತಪಡಿಸುವಾಗ ತಮ್ಮ ಸಂಗಾತಿಗೆ ಭರವಸೆಗಳನ್ನು ನೀಡುತ್ತಾರೆ. ಈ ಹೃದಯಸ್ಪರ್ಶಿ ಸುಂದರ ಸಂದೇಶಗಳ ಮೂಲಕ, ನಿಮ್ಮ ಸಂಗಾತಿಗೆ ನಿಮ್ಮ ಮನಸ್ಸಿನ ನಿವೇದನೆಯನ್ನು ಹೇಳಬಹುದು. 


COMMERCIAL BREAK
SCROLL TO CONTINUE READING

1. ನನ್ನ ಹೃದಯದಿಂದ ನಿನ್ನನ್ನು ಬೇರ್ಪಡಿಸಲು ನಾನು ಎಂದಿಗೂ ಬಿಡುವುದಿಲ್ಲ. ಎಂಥ ಕಷ್ಟದಲ್ಲೂ ನಿನ್ನ ಕೈ ಬಿಡುವವ ನಾನಲ್ಲ. ನಿನ್ನ ಮುದ್ದಾದ ನಗುವನ್ನು ಕಣ್ಣೀರು ಎಂದೂ ಮರೆಮಾಡಲು ನಾನು ಬಿಡುವವನಲ್ಲ. ಬಾ ಗೆಳತಿ ಕೈ ಹಿಡಿದು ಆಗು ನನ್ನ ಬಾಳ ಸಂಗಾತಿ. 
 
2. ನಾನು ನಿಮ್ಮ ಭರವಸೆಯನ್ನು ಎಂದಿಗೂ ಸುಳ್ಳಾಗಿಸುವುದಿಲ್ಲ. ನನ್ನ ಈ ಪುಟ್ಟ ಮನ ಎಂದೆಂದಿಗೂ ನಿನ್ನದೆ. ನನ್ನ ಬಾಳ ಯಾನಕ್ಕೆ ನೀನೇ ನಾವಿಕ. ಪ್ರಾಮಿಸ್ ಡೇ ಶುಭಾಶಯಗಳು


ಇದನ್ನೂ ಓದಿ: Rakhi Sawant: "ನನ್ನ ಬೆತ್ತಲೆ ವಿಡಿಯೋ ಮಾರಾಟ ಮಾಡಿದ್ದಾನೆ" ರಾಖಿ ಸಾವಂತ್​ ಶಾಕಿಂಗ್​ ಹೇಳಿಕೆ


3. ನೀವು ನನ್ನಿಂದ ಬೇರೆಯಾಗಲು ಎಂದಿಗೂ ಬಿಡುವುದಿಲ್ಲ. ಪ್ರತಿದಿನ ಪ್ರೀತಿಯಿಂದ ತುಂಬಿರುತ್ತದೆ. ಪ್ರತಿ ಕ್ಷಣ ಮಧುರವಾಗಿರುತ್ತದೆ. ಪ್ರಾಮಿಸ್ ಡೇ ಶುಭಾಶಯಗಳು 


4. ನಿನ್ನ ಒಲವ ದೋಣಿಯಲ್ಲಿ ಪಯಣಿಸುವ ಯಾತ್ರಿ ನಾನು. ಮುಳುಗಿಸದೇ ದಡ ಸೇರಿಸು ನಿನ್ನೊಂದಿಗಿನ ನನ್ನ ಪಯಣವನು. ಪ್ರಾಮಿಸ್ ಡೇ ಶುಭಾಶಯಗಳು 


5. ನಿನ್ನೆಯ ದುಃಖ ಬೇಡ. ನಾಳೆಯ ಚಿಂತೆ ಬೇಡ. ಇಂದಿನ ದಿನವನ್ನು ನನ್ನೊಂದಿಗೆ ಸಂಭ್ರಮಿಸು. ಪ್ರತಿದಿನ ಪ್ರೇಮದಿನವಾಗಿರಲಿ. ಪ್ರಾಮಿಸ್ ಡೇ ಶುಭಾಶಯಗಳು 


ಇದನ್ನೂ ಓದಿ: Viral News: ಗಂಡನ ಈ ಕೃತ್ಯದಿಂದ ಬೇಸತ್ತ 42 ವರ್ಷದ ಅತ್ತೆ 27ರ ಅಳಿಯನ ಜೊತೆ ಎಸ್ಕೇಪ್!


6. ನಾನು ಬದುಕಿರುವಷ್ಟು ದಿನ ನಿನ್ನನ್ನು ಪ್ರೀತಿಸುತ್ತೇನೆ. ನಾನು ನಿನ್ನೊಂದಿಗೆ ಶಾಶ್ವತವಾಗಿ ಇರುತ್ತೇನೆ


7. ನಿನ್ನ ತಪ್ಪು ನಾ ಒಪ್ಪುವೆ. ನನ್ನ ತಪ್ಪು ನೀ ಅಪ್ಪು. ಹೀಗೆ ಪ್ರೀತಿಸುತ್ತಾ ಕಳೆಯೋಣ ಬರುವವರೆಗೈ ಮುಪ್ಪು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.